ಉರಿಮಂಡಲ ಹಾವು ಎಷ್ಟು ಅಪಾಯಕಾರಿ, ಆಕ್ರಮಣಕಾರಿ ಗೊತ್ತಾ?

ದ್ವೇಷ, ರೋಷ ಎಂದಾಕ್ಷಣ ನಮಗೆ ನೆನಪಾಗುವುದು ನಾಗರಹಾವು.”ಹಾವಿನ ದ್ವೇಷ ಹನ್ನೆರಡು ವರುಷ” (Saw scaled)ಅನ್ನೊ ಮೂಡನಂಬಿಕೆಯ ಜೊತೆಗೆ ಹೆಡೆ ಎತ್ತಿ, ಅತೀ ಕೋಪದಿಂದ ಬುಸುಗುಡುತ್ತಾ ಕಚ್ಚಲು ಪ್ರಯತ್ನಿಸುವ ಅದರ ಗುಣ ಈ ಮಾತಿಗೆ ಕಾರಣವಾಗಿರಬಹುದು.

ಹಾವುಗಳಲ್ಲಿ ನಾಗರಹಾವಿನಷ್ಟೆ ಆಕ್ರಮಣಕಾರಿ ಆಗಿರುವ ಬಹಳಷ್ಟು ಹಾವುಗಳಿವೆ. ಅವುಗಳಲ್ಲಿ ಒಂದು ಈ ಉರಿಮಂಡಲ (Saw Scaled Viper).

ಉರಿಮಂಡಲ ಹಾವು ಭಾರತದ ನಾಲ್ಕು ದೊಡ್ಡ ವಿಷಕಾರಿ ಹಾವು (Venomous Snakes) ಗಳಲ್ಲಿ ಒಂದಾಗಿದೆ. (ಭಾರತದಲ್ಲಿ ಹಾವು ಕಡಿತದಿಂದ ಸಂಭವಿಸುವ ಸಾವುಗಳಿಗೆ ಶೇ.90 ರಷ್ಟು ಕೊಡುಗೆ ಈ ನಾಲ್ಕು ಹಾವುಗಳದ್ದೆ ಇದೆ)

https://vijayatimes.com/tumkuru-road-accident-kills-9/

Venomous Snakes

ಉರಿಮಂಡಲ ಸೇರಿ ಎಲ್ಲಾ ಮಂಡಲಹಾವುಗಳ (Vipers) ಚಲನೆಯ ಗತಿಯನ್ನು ಅಂದಾಜಿಸುವುದು ಕಷ್ಟ. ಸಾಮಾನ್ಯವಾಗಿ ಎಲ್ಲಾ ಹಾವುಗಳು ಬೇಟೆ ಸಿಕ್ಕಾಗ ಅಥವಾ ತಾವು ಅಪಾಯಕ್ಕೆ ಸಿಲುಕಿದ್ದೇವೆಂದು ರೊಚ್ಚಿಗೆದ್ದಾಗ, ನೇರವಾಗಿ ಮುಂದಿನ ದಿಕ್ಕಿನೆಡೆಗೆ ಚಲಿಸಿ ದಾಳಿಗೆ ಮುಂದಾದರೆ ಈ ಮಂಡಲದ ಹಾವುಗಳು ಮುಂಭಾಗ, ತಮ್ಮ ಎಡ ಬಲ ಹೀಗೆ ಸಿಕ್ಕ ಸಿಕ್ಕೆಡೆಗೆ ಒಮ್ಮಿಂದೊಮ್ಮೆಲೆ ಊಹಿಸಲು ಸಾಧ್ಯವಿಲ್ಲದಂತೆ ಒಮ್ಮೆಲೇ ಚಿಮ್ಮುತ್ತಾ ದಾಳಿ ಮಾಡುತ್ತವೆ.

ಇವುಗಳ ಉಸಿರಿನ ಶಬ್ದ ಕೂಡ ಜಾಸ್ತಿ. ಅದರಲ್ಲೂ ಕೊಳಕು ಮಂಡಲವಂತೂ ಬಹಳ ದೂರದವರೆಗೂ ಕೇಳಿಸುವಂತೆ ಉಸಿರಿನ ಶಬ್ದ ಮಾಡುತ್ತದೆ.

