ಲೋಕಸಭೆಗೆ ನುಗ್ಗಿದ ಇಬ್ಬರು ಕಿಡಿಗೇಡಿಗಳು: ಸಂಸದರತ್ತ ನುಗ್ಗಿ ಅಶ್ರುವಾಯು ಸಿಡಿಸಿದ ಅಪರಿಚಿತರು

New Delhi: ಲೋಕಸಭೆ (Lok Sabha) ಯಲ್ಲಿ ಇಂದು(ಡಿ.13) ನಡೆಯುತ್ತಿದ್ದ ಕಲಾಪದ ವೇಳೆ ಪ್ರತಾಪ್ ಸಿಂಹ ಅವರ (Security Breach in Parliament) ಹೆಸರಿನಲ್ಲಿ ಪಾಸ್ ಪಡೆದು ಸದನದ ಒಳಗೆ

ನುಗ್ಗಿದ ಇಬ್ಬರು ಕಿಡಿಗೇಡಿಗಳು ಸಂಸದರತ್ತ ಅಶ್ರುವಾಯು (Security Breach in Parliament) ಸಿಡಿಸಿದ್ದು, ಭಾರೀ ಭದ್ರತಾ ಲೋಪ ಸಂಭವಿಸಿದೆ.

ಭಯೋತ್ಪಾದಕರು ಸಂಸತ್ತಿನ ಮೇಲೆ ದಾಳಿ ನಡೆಸಿ ಇಂದಿಗೆ 22ನೇ ವರ್ಷ
ಲೋಕಸಭೆಯ ಚಳಿಗಾಲದ ಅಧಿವೇಶನದ (Winter Session) ವೇಳೆ ಇಬ್ಬರು ಅಪರಿಚಿತರು ವೀಕ್ಷಕರ ಗ್ಯಾಲರಿಯಿಂದ ಹಠಾತ್ ಆಗಿ ಸಂಸದರು ಕುಳಿತುಕೊಳ್ಳುವ ಆಸನದ ಕಡೆಗೆ ನುಗ್ಗಿ, ಸುತ್ತಲೂ

ಓಡಾಡಿದ್ದಾರೆ. ಇದರಿಂದ ಆತಂಕಗೊಂಡ ಸಂಸದರು ಲೋಕಸಭೆಯಿಂದ ಹೊರ ಓಡಿ ಬಂದಿದ್ದು, ಕಲಾಪವನ್ನು ಸ್ಥಗಿತಗೊಳಿಸಲಾಗಿದೆ.

ಇನ್ನು ವರದಿಗಳ ಪ್ರಕಾರ, ನೀಲಿ ಬಣ್ಣದ ಜಾಕೆಟ್ (Jacket) ತೊಟ್ಟಿದ್ದ ಇಬ್ಬರು ವ್ಯಕ್ತಿಗಳು ಸಂಸದರ ಆಸನದ ಕಡೆಗೆ ನುಗ್ಗಿದ್ದಾರೆ. ಭದ್ರತಾ ಸಿಬ್ಬಂದಿ ಇಬ್ಬರನ್ನೂ ವಶಕ್ಕೆ ಪಡೆದಿದ್ದು, ವಿಚಾರಣೆಗೆ

ಒಳಪಡಿಸಿದ್ದಾರೆ. ಅಪರಿಚಿತರು ಸಂಸದರ ಮೇಲೆ ಒಂದು ರೀತಿಯ ಗ್ಯಾಸ್ (Gas) ಸಿಂಪಡಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಇದೇ ಸಂದರ್ಭದಲ್ಲಿ ಆರೋಪಿಗಳು ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಅವರ ಹೆಸರಿನಲ್ಲಿ ಪಾಸ್ ಪಡೆದುಕೊಂಡಿದ್ದರು ಎಂದು ಬಿಎಸ್‌ಪಿ ಸಂಸದ ದಾನಿಶ್ ಅಲಿ ಆರೋಪಿಸಿದ್ದಾರೆ.

