ಧೂಮಪಾನ ವಯೋಮಿತಿಯನ್ನು 21ಕ್ಕೆ ಹೆಚ್ಚಿಸಬೇಕೆಂಬ ಮನವಿಯನ್ನು ವಜಾಗೊಳಿಸಿದ ಸುಪ್ರೀಂ!

Supremecourt

ಧೂಮಪಾನದ ವಯೋಮಿತಿಯನ್ನು(Smoking Age) 18 ರಿಂದ 21ಕ್ಕೆ ಹೆಚ್ಚಿಸಲು ಮತ್ತು ಸಡಿಲವಾದ ಸಿಗರೇಟ್(Cigarette) ಮಾರಾಟವನ್ನು ನಿಷೇಧಿಸಲು ನಿರ್ದೇಶನ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್(Supremecourt) ಶುಕ್ರವಾರ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಸ್. ಕೆ. ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ಇಬ್ಬರು ವಕೀಲರು ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿ “ನಿಮಗೆ ಪ್ರಚಾರ ಬೇಕಾದರೆ, ಒಳ್ಳೆಯ ಪ್ರಕರಣವನ್ನು ವಾದಿಸಿ.

ಪ್ರಚಾರ ಹಿತಾಸಕ್ತಿ ಮೊಕದ್ದಮೆಗಳನ್ನು ಸಲ್ಲಿಸಬೇಡಿ ಎಂದು ಮನವಿಯನ್ನು ವಜಾಗೊಳಿಸಿತು.


ಧೂಮಪಾನ ನಿಯಂತ್ರಣಕ್ಕೆ ಮಾರ್ಗಸೂಚಿಗಳನ್ನು ಕೋರಿ ವಕೀಲರಾದ ಶುಭಂ ಅವಸ್ತಿ ಮತ್ತು ಸಪ್ತ ಋಷಿ ಮಿಶ್ರಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ.

ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳು ಮತ್ತು ಪೂಜಾ ಸ್ಥಳಗಳ ಬಳಿ ಸಡಿಲವಾದ ಸಿಗರೇಟ್ ಮಾರಾಟವನ್ನು ನಿಷೇಧಿಸುವುದರ ಜತೆಗೆ ವಾಣಿಜ್ಯ ಸ್ಥಳಗಳಿಂದ ಧೂಮಪಾನ ವಲಯಗಳನ್ನು ತೆಗೆದುಹಾಕಲು ನಿರ್ದೇಶನಗಳನ್ನು ಮನವಿಯಲ್ಲಿ ಕೋರಲಾಗಿತ್ತು, ಆದರೆ ಸುಪ್ರೀಂಕೋರ್ಟ್ ಈ ಎಲ್ಲಾ ಮನವಿಗಳನ್ನೂ ತಳ್ಳಿ ಹಾಕಿದೆ.

Exit mobile version