ಪದ್ಮಶ್ರೀ ಪುರಸ್ಕೃತ ಸೂಫಿ ಸಂತ ಇಬ್ರಾಹಿಂ ಸುತಾರ್ ಇಂದು ಬೆಳಗ್ಗೆ ಹೃದಯಾಘಾದಿಂದ ನಿಧನರಾಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಹೃದಯದ ನೋವಿನಿಂದ ಬಳಲುತ್ತಿದ್ದ ಇಬ್ರಾಹಿಂ ಸುತಾರ್ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರ ಪಟ್ಟಣದಲ್ಲಿ ಶನಿವಾರ ಬೆಳಿಗ್ಗೆ 6:30ಕ್ಕೆ ನಿಧನರಾಗಿದ್ದಾರೆ. ಸುತಾರ್ ಅವರು ವೈದಿಕ, ವಚನ ಮತ್ತು ಸೂಫಿ ಪರಂಪರೆ ಬಗ್ಗೆ ,ಭಜನೆ, ಪ್ರವಚನ, ಸಂವಾದ ಮೂಲಕ ಭಾವೈಕ್ಯತೆ ಸಂದೇಶ ಸಾರುತ್ತಿದ್ದವರು. ವೈಚಾರಿಕ ಉಪನ್ಯಾಸಗಳಿಂದಲೇ ಹೆಸರು ಮಾಡಿದ್ದರು. 76 ವರ್ಷದ ಸುತಾರ್ ಅವರು 2018ರಲ್ಲಿ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದರು. ಮಹಾತ್ಮ ಕಬೀರರಂತೆ ಜನರಲ್ಲಿ ಭಾವೈಕ್ಯತೆ ಸಂದೇಶ ಸಾರುತ್ತಿದ್ದರು.
1980ರಿಂದಲೂ ಪ್ರವಚನ ಕೊಡಲು ಆರಂಭಿಸಿದ್ದರು. ಇಬ್ರಾಹಿಂ ಸುತಾರ್ ಹುಟ್ಟೂರಿನಲ್ಲೇ ಕೊನೆಯುಸಿರೆಳೆದಿದ್ದಾರೆ.
ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ಬಡ ಕುಟುಂಬದಲ್ಲಿ ಇಬ್ರಾಹಿಂ ಸುತಾರ 1940ರ ಮೇ 10ರಂದು ಜನಿಸಿದರು. ಇವರ ತಂದೆ ನಬಿಸಾಹೇಬ್ ಮತ್ತು ತಾಯಿ ಅಮೀನಾಬಿ. ಇವರ ತಂದೆ ಬಡಗಿ ವೃತ್ತಿಯನ್ನು ಮಾಡಿಕೊಂಡಿದ್ದರು. ಸಾಮರಸ್ಯದ ಕೊಂಡಿ, ಸೌಹಾರ್ದ ಸಮಾಜದ ಪ್ರತಿಪಾದಕರು ಪದ್ಮಶ್ರೀ ಪುರಸ್ಕೃತರಾಗಿದ್ದ ಕನ್ನಡದ ಕಬೀರ ಇಬ್ರಾಹಿಂ ಸುತಾರ ಅವರ ನಿಧನ ತೀವ್ರ ದುಃಖ ಉಂಟು ಮಾಡಿದೆ. ಸುತಾರ ಅವರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟ. ಈ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
“ಪದ್ಮಶ್ರೀ ಪುರಸ್ಕೃತರು ಖ್ಯಾತ ಪ್ರವಚನಕಾರ ಮಹಾಲಿಂಗಪೂರದ ಇಬ್ರಾಹಿಂ ಸುತಾರ ಅವರು ಇಂದು ಮುಂಜಾನೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಭಗವಂತ ಅವರ ದಿವ್ಯಾತ್ಮಕ್ಕೆ ಚಿರಶಾಂತಿ ನೀಡಲಿ” ಎಂದು ಸಚಿವ ಗೋವಿಂದ್ ಕಾರಜೋಳ ಟ್ವೀಟ್ ಸಂತಾಪ ತಿಳಿಸಿದ್ದಾರೆ. ಧರ್ಮ ಗುರುಗಳಾಗುವತ್ತ ಒಲವು. ಚಿಕ್ಕಂದಿನಲ್ಲೇ ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಇಬ್ರಾಹಿಂ ಸುತಾರ, ಧರ್ಮ ಗುರುಗಳ ಮಾರ್ಗದರ್ಶನದಲ್ಲಿ ಕುರಾನ್ ಅಧ್ಯಯನ ಮಾಡಿಕೊಂಡರು. ಈ ವೇಳೆ ಬೇರೆ ಧರ್ಮ ಗ್ರಂಥಗಳಲ್ಲಿ ಸಾರವನ್ನು ತಿಳಿದುಕೊಳ್ಳುವ ಆಸೆ ಚಿಗುರಿತು. ಊರಿನಲ್ಲಿದ್ದ ಸಾಧುವಿನ ಭಜನಾ ಸಂಘ ಬೆಂಬಲ ನೀಡಿತು. ಧಾರ್ಮಿಕರ ಜೊತೆಯಲ್ಲಿ ತತ್ವಪದ ಮತ್ತು ವಚನಗಳನ್ನು ಕಲಿತುಕೊಂಡರು. ಉಪನಿಷತ್ತಿನ ಸಾರವನ್ನು ಅರಿತುಕೊಂಡರು.