‘ಭಾರತ ಮಾತೆ ವಿಧವೆಯಲ್ಲ’ ; ಬಿಂದಿ ಧರಿಸದ ಪತ್ರಕರ್ತೆ ಜತೆ ಮಾತನಾಡಲು ನಿರಾಕರಿಸಿದ ಸಾಮಾಜಿಕ ಕಾರ್ಯಕರ್ತ!

Mumbai : ಮಹಿಳಾ ಪತ್ರಕರ್ತೆಯೊಬ್ಬಳು(Sambaji Bhide Controversial Statement) ಹಣೆಗೆ ‘ಬಿಂದಿ’ ಹಾಕದ ಕಾರಣ ಅವರೊಂದಿಗೆ ಮಾತನಾಡಲು ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತ ಸಂಭಾಜಿ ಭಿಡೆ ನಿರಾಕರಿಸಿದ್ದಾರೆ.

ದಕ್ಷಿಣ ಮುಂಬೈನ ರಾಜ್ಯ ಸಚಿವಾಲಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ(Sambaji Bhide Controversial Statement) ಅವರನ್ನು ಭೇಟಿ ಮಾಡಿದ ನಂತರ ಈ ಘಟನೆ ನಡೆದಿದ್ದು,

ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral) ಆಗಿದೆ. ವೀಡಿಯೊದಲ್ಲಿ  ಮಹಾರಾಷ್ಟ್ರದ ಸಾಮಾಜಿಕ ಕಾರ್ಯಕರ್ತ ಸಂಭಾಜಿ ಭಿಡೆ,

ಮರಾಠಿಯಲ್ಲಿ ಮಹಿಳಾ ಪತ್ರಕರ್ತೆ ತನ್ನ ಬೈಟ್ ತೆಗೆದುಕೊಳ್ಳಲು ಬರುವ ಮೊದಲು ಬಿಂದಿಯನ್ನು ಹಾಕಬೇಕೆಂದು ಹೇಳುವುದನ್ನು ಕೇಳಬಹುದು. ಇದೇ ವೇಳೆ “ಭಾರತೀಯ ಮಹಿಳೆ, ಭಾರತ ಮಾತೆಯನ್ನು ಹೋಲುತ್ತಾಳೆ.

ಹೀಗಾಗಿ ಮಹಿಳೆಯರು ಬಿಂದಿ ಹಾಕದೆ ‘ವಿಧವೆ’ಯಂತೆ ಕಾಣಿಸಿಕೊಳ್ಳಬಾರದು ಎಂದು ಪತ್ರಕರ್ತೆಗೆ ಸಾಂಭಾಜಿ ಭಿಡೆ ಹೇಳಿದ್ದಾರೆ.

https://fb.watch/gzaP8zntxL/ ಜಿಲ್ಲಾ ಉಸ್ತುವಾರಿ ನಾರಾಯಣಗೌಡ ಅವರ ಕನ್ನಡ ರಾಜ್ಯೋತ್ಸವ ಭಾಷಣವನ್ನು ನೀವು ಒಮ್ಮೆ ಕೇಳಿ.

ಈ ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ, ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಅವರು ಸಾಂಭಾಜಿ ಭಿಡೆ ಅವರ ಹೇಳಿಕೆಗಳಿಗೆ ವಿವರಣೆಯನ್ನು ಕೋರಿ ನೋಟಿಸ್ ಜಾರಿ ಮಾಡಿದ್ದಾರೆ.

ಇನ್ನು ಈ ಬಿಂದಿ ಹೇಳಿಕೆ ಇದೀಗ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ : https://vijayatimes.com/know-about-e-fir/

“ಭಾರತೀಯ ಸಂಸ್ಕೃತಿಯಲ್ಲಿ ಬಿಂದಿ ಧರಿಸುವುದಕ್ಕೆ ವಿಶೇಷ ಸ್ಥಾನವಿದೆ. ಹೀಗಾಗಿ ಮಹಿಳೆಯರು ಬಿಂದಿ ಧರಿಸಬೇಕೆಂದು ಕೆಲವರು ಅಭಿಪ್ರಾಯಪಟ್ಟಿದ್ದರೆ,

ಇನ್ನು ಕೆಲವರು, “ತಾನು ಏನನ್ನು ಧರಿಸಬೇಕೆಂದು ನಿರ್ಧರಿಸುವ ಹಕ್ಕು ಮಹಿಳೆಗಿದೆ. ಹೀಗಾಗಿ ಬೇರೆ ಯಾರೂ ಅವಳ ಹಕ್ಕನ್ನು ಪ್ರಶ್ನೆ ಮಾಡಬಾರದು” ಎಂದಿದ್ದಾರೆ.   

ಇನ್ನು 2018 ರಲ್ಲಿ, ಸಾಂಭಾಜಿ ಭಿಡೆ ತಮ್ಮ ತೋಟದಿಂದ ಮಾವಿನ ಹಣ್ಣುಗಳನ್ನು ತಿಂದ ನಂತರ ಅನೇಕ ದಂಪತಿಗಳಿಗೆ ಮಕ್ಕಳಾಗಿದ್ದವು ಎಂದು ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದರು.

Exit mobile version