ಬೆಳ್ಳಿತೆರಗೂ ಸೈ ಕಿರುತೆರೆಗೂ ಜೈ ಅಂದಿದ್ದ ಪುನೀತ್

ಬೆಂಗಳೂರು  ಅ 30 : ಕನ್ನಡ ಚಿತ್ರರಂಗದ ಅಪ್ಪು ಬಾರದ ಲೋಕಕ್ಕೆ ಹೋಗಿದ್ದಾರೆ. ಆದರೆ, ಅವರು  ಆರು ತಿಂಗಳ ಮಗುವಾಗಿದ್ದಾಗಲೇ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ಕನ್ನಡದ ಕೋಟ್ಯಧಿಪತಿಯಾಗಿ ಆರು ಕೋಟಿ ಕನ್ನಡಿಗರನ್ನು ಗೆದ್ದು ರಾಜಕುಮಾರನ ತನಕದ 16 ವರ್ಷಗಳ ಕಾಲ ಬಣ್ಣದ ಲೋಕದಲ್ಲಿ ಮಿಂಚಿ ಮರೆಯಾಗಿದ್ದಾರೆ.

ಆರು ತಿಂಗಳ ಹಸುಗೂಸು ಆಗಿದ್ದ ಪುನೀತ್, ತಂದೆ ರಾಜಕುಮಾರ್ ಅಭಿನಯಿಸಿದ್ದ ಪ್ರೇಮದ ಕಾಣಿಕ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಹಿಡಿದುಇಲ್ಲಿಯವರೆಗೂ  ಸಿನಿ ಜರ್ನಿಯಲ್ಲಿ ಅವರು ಹಿಂತಿರುಗಿ ನೋಡಿದ್ದೆಇಲ್ಲ. ಹಾಡುಗಾರನಾಗಿ, ನಟನಾಗಿ ಚಿತ್ರ ನಿರ್ಮಾಪಕನಾಗಿ, ಅನಾಥರು, ವೃದ್ಧರಿಗೆ ಮಿಡಿಯುವ ಹೃದಯವಂತನಾಗಿ, ಗೋವುಗಳ ಆರಾಧಕನಾಗಿ ಹೀಗೆ ಅವರು ತಮ್ಮ 46 ವರ್ಷದ ಜೀವನ ಪಯಣದಲ್ಲಿ ಮಾಡಿದ ಸಾಧನೆಗಳು ಹಲವಾರು.

ಪುನೀತ್ ಬೆಳ್ಳಿ ತೆರೆಯಲ್ಲಿ ಮಾತ್ರ ವಲ್ಲದೆ, ಟಿವಿಯಲ್ಲೂ ಕಾಣಿಸಿಕೊಂಡು ಸೈ ಎನಿಸಿದ್ದರು. ಹಿಂದಿ ಭಾಷೆಯಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿದ್ದ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ  ಕನ್ನಡ ಅವತರಣಿಕೆಯಲ್ಲೂ ಮಾಡಿ, ಆಕರ್ಷಣೆ ಮೂಡಿಸಿದ್ದು ಪುನೀತ್. 2017ರಲ್ಲಿ ಕಲರ್ಸ್ ವಾಹಿನಿಯಲ್ಲಿ ಕನ್ನಡದ ಕೋಟ್ಯಧಿಪತಿ ಮೊದಲ ಸೀಸನ್ ಬಂದಿತ್ತು. ಅದನ್ನು ನಡೆಸಿಕೊಟ್ಟು ಕನ್ನಡ ಜನಮಾನಸದಲ್ಲಿ ಪುನೀತ್ ಹೊಸ ಛಾಪು ಮೂಡಿಸಿದ್ದರು.

ಕನ್ನಡದ ಕೋಟ್ಯಧಿಪತಿ ಸೂಪರ್ ಹಿಟ್ ಆದ ಬಳಿಕ ಕಲರ್ಸ್ ವಾಹಿನಿಯವರೇ ಪುನೀತ್ ಅವರನ್ನು ಕರೆತಂದು ಫ್ಯಾಮಿಲಿ ಪವರ್ ಎನ್ನುವ ವಿಶಿಷ್ಟ ರಿಯಾಲಿಟಿ ಶೋ ನಡೆಸಿದ್ದರು. 2017ರ ನವೆಂಬರ್ ನಿಂದ 2018ರ ಎಪ್ರಿಲ್ ವರೆಗೆ ನಿರಂತರವಾಗಿ ನಡೆದುಬಂದಿದ್ದ ಕಾರ್ಯಕ್ರಮವ ಹಿಟ್ ಆಗಿತ್ತು. ಪವರ್ ಸ್ಟಾರ್ ಅನಂತರ, ಟಿವಿ ಕಾರ್ಯಕ್ರಮಗಳ ನಿರ್ಮಾಣದಲ್ಲಿಯೂ ತೊಡಗಿಸಿದ್ದರು. ಪುನೀತ್ ಟಿವಿ ಶೋ ನೇತ್ರಾವತಿ  ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು.

ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿಯಾಗಿದ್ದ ಪುನೀತ್ ರಾಜಕುಮಾರ್‌ ತಂದೆಯ ರೀತಿಯಲ್ಲೇ ಅಭಿಮಾನಿಗಳನ್ನು ಪ್ರೀತಿಸುತ್ತಿದ್ದರು. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅಣ್ಣಾವ್ರ ರೀತಿಯಲ್ಲೇ ಅತ್ಯಂತ ವಿಭಿನ್ನ ರೀತಿಯಲ್ಲಿ ಅಭಿಮಾನಿಗಳ ಆದರಕ್ಕೆ ಪಾತ್ರರಾಗಿದ್ದರು. ಪುನೀತ್ ಇನ್ ಸ್ಟಾಗ್ರಾಮ್ ಒಂದರಲ್ಲೇ 15 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದ್ದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

Exit mobile version