ಎಚ್ಚರ……! ಸೇವಾಸಿಂಧು ಹೆಸರಿನಲ್ಲಿ ನಕಲಿ ವೆಬ್ಸೈಟ್ ಲಿಂಕ್ ಸೃಷ್ಟಿಸಿದ್ದಾರೆ ಸೈಬರ್ ಕಳ್ಳರು

Karnataka: ರಾಜ್ಯ ಸರ್ಕಾರದ (Sevasindhu fake website create) ಗೃಹಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ, ಯುವನಿಧಿ ಪ್ರಾಯೋಜಕತ್ವದ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಜನರು ಎಚ್ಚರಿಕೆ ವಹಿಸಬೇಕು.

ಇಲ್ಲದಿದ್ದರೆ ಬ್ಯಾಂಕ್ ಖಾತೆ ಕಳ್ಳತನವಾಗುವುದು ಖಚಿತ. ಸರಕಾರದ ಗೃಹಜ್ಯೋತಿ ಯೋಜನೆಗೆ (Gruha Jyoti) ಅರ್ಜಿ ಆಹ್ವಾನಿಸಿದ ಕೆಲವೇ ದಿನಗಳಲ್ಲಿ ವೆಬ್ ಸೈಟ್ ಹ್ಯಾಕ್ ಆಗಿದೆ ಎಂಬ ಆರೋಪಗಳಿವೆ.

ಮತ್ತೊಂದೆಡೆ, ಸೈಬರ್ ಕಳ್ಳರು ವಿವಿಧ ರೀತಿಯಲ್ಲಿ ನಕಲಿ ವೆಬ್‌ಸೈಟ್‌ಗಳು (Fake Website) ಮತ್ತು ಲಿಂಕ್‌ಗಳನ್ನು ರಚಿಸುವ ಮೂಲಕ ನಾಗರಿಕರ ಬ್ಯಾಂಕ್ ಖಾತೆಗಳನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ,

ಸಾಮಾನ್ಯವಾಗಿ ವಿದ್ಯುತ್ ಬಿಲ್, ಆಧಾರ್ ಮತ್ತು ಮೊಬೈಲ್ ನಂಬರ್ ಅಪ್ಲೋಡ್ ಗೃಹ ಜ್ಯೋತಿ ಯೋಜನೆಗೆ ಕೇಳುತ್ತಿದೆ.. ಇದಲ್ಲದೇ, ಮಾಸಿಕ ಆಧಾರದಲ್ಲಿ ಹಣ ಒದಗಿಸುವ ಗೃಹಲಕ್ಷ್ಮಿ

ಮತ್ತು ಯುವನಿಧಿಗೆ (Sevasindhu fake website create) ಆಧಾರ್, ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

ಸೈಬರ್ ಕಳ್ಳರು ಲಕ್ಷಾಂತರ ಜನರ ಆಧಾರ್ (Adhar Number), ಬ್ಯಾಂಕ್ ಖಾತೆ, ಯುಪಿಎ (UPI) ವಿವರಗಳನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರಿ ಅಧಿಕೃತ ವೆಬ್‌ಸೈಟ್ ಸೇವಾಸಿಂಧು

(Seva Sindhu) ವಿಳಾಸ ಮತ್ತು ಲಿಂಕ್ ಅನ್ನು ಎಲ್ಲೆಡೆ ಹಂಚಿಕೊಳ್ಳಲಾಗುತ್ತಿದೆ. ಈ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಮಾಹಿತಿ ಅಪ್ಲೋಡ್ ಮಾಡುವಂತೆ ಸಲಹೆಗಳು ಬರುತ್ತಿವೆ.

