ಅಯೋಧ್ಯೆ ರಾಮಮಂದಿರ ವಿಚಾರ ವಿವಾದದ ಹಿನ್ನೆಲೆ ಸ್ಪಷ್ಟನೆ ನೀಡಿದ ಸಚಿವ ಸಂತೋಷ್ ಲಾಡ್.

Hubbali: ರಾಮ ಮಂದಿರ ಕಟ್ಟಿರುವದು ಸರಿಯಾದ ಜಾಗದಲ್ಲಲ್ಲ. ರಾಮ ಮಂದಿರ (Rama Mandir) ಕಟ್ಟಿರುವುದಕ್ಕೆ ಬಡತನ ನಿರ್ಮೂಲನೆ ಆಗಲ್ಲ. ರಾಮ ಮಂದಿರ ಕಟ್ಟಿರೋದು ರಾಜಕೀಯ ಇಚ್ಛಾಶಕ್ತಿ ಕಾರಣಕ್ಕೆ ಎಂದು‌ ಕಾರ್ಮಿಕ ಸಚಿವ ಸಂತೋಷ ಲಾಡ್ (Santhosh Lad) ಆರೋಪಗಳ ಸುರಿಮಳೆ ಸುರಿಸಿದ್ದರು. ರಾಮ ಮಂದಿರ ಕಟ್ಟಿರೋದಕ್ಕೆ ನಮ್ಮ ವಿರೋದ ಇಲ್ಲ. ಆದರೆ ರಾಮಮಂದಿರ ಕಟ್ಟಿರೋ ಜಾಗ ಸರಿ ಇಲ್ಲ. ಸುಪ್ರೀಂ ಕೋರ್ಟ್ ಹೇಳಿರೋ ಜಾಗದಲ್ಲಿ ಇವರು ಮಂದಿರ ಕಟ್ಟಿಲ್ಲ. ಬೇರೆ ಜಾಗದಲ್ಲಿ ಕಟ್ಟಿದ್ದಾರೆ. ಅದು 40 ಪರ್ಸೆಂಟ್ ಕಟ್ಟಿದಾರೆ ಎಂದು ತಿಳಿಸಿದ್ದಾರೆ.

ಇನ್ನು ಈ ವಿಚಾರವಾಗಿ ಬಿಜೆಪಿ (BJP) ವಿರುದ್ಧ ಹರಿಹಾಯ್ದ ಅವರು, ರಾಮ ಮಂದಿರದಿಂದ ಬಡತನದ ನಿರ್ಮೂಲನೆ ಆಗಿದೆಯಾ‌? ಹೊರಗಡೆ ಏನು ಚರ್ಚೆ ಆಗ್ತಿದೆ ಅನ್ನೋದು ಗೊತ್ತಿಲ್ಲ. ರಾಮ ಮಂದಿರ ಕಟ್ಟಿರೋ ಕಾರಣಕ್ಕೆ ಬಡವರಿಗೆ ಅನಕೂಲ ಆಗುತ್ತೆ ಅಂತಾ ಏನೂ ಕಂಡಿಲ್ಲ. ಎಲ್ಲರೂ ದೇವರು ಭಕ್ತರು, ದೇವರ ಭಕ್ತರಿಗೆ ಬಡತನ ಇಲ್ವಾ? ಇವರು ಮಂದಿರ ಕಟ್ಟಿ ವೋಟ್ (Vote) ಕೇಳುತ್ತಿದ್ದಾರೆ.

ಪ್ರಪಂಚದಲ್ಲಿ ಬಡತನ ಇದೆ. ಸೂರ್ಯ ಚಂದ್ರ ಇರೋವರೆಗೂ ಬಡತನ ಇರುತ್ತೆ. ಇವರ ಹತ್ತು ವರ್ಷದಲ್ಲಿ ಬಡತನ ಹೇಗೆ ನಿರ್ಮೂಲನೆ ಆಯ್ತು ಅಂತಾ ಹೇಳತಿಲ್ಲ. ರಾಮ‌ಮಂದಿರ ಕಟ್ಟಿರೋ ಬಗ್ಗೆ ಮಾತಾಡ್ತಿದ್ದಾರೆ. ಆ ಉದ್ದೇಶಕ್ಕೆ ನಾನು ಹೇಳಿದೆ. ನೀವು ಪ್ರಭಾವಿಯಾಗಿದ್ರೆ ಟಿವಿ ಆಪ್ (Tv Off) ಮಾಡಿ ಬನ್ನಿ. ರಾಮ ರಹೀಮ್, ಪಾಕಿಸ್ತಾನ (Pakistan) ಅಪಘಾನಿಸ್ತಾನ ಹೆಸರು ಮೂಲಕ ಜನರನ್ನು ಹುಚ್ಚು ಮಾಡ್ತಾರೆ. ಕಳೆದ ಚುನಾವಣೆಯಲ್ಲಿ ಪುಲ್ವಾಮಾ ದಾಳಿ ಬಗ್ಗೆ ಮಾತಾಡಿದರು.

ಹಾಗಿದ್ರೆ ಆರ್ ಡಿಎಕ್ಸ್ ಹೇಗೆ ಬಂತು? ದೇಶದಲ್ಲಿ ಈ ತರಹ ಚರ್ಚೆಗಳೇ ಆಗುತ್ತಿಲ್ಲ. ಕೇವಲ ರಾಮ ಮಂದಿರ, ನಿತೀಶ್ ಕುಮಾರ್, ಕಮಲನಾಥ್ಸೋತ ಕಮಲನಾಥ್ ತಗೊಂಡ್ರಿ. ಇವರಿಂದ ಯಾವ ಹಿಂದೂ ಗೆ ಲಾಭ ಆಗಿಲ್ಲ. ಇದಕ್ಕೆಲ್ಲ ಅಂತ್ಯ ಇದೆ, ದೇವರ ಇದ್ದಾನೆ ಎಂದು ಹೇಳಿದರು.ನಮಗೂ ರಾಮನ ಬಗ್ಗೆ ಗೌರವ ಇದೆ. ರಾಮನಿಗೆ ಮುಸ್ಲಿಮರಿಗೂ ಬೇಕು, ಸಿಕ್​ರಿಗೂ ಬೇಕು, ಎಲ್ಲರಿಗೂ ಬೇಕು. ನಮಗೆ ದುರ್ಗಮ್ಮ ಬೇಕು, ಪಾಂಡುರಂಗ ಬೇಕು ಎಂದು ಸ್ಪಷ್ಟನೆ ನೀಡಿದ್ದಾರೆ.

Exit mobile version