ಪ್ರತಾಪ್ ಸಿಂಹ ಅವರ ಪಿಎ ಕಡೆಯಿಂದ ಅವರು ಸಂಸತ್ ಒಳಗೆ ಬರಲು ಅನುಮತಿ ಪಡೆದಿದ್ದರು ಎಂದೂ ಹೇಳಲಾಗಿದ್ದು, ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (D K Suresh) ಕೂಡ ಈ ಆರೋಪದ ಬಗ್ಗೆ

ಮಾಧ್ಯಮದ ಜತೆ ಮಾತನಾಡುವಾಗ ಪ್ರಸ್ತಾಪಿಸಿದ್ದಾರೆ.

ಪಶ್ಚಿಮ ಬಂಗಾಳದ ಬಿಜೆಪಿ (BJP) ಸಂಸದ ಖಗೇನ್ ಮುರ್ಮು (Khagen Murmu) ಲೋಕಸಭೆಯಲ್ಲಿ ಮಾತನಾಡುತ್ತಿದ್ದಾಗ ಅಪರಿಚಿತರು ಒಳನುಗ್ಗಿದ್ದಾರೆ. ಗೊಂದಲದ ಹಿನ್ನೆಲೆ ಮಧ್ಯಾಹ್ನ 2

ಗಂಟೆಯವರೆಗೆ ಕಲಾಪವನ್ನು ಸ್ಥಗಿತಗೊಳಿಸಲಾಗಿದೆ. ಸುಮಾರು 20 ವರ್ಷ ವಯಸ್ಸಿನ ಇಬ್ಬರು ವ್ಯಕ್ತಿಗಳು ಕೈಯಲ್ಲಿ ಡಬ್ಬಗಳನ್ನು ಹಿಡಿದಿದ್ದರು. ಆ ಡಬ್ಬಗಳಿಂದ ಹಳದಿ ಬಣ್ಣ ಹೊಗೆ ಬರುತಿತ್ತು.

ಅವರಲ್ಲಿ ಒಬ್ಬನು ಸ್ಪೀಕರ್ಕು (Speaker) ರ್ಚಿಯತ್ತ ಓಡಲು ಪ್ರಯತ್ನಿಸುತ್ತಿದ್ದನು. ಕೆಲ ಘೋಷಣೆಗಳನ್ನು ಕೂಗುತ್ತಿದ್ದರು. ಹೊಗೆ ವಿಷಕಾರಿಯಾಗಿರಬಹುದು. ಇದು ವಿಶೇಷವಾಗಿ ಡಿಸೆಂಬರ್ 13 ರಂದು,

2001 ರಲ್ಲಿ ಸಂಸತ್ತಿನ ಮೇಲೆ ದಾಳಿ ನಡೆದ ದಿನದಂದು ಸಂಭವಿಸಿರುವುದು ಗಂಭೀರವಾದ ಭದ್ರತಾ ಉಲ್ಲಂಘನೆ” ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ (Karthi Chidambaram) ಹೇಳಿದ್ದಾರೆ.

ಸಂಸತ್‌ನಲ್ಲಿ ಮೂರು ಹಂತದ ಭದ್ರತಾ ತಪಾಸಣೆ ಇರುತ್ತದೆ. ಇಲ್ಲಿ ಸಂಸದರು ಕೂಡ ತಮ್ಮ ಮೊಬೈಲ್ ಫೋನ್‌ಗಳನ್ನು (Mobile Phone) ಒಳಗೆ ಕೊಂಡೊಯ್ಯಲು ಅವಕಾಶವಿಲ್ಲ. ಹೀಗಿರುವಾಗ

ಅವರು ಕಲರ್ ಸ್ಮೋಕ್ (Color Smoke) ಕಡ್ಡಿಯನ್ನು ಒಳಗೆ ಕೊಂಡೊಯ್ದು, ಒಳಗೆ ಅದನ್ನು ಹೊತ್ತಿಸಿದ್ದು ಹೇಗೆ ಎಂಬುದು ಹಲವು ಅನುಮಾನಗಳನ್ನು ಸೃಷ್ಟಿಸಿದೆ.

ಇದನ್ನು ಓದಿ: ಆರ್​ಟಿಇ ಶಿಕ್ಷಣದಿಂದ ವಂಚಿತರಾದ ಬಡ ಮಕ್ಕಳು: ಬೆಳಗಾವಿ ಸುವರ್ಣ ಸೌಧದ ಮುಂದೆ ಪ್ರತಿಭಟನೆ

Exit mobile version