ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಖಚಿತ: ಯಾವೆಲ್ಲಾ ಪಠ್ಯಗಳಿಗೆ ಬಿಳಲಿದೆ ಕತ್ತರಿ?

ಕರ್ನಾಟಕ : ರಾಜ್ಯದಲ್ಲಿ ನೂತನ ಕಾಂಗ್ರೆಸ್(Congress) ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ (School textbook revision confirm) ಅವರು ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಮತ್ತು

ಈಗ ತಲೆದೋರುವ ಸಮಸ್ಯೆಗಳನ್ನು ಪರಿಹರಿಸಲು ಸದ್ಯ ತಾತ್ಕಾಲಿಕ ಸಮಿತಿಯನ್ನು ಸ್ಥಾಪಿಸಿದ್ದಾರೆ. ಹಿಂದಿನ ಬಿಜೆಪಿ(BJP) ಸರ್ಕಾರದ ಅವಧಿಯಲ್ಲಿ ಮಾಡಿದ ಪಠ್ಯಪುಸ್ತಕಗಳ ಪರಿಷ್ಕರಣೆಯಲ್ಲಿ

ಗುರುತಿಸಲಾದ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದು ವರದಿಗಳು (School textbook revision confirm) ಹೇಳಿವೆ.

ಪಠ್ಯಗಳ ಪರಿಷ್ಕರಣೆ ಕುರಿತು ಚರ್ಚಿಸಲು ಸಿಎಂ ಸಿದ್ದರಾಮಯ್ಯ, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ಅವರೊಂದಿಗೆ ವಿಸ್ತೃತ ಸಮಾಲೋಚನೆ ನಡೆಸಿದರು.

ಇದನ್ನೂ ಓದಿ : ಕಾರ್ಡ್ ಇಲ್ಲದಿದ್ದಲ್ಲಿ ಇನ್ನು ಮುಂದೆ ಮೊಬೈಲ್​ನ ಯುಪಿಐ ಮೂಲಕವೇ ಎಟಿಎಂನಿಂದ ಹಣ ಪಡೆಯಬಹುದು…ಹೇಗೆ? ಇಲ್ಲಿದೆ ಮಾಹಿತಿ

ರಾಜ್ಯದಲ್ಲಿ ಶಾಲೆಗಳು ಈಗಾಗಲೇ ಪುನರಾರಂಭಗೊಂಡಿರುವುದರಿಂದ ಪಠ್ಯಪುಸ್ತಕಗಳನ್ನು ಮುದ್ರಣ ರೂಪದಲ್ಲಿ ವಿತರಿಸಲಾಗಿದೆ, ಹಾಗಾಗಿ ವ್ಯಾಪಕ ಪರಿಷ್ಕರಣೆಗಳಿಗೆ ಸೀಮಿತ ಸಮಯವಿದೆ. ಸಮಿತಿಯು ಮಕ್ಕಳ ಮೇಲೆ

ನಕಾರಾತ್ಮಕ ಪರಿಣಾಮ ಬೀರುವ ಪಠ್ಯಗಳನ್ನು ತೆಗೆದುಹಾಕುವ ಬಗ್ಗೆ ಚರ್ಚಿಸಿದೆ ಮತ್ತು ಬೇರೆ ಪಠ್ಯ ಸೇರಿಸುವ ತಿದ್ದೋಲೆಗಳನ್ನು ಎಲ್ಲಾ ಶಾಲೆಗಳಿಗೆ ವಿತರಿಸಲು ಸೂಚಿಸಲಾಗಿದೆ.

ಆರ್‌ಎಸ್‌ಎಸ್(RSS) ಸಂಸ್ಥಾಪಕ ಕೇಶವ ಬಲಿರಾಮ್ ಹೆಗಡೆವಾರ್, ಚಿಂತಕ ಚಕ್ರವರ್ತಿ ಸೂಲಿಬೆಲೆ ಮತ್ತು ವಿದ್ವಾಂಸ ಬನ್ನಂಜೆ ಗೊಂವಿದಾಚಾರ್ಯ ಅವರ ಅನೇಕ ಪಠ್ಯಗಳನ್ನು ಪರಿಷ್ಕರಿಸಲು ಸರ್ಕಾರ ನಿರ್ಧರಿಸಿದೆ.

ಮುಂದಿನ ಶಾಲಾ ವರ್ಷಕ್ಕೆ ಈ ಪಠ್ಯಕ್ರಮವನ್ನು ಪರಿಷ್ಕರಿಸಲು ಸಮಿತಿಯನ್ನು ರಚಿಸಲಾಗಿದೆ, ಏಳೆಂಟು ತಿಂಗಳ ಸಮಯ ಆ ಸಮಿತಿಗೆ ಬೇಕಾಗುತ್ತದೆ,

ಬಳಿಕ ಪಠ್ಯವನ್ನು ಪ್ರಿಂಟ್ ಔಟ್ ಮಾಡಿ ಶಾಲೆಗೆ ಕಳುಹಿಸಬಹುದು ಎಂಬ ಚರ್ಚೆ ನಡೆದಿದೆ ಎನ್ನಲಾಗಿದೆ.

ಈ ಹಿಂದೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸುವುದಾಗಿ ಘೋಷಿಸಿತ್ತು. ಆದರೆ ವಿದ್ಯಾರ್ಥಿಗಳ ಹಿತವನ್ನು ಸಮಗ್ರವಾಗಿ ಪರಿಗಣಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ

ಸಚಿವ ಡಾ.ಎಂ.ಸಿ. ಸುದಾಕರ್(Dr M C Sudhakar) ಹೇಳಿದರು.

ರಶ್ಮಿತಾ ಅನೀಶ್

Exit mobile version