ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ಗೆ 50ನೇ ಜನ್ಮದಿನದ ಸಂಭ್ರಮ; ಜೀವನದಲ್ಲಿ ಅರ್ಧ ಶತಕ ಬಾರಿಸಿದ ಸಚಿನ್‌

Mumbai:ಕ್ರಿಕೆಟ್ ದೇವರು,ಮಾಸ್ಟರ್‍ ಬ್ಲಾಸ್ಟರ್‍ (Master Blaster), ಬ್ಯಾಟಿಂಗ್ ದಿಗ್ಗಜ,ಶ್ರೇಷ್ಟ ಆಟಗಾರ, ಲಿಟಲ್ ಮಾಸ್ಟರ್ ಎಂದೇ ಪರಿಗಣಿತರಾಗಿ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್ (Sachin Tendulkar) ಅವರಿಗೆ ಇಂದು (ಏಪ್ರಿಲ್ 24) ತಮ್ಮ 50ನೇ (Sachin Tendulkar birthday celebration) ಜನ್ಮದಿನದ ಸಂಭ್ರಮ.

1973ರ ಏಪ್ರಿಲ್ 24 ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದ ಸಚಿನ್ ತಮ್ಮ 16ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕಗಳನ್ನು ಬಾರಿಸಿರುವ ಸಚಿನ್‌ ಇದೀಗ ತಮ್ಮ ಜೀವನದ ಅರ್ಧ ಶತಕವನ್ನು ಪೂರೈಸಿದ್ದರೆ.

ಸತತವಾಗಿ 24 ವರ್ಷಗಳ ಕಾಲ ಕ್ರಿಕೆಟ್ (Cricket) ಜಗತನ್ನು ಆಳಿದ ಕಿರೀಟ ಇಲ್ಲದ ಮಹಾರಾಜರಾದ ಸಚಿನ್‌ರವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಅಲ್ಲದೆ ಹಾಲಿ-ಮಾಜಿ ಕ್ರಿಕೆಟರ್ಸ್‌ಗಳು,ಅಭಿಮಾನಿಗಳು ಅವರ ಫೋಟೋ (Photo) ಹಂಚಿಕೊಂಡು ಅವರ ಮೇಲಿದ್ದ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

2013ರ ನವೆಂಬರ್‍ 16ರಂದು ವಾಂಖೆಡೆ ಮೈದಾನದಲ್ಲಿ ಕೊನೆಯ ಪಂದ್ಯವನ್ನು ಆಡಿ ತಮ್ಮ ಕ್ರಿಕೆಟ್‌ ಜಗತ್ತಿಗೆ ವಿದಾಯವನ್ನು ಘೋಷಿಸಿದ್ದರು.ವಿಶೇಷತೆ ಏನೆಂದರೆ ಯಾವ ಸ್ಟೇಡಿಯಂನಲ್ಲಿ ಕೊನೆಯ ಪಂದ್ಯವಾಡಿದ್ದರೋ ಅದೇ ವಾಂಖೆಡೆ ಮೈದಾನದಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians)

ತಂಡ ಮತ್ತು ಅಭಿಮಾನಿಗಳ ಜೊತೆ ತಮ್ಮ50ನೇ ವರ್ಷದ ಹುಟ್ಟುಹಬ್ಬವನ್ನು 2 ದಿನದ ಮೊದಲೇ ಕೇಕ್‌ ಕತ್ತರಿಸುವ ಮೂಲಕ ವಿಶೇಷವಾಗಿ (Sachin Tendulkar birthday celebration) ಆಚರಿಸಿದರು.


ಸಚಿನ್ ತೆಂಡೂಲ್ಕರ್‍ರವರು ತಮ್ಮ 50ನೇ ಹುಟ್ಟುಹಬ್ಬವನ್ನು ಈ ಬಾರಿ ತಮ್ಮ ಕುಟುಂಬದವರೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ.

ಪ್ರಸ್ತುತ ಮುಂಬೈನಲ್ಲೇ (Mumbai) ನೆಲೆಸಿರುವ ಇವರು ಪ್ರಸ್ತುತ 2023 ಐಪಿಎಲ್‌ನಲ್ಲಿ ಮುಂಬೈ ತಂಡದ ಮೆಂಟರ್ ಆಗಿದ್ದಾರೆ.

ಇವರ 50ನೇ ಜನ್ಮದಿನ ಸ್ಮರಣೀಯವಾಗಿರಲು ಇವರ ಕುಟುಂಬ ಬಯಸಿದ ಕಾರಣ ಕುಟುಂಬದ ಜೊತೆಗೆ ಗೋವಾಗೆ (Goa) ಬಂದಿಳಿದಿದ್ದಾರೆ.

