ಸ್ವಯಂ ಅನುದಾನಿತ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಲು ರಾಜ್ಯ ವಕ್ಫ್ ಮಂಡಳಿ ನಿರ್ಧಾರ!

Bengaluru : ಕರ್ನಾಟಕ ರಾಜ್ಯ (self-funded schools) ವಕ್ಫ್ ಮಂಡಳಿಯು ರಾಜ್ಯದಲ್ಲಿ ಸ್ವಂತ ನಿಧಿಯಿಂದ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಲು ಯೋಜಿಸುತ್ತಿದೆ.

ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿರುವಂತೆ ಈ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಹಿಜಾಬ್ (Hijab) ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ ಎಂದು ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಾದಿ ಹೇಳಿದ್ದಾರೆ.

ಮಂಗಳೂರು, ಶಿವಮೊಗ್ಗ, ಹಾಸನ, ಕೊಡಗು, ಬಿಜಾಪುರ ಮತ್ತು ಹುಬ್ಬಳ್ಳಿಯಲ್ಲಿ ಶಾಲಾ-ಕಾಲೇಜುಗಳನ್ನು (self-funded schools) ಸ್ಥಾಪಿಸುವ ಸಾಧ್ಯತೆಯಿದೆ.  

ಈ ಶಿಕ್ಷಣ ಸಂಸ್ಥೆಗಳಿಗೆ ಒಟ್ಟು 25 ಕೋಟಿ ರೂ. ವೆಚ್ಚವಾಗಲಿದ್ದು, ಅದನ್ನು ರಾಜ್ಯ ವಕ್ಫ್ ಮಂಡಳಿಯು ಭರಿಸಲಿದೆ. ಈ ಶಾಲಾ-ಕಾಲೇಜುಗಳಿಗೆ ಯಾವುದೇ ಸ್ವಾಯತ್ತ ನಿಯಮಗಳಿಲ್ಲ.

ಆದರೆ ಶಿಕ್ಷಣ ಮಂಡಳಿ ಮತ್ತು ವಿಶ್ವವಿದ್ಯಾನಿಲಯಗಳ (Universities) ನಿಯಮಗಳನ್ನು ಅನುಸರಿಸುತ್ತಾರೆ ಎಂದು ಅಧ್ಯಕ್ಷ ಶಾಫಿ ಸಾದಿ ಹೇಳಿದ್ದಾರೆ.

ಇದನ್ನೂ ಓದಿ : https://vijayatimes.com/rahul-gandhi-sarcasam/

ಮೂಲಗಳ ಪ್ರಕಾರ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಡಿಸೆಂಬರ್ ಕೊನೆಯ ವಾರದಲ್ಲಿ ಈ ಶಾಲೆಗಳು ಮತ್ತು ಕಾಲೇಜುಗಳ ಬಗ್ಗೆ ಔಪಚಾರಿಕ ಘೋಷಣೆ ಮಾಡುವ ಸಾಧ್ಯತೆಯಿದೆ. ಇನ್ನು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ವಕ್ಫ್ ಮಂಡಳಿ ಅಡಿಯಲ್ಲಿ ತುಂಡು ಭೂಮಿ ಇದೆ.

ಇದನ್ನು ವಿಶೇಷವಾಗಿ ರಾಜ್ಯದ ವಿವಿಧ ಜಿಲ್ಲೆಗಳ ಮುಸ್ಲಿಂ ಮಹಿಳಾ ಕಾಲೇಜುಗಳಿಗೆ ನೀಡಲಾಗುವುದು. ಇದಕ್ಕಾಗಿ ರಾಜ್ಯ ವಕ್ಫ್ ಮಂಡಳಿಯು 25 ಕೋಟಿ ರೂ.ಗಳನ್ನು ಮೀಸಲಿರಿಸಲಿದೆ. 

ಇನ್ನು ಹಿಜಾಬ್ ಪ್ರತಿಭಟನೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ, ಈ ನಿರ್ಧಾರವನ್ನು ಹಿಜಾಬ್‌ ಪ್ರತಿಭಟನೆಗೂ ಮೊದಲು ತೆಗೆದುಕೊಳ್ಳಲಾಗಿದೆ.

https://fb.watch/h6GjblqLDv/ ಚಿತ್ರದುರ್ಗ, ಹೊಳಲ್ಕೆರೆ : ಪಾಳುಬಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ!

ಈ ಕಾಲೇಜಿಗೆ ಎಲ್ಲರಿಗೂ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಕ್ಫ್‌ಮಂಡಳಿ ಸ್ಥಾಪಿಸುವ ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯದ ಮಾರ್ಗಸೂಚಿಗಳನ್ನು ಅನುಸರಿಸುತ್ತದೆ ಎಂದು ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಾದಿ ಸ್ಪಷ್ಟಪಡಿಸಿದ್ದಾರೆ.
Exit mobile version