ಇದನ್ನೂ ಓದಿ : ಏಷ್ಯಾ ಕಪ್ : ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯುತ್ತಿದೆ ಭಾರತೀಯ ಕ್ರಿಕೆಟ್‌ ತಂಡ

ಸೈಬರ್ ಕಳ್ಳರು ಇದನ್ನೇ ಟಾರ್ಗೆಟ್ ಮಾಡಿಕೊಂಡು ವೆಬ್ಸೈಟ್ ಅಥವಾ ಲಿಂಕ್ ಗಳನ್ನು ಸೇವಾಸಿಂಧು ಮಾದರಿಯಲ್ಲೇ ಸೃಷ್ಟಿಸಿ ಎಲ್ಲೆಡೆ ವೈರಲ್ (Viral) ಮಾಡಿ ಜನರ ಬ್ಯಾಂಕ್ ಖಾತೆ, ಪಾನ್ ಕಾರ್ಡ್,

ಕ್ರೆಡಿಟ್, ಡೆಬಿಟ್ ಕಾರ್ಡ್ ಮಾಹಿತಿ ಪಡೆದು ಜತೆಗೆ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) (OTP) ಸ್ವೀಕರಿಸಿ ಗ್ಯಾರಂಟಿ ಯೋಜನೆಗೆ ಅರ್ಜಿ ಸ್ವೀಕರಿಸುವ ನೆಪದಲ್ಲಿ ಬ್ಯಾಂಕ್ ಖಾತೆಗೆ ಕನ್ನ ಹಾಕಲು ಗಾಳ

ಎಸೆದಿದ್ದಾರೆ. ಒಂದು ವೇಳೆ ಯಾಮಾರಿ ಸಿಕ್ಕಿಬಿದ್ದರೆ ಅಪಾಯ ತಪ್ಪಿದ್ದಲ್ಲ.

ಇನ್ನು ಕೆಲವು ಆರೋಪ-ಪ್ರತ್ಯಾರೋಪಗಳು ಸರ್ಕಾರದ ಸೇವಾಸಿಂಧು ಫೋರ್ಟಲ್ ಹ್ಯಾಕ್ ಆಗುತ್ತಿದೆ ಎಂದು ಕೇಳಿ ಬರುತ್ತಿವೆ ಇದರ ನಡುವೆಯೇ ನಿಜವಾಗಿಯೂ ಡೇಟಾಗಳನ್ನುಹ್ಯಾಕರ್ಸ್ ಗಳು

ಕದ್ದರೇ ಕೋಟ್ಯಂತರ ಜನರ ಬ್ಯಾಂಕ್ ಖಾತೆಗೆ ಕನ್ನ ಬೀಳುವುದು ಗ್ಯಾರಂಟಿ. ಮೊಬೈಲ್ ಗೆ ಬರುವ ಅಥವಾ ಸಿಕ್ಕಸಿಕ್ಕ ಲಿಂಕ್ ಗಳ ಮೇಲೆ ಕ್ಲಿಕ್ ಮಾಡುವ ಮೊದಲು ಆದ್ದರಿಂದ ಎಚ್ಚರಿಕೆ

ವಹಿಸಬೇಕು ಎಂಬುದು ಸೈಬರ್ ತಜ್ಞರ ಸಲಹೆಯಾಗಿದೆ.

ಯೋಜನೆ ನೆಪದಲ್ಲಿ ಕನ್ನ?:

ಜನರಿಗೆ ಬೆಸ್ಕಾಂ (BESCOM) ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ, ಸಂಪರ್ಕ ಕಡಿತ ಮಾಡುತ್ತೇವೆ ಎಂದು ಬೆದರಿಸಿ ಆನ್ಲೈನ್ ನಲ್ಲಿ ಬಿಲ್ ಮೊತ್ತ ಪಡೆಯುವ

ನೆಪ ಮಾಡಿಕೊಂಡು ಅಮಾಯಕರ ಖಾತೆಯ ಬ್ಯಾಂಕ್ ಖಾತೆ ವಿವರ ಪಡೆದು ಕನ್ನ ಹಾಕುತ್ತಿರುವ ಸಾಕಷ್ಟು ಪ್ರಕರಣಗಳು ಇದೀಗ ಬೆಳಕಿಗೆ ಬಂದಿವೆ.

ಬ್ಯಾಂಕ್ ಖಾತೆಗೆ