Jaipur: ಮಹತ್ವದ ಬೆಳವಣಿಗೆಯಲ್ಲಿ 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಸರ್ಕಾರಿ (SC Approves RJ Govt Rules) ಉದ್ಯೋಗಗಳಿಗೆ ಅರ್ಹರಾಗಿರುವುದಿಲ್ಲ ಎಂದು
ರಾಜಸ್ಥಾನ ಸರ್ಕಾರ ರೂಪಿಸಿರುವ ನೂತನ ಕಾನೂನಿಗೆ ಸುಪ್ರೀಂ ಕೋರ್ಟ್ (Supreme Court) ಅನುಮೋದನೆ ನೀಡಿದೆ.
ಇನ್ನು ರಾಜಸ್ಥಾನ ರಾಜ್ಯದ 1989ರ ಕಾನೂನು ಇದಾಗಿದ್ದು, ಈ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ನಿಯಮವು ತಾರತಮ್ಯ
ರಹಿತವಾಗಿದೆ. ಹೀಗಾಗಿ ಅದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ (Suryakant), ದೀಪಂಕರ್ ದತ್ತಾ ಮತ್ತು ಕೆವಿ ವಿಶ್ವನಾಥನ್
(K V Vishwanathan) ಅವರ ತ್ರಿಸದಸ್ಯ (SC Approves RJ Govt Rules) ಪೀಠವು ಆದೇಶ ನೀಡಿದೆ.
2022ರಲ್ಲಿ ರಾಜಸ್ಥಾನ ಹೈಕೋರ್ಟ್ (Rajasthan Highcourt) ತೀರ್ಪನ್ನು ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠವು ಎತ್ತಿಹಿಡಿದಿದೆ. ಮಾಜಿ ಸೈನಿಕ ರಾಮಜಿ ಲಾಲ್ ಜಾಟ್
ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. 2017 ರಲ್ಲಿ ರಕ್ಷಣಾ ಸೇವೆಗಳಿಂದ ನಿವೃತ್ತರಾದ ನಂತರ ರಾಮಜಿ ಲಾಲ್, 2018ರ ಮೇ ತಿಂಗಳಲ್ಲಿ ರಾಜಸ್ಥಾನ
ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು.
ಆದರೆ 2ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರಿಂದ ಅವರ ಅರ್ಜಿಯನ್ನು ರಾಜಸ್ಥಾನ ಪೊಲೀಸ್ ಅಧೀನ ಸೇವಾ ನಿಯಮಗಳು, 1989 ರ ಅಡಿಯಲ್ಲಿ ತಿರಸ್ಕರಿಸಲಾಗಿತ್ತು. ಇದನ್ನು
ಪ್ರಶ್ನಿಸಿ ರಾಮಜಿ ಲಾಲ್ (Ramji Lal) ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಅವರ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂಕೋರ್ಟ್ ಪಂಚಾಯತ್ (Panchayat)
ಚುನಾವಣೆಯಲ್ಲಿ ಈ ರೀತಿಯ ನಿಯಮಗಳನ್ನು ಈ ಹಿಂದೆ ಅನುಮೋದಿಸಿತ್ತು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇದನ್ನು ಓದಿ: 2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಸರ್ಕಾರಿ ಉದ್ಯೋಗವಿಲ್ಲ: ರಾಜಸ್ಥಾನ ಸರ್ಕಾರದ ಕಾನೂನಿಗೆ ಸುಪ್ರೀಂ ಅನುಮೋದನೆ