31 ವರ್ಷಗಳ ನಂತರ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ ಆರೋಪಿಗೆ ಬಿಡುಗಡೆ ನೀಡಿದ ಸುಪ್ರಿಂ!

ಮಾಜಿ ಪ್ರಧಾನಿ(Former PrimeMinister) ರಾಜೀವ್ ಗಾಂಧಿ(Rajiv Gandhi) ಹಂತಕ ಪೆರಾರಿವಾಲನ್ ಬಿಡುಗಡೆಗೆ ಸುಪ್ರೀಂ ಕೋರ್ಟ್(SupremeCourt) ಆದೇಶ ನೀಡಿದೆ.

31 ವರ್ಷಗಳ ಕಾಲ ಜೈಲಿನಲ್ಲಿದ್ದ ಪೆರಾರಿವಾರನ್ ತಮಿಳುನಾಡು ಸರ್ಕಾರದ ಮನವಿ ಮೇರೆಗೆ ಬಿಡುಗಡೆಗೊಂಡಿದ್ದಾರೆ. ಮಾರ್ಚ್ 9 ರಂದು, ಸುಪ್ರೀಂ ಕೋರ್ಟ್ ಪೆರಾರಿವಾಲನ್ ಅವರಿಗೆ ಜಾಮೀನು ನೀಡಿತು. 30 ವರ್ಷಗಳಿಗೂ ಹೆಚ್ಚು ಕಾಲ ಸೆರೆವಾಸ ಅನುಭವಿಸಿ, ಪೆರೋಲ್‌ನಲ್ಲಿ ಹೊರಬಂದ ಬಳಿಕ ಯಾವುದೇ ದೂರುಗಳ ಇತಿಹಾಸವಿಲ್ಲ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಮೇ 21, 1991 ರಂದು ದಕ್ಷಿಣ ರಾಜ್ಯಗಳಲ್ಲಿ ಮುಂಬರುವ ಚುನಾವಣೆಗಾಗಿ ಪ್ರಚಾರ ಮಾಡುತ್ತಿದ್ದಾಗ ಹತ್ಯೆಗೀಡಾದರು. ಘಟನೆಯ ಸಮಯದಲ್ಲಿ 19 ವರ್ಷ ವಯಸ್ಸಿನವನಾಗಿದ್ದ ಪೆರಾರಿವಾಲನ್, ಮಾಜಿ ಪ್ರಧಾನಿಯನ್ನು ಹತ್ಯೆ ಮಾಡಲು ಬಾಂಬ್‌ನಲ್ಲಿ ಬಳಸಲಾದ ಎರಡು 9-ವೋಲ್ಟ್ ಬ್ಯಾಟರಿಗಳನ್ನು ಖರೀದಿಸಿದ ಆರೋಪ ಹೊತ್ತಿದ್ದರು.

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಏಳು ಅಪರಾಧಿಗಳಲ್ಲಿ ಒಬ್ಬರಾದ ನಳಿನಿ ಶ್ರೀಹರನ್ ಅವರಿಗೆ ತಮಿಳುನಾಡು ಸರ್ಕಾರ ಗುರುವಾರ ಒಂದು ತಿಂಗಳ ಪೆರೋಲ್ ಮಂಜೂರು ಮಾಡಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅವರ ತಾಯಿ ಪದ್ಮಾವತಿ ಮನವಿಗೆ ಸ್ಪಂದಿಸಿ ಅಸ್ತು ಎನ್ನಲಾಗಿದೆ.

Exit mobile version