ಸಚಿನ್ ಅರ್ಧಶತಕದ ಹುಟ್ಟುಹಬ್ಬದ ಹಿನ್ನೆಲೆ ಅವರ ಅಮೋಘ ಸಾಧನೆ, ದಾಖಲೆಗಳ ಕಿರು ಪರಿಚಯ ಇಲ್ಲಿದೆ.

1989ರ ನವೆಂಬರ್ 15ರಂದು ಪಾಕಿಸ್ತಾನ (Pakistan) ವಿರುದ್ಧದ ಟೆಸ್ಟ್ ಮತ್ತು ಡಿಸೆಂಬರ್ 18ರಂದು ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಇವರು ಪದಾರ್ಪಣೆ ಮಾಡಿದರು.

2012ರಲ್ಲಿ ಪಾಕ್ ವಿರುದ್ಧದ ಪಂದ್ಯದಲ್ಲಿ ಏಕದಿನ ಕ್ರಿಕೆಟ್ಗೆ ಮತ್ತು 2013ರಲ್ಲಿ ವೆಸ್ಟ್ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳುವ ಮೂಲಕ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಗುಡ್ ಬೈ (Good Bye) ಹೇಳಿದ್ದರು.

ತೆಂಡೂಲ್ಕರ್ ಈವರೆಗೆ ಭಾರತದ ಪರ ಒಟ್ಟು 200 ಟೆಸ್ಟ್ ಪಂದ್ಯಗಳು , 463 ಏಕದಿನ ಪಂದ್ಯಗಳು (ODI) ಮತ್ತು ಏಕೈಕ ಟಿ20 ಪಂದ್ಯ ಆಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ,ಇಡೀ ಕ್ರಿಕೆಟ್ ಜಗತ್ತಿನ 100 ಶತಕ ಬಾರಿಸಿರುವ ವಿಶ್ವದ ಏಕೈಕ ಕ್ರಿಕೆಟಿಗ ಅಂದರೆ ಅದು ಸಚಿನ್‌ ತೆಂಡೂಲ್ಕರ್‍ ಅವರೊಬ್ಬರೇ!

ಅಲ್ಲದೆ ಇವರು ಭಾರತ ರತ್ನ (Bharath Ratna) ಪುರಸ್ಕೃತರೂ ಆಗಿದ್ದಾರೆ. ಇವರು ಸುಮಾರು ಎರಡೂವರೆ ದಶಕಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿದ್ದಾರೆ.

ಖೇಲ್‌ ರತ್ನ,ಅರ್ಜುನ(Arjuna),ಪದ್ಮವಿಭೂಷಣ,ಭಾರತರತ್ನ,ಪದ್ಮಶ್ರೀ ಪ್ರಶಸ್ತಿಗಳನ್ನೆಲ್ಲ ಪಡೆದ ಏಕೈಕ ಕ್ರಿಕೆಟಿಗ ಎಂದರೆ ಅದು ಸಚಿನ್‌ ತೆಂಡೂಲ್ಕರ್‍.

ಇವರ 24 ವರ್ಷಗಳ ಸುದೀರ್ಘವಾದ ಕ್ರಿಕೆಟ್ ವೃತ್ತಿಯಲ್ಲಿ ಒಟ್ಟು 664 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ, 34,357 ರನ್ ಸಿಡಿಸಿದ್ದಾರೆ.

ಹಾಗೂ 201 ವಿಕೆಟ್ (Wicket) ಪಡೆದಿದ್ದಾರೆ ಅಲ್ಲದೆ ಬೌಲಿಂಗ್‌ನಲ್ಲೂ (Balling) ಕೂಡ ಮಿಂಚಿದ್ದರೆ.

ಈವರೆಗೆ 200 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಸಚಿನ್‌ 15,921 ರನ್‌ ಬಾರಿಸಿದ್ದಾರೆ ಇದರಲ್ಲಿ 51 ಶತಕಗಳಿವೆ.2011 ರಲ್ಲಿ ಏಕದಿನ ವಿಶ್ವಕಪ್‌ನಲ್ಲಿ ದ್ವಿಶತಕ ಬಾರಿಸಿದ

ಮೊದಲ ಬ್ಯಾಟರ್ ಎಂಬ ಶ್ರೇಯಸ್ಸು ಕೂಡ ಸಲ್ಲುತ್ತದೆ. ಇವರು ಏಕದಿನ ವಿಶ್ವಕಪ್‌ಗಳಲ್ಲಿ 6 ಬಾರಿ ಭಾರತ ತಂಡದ ಸದಸ್ಯರಾಗಿದ್ದಾರೆ.

-ರಶ್ಮಿತಾ ಅನೀಶ್‌

Exit mobile version