Vipers

https://vijayatimes.com/tumkuru-road-accident-kills-9/

ಇದರ ಉಸಿರಿನ ಶಬ್ದವನ್ನು ಕುಕ್ಕರಿನ ಶಬ್ದಕ್ಕೆ ಹೋಲಿಸುತ್ತಾರೆ. ಈ ಉಸಿರಿನ ಶಬ್ದದ ಕಾರಣಕ್ಕೆ ಏನೋ ಅದರ ಉಸಿರು ಸೋಕಿದರೆ ಸಾಕು, ಸೋಕಿದ ಜಾಗ ಕೊಳೆಯುತ್ತದೆ ಎಂಬ ತಪ್ಪು ಅಭಿಪ್ರಾಯ ರೂಪಿತವಾಗಿದೆ.

ವಾಸ್ತವವಾಗಿ ಕೇವಲ ಉಸಿರು ಸೂಗುವುದರಿಂದ ವ್ಯಕ್ತಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಅದು ಕಚ್ಚಿದರೆ ಮಾತ್ರ ಸಮಸ್ಯೆ. ಕೆಳಗಿನ ವಿಡಿಯೋದಲ್ಲಿರುವುದು ಉರಿಮಂಡಲ (Saw scaled Viper) ಆಕ್ರಮಣಾಕಾರಿಯಾದ ಸಂದರ್ಭದ ದೃಶ್ಯ. ಈ ಗುಂಪಿಗೆ ಸೇರಿದ ಎಲ್ಲಾ ಹಾವುಗಳು ಅಪಾಯ ಎದುರಾದಾಗ ತನ್ನ ದೇಹವನ್ನೇ C ಆಕಾರದಲ್ಲಿ ಅನೇಕ ಸುತ್ತುಗಳನ್ನು ಸುತ್ತಿಕೊಂಡು ತಲೆಯನ್ನು ಆ ಸುತ್ತುಗಳ ಮಧ್ಯದಲ್ಲಿ ಇರಿಸುತ್ತದೆ.

Saw scaled Viper

ಈ ರೀತಿಯಲ್ಲಿ ಅದು ಇರುವಾಗ ಯಾವಾಗ ವೈರಿ ಮೇಲೆ ದಾಳಿ ಮಾಡುತ್ತದೆ ಎಂಬುದನ್ನು ಅಂದಾಜಿಸಲು ಅಸಾಧ್ಯ! ಇವುಗಳು ಈ ರೀತಿಯಲ್ಲಿ ಸುರುಳಿ ಸುತ್ತಿಕೊಂಡು ಅದರ ದೇಹದ ಚರ್ಮವನ್ನು ಸುತ್ತಿಕೊಳ್ಳುತ್ತಾ, ಉಜ್ಜಿಕೊಳ್ಳುತ್ತಾ ಬುಸುಗುಡುತ್ತಾ ಹೆದರಿಸಲು ಪ್ರಯತ್ನಿಸುತ್ತದೆ.

ಅದಕ್ಕೆ ಹೆದರದೆ ಇದ್ದರೆ ತೀವ್ರ ಆಕ್ರಮಣಕಾರಿಯಾಗಿ ದಾಳಿ ಮಾಡುತ್ತೆ, ವಿಷವನ್ನು ಶೀಘ್ರವೇ ಪಸರಿಸುತ್ತೆ. ಈ ಹಾವು ನೋಡಲು ಅಷ್ಟು ಭಯಂಕರ ಅನ್ನಿಸದೇ ಇದ್ದರು, ಆಕ್ರಮಣ ಶೈಲಿಯಲ್ಲಿ ಬಹಳ ಅಪಾಯಕಾರಿಯಾಗಿದೆ.

Source Credits : ಸಂಜಯ್ ಹೊಯ್ಸಳ

Exit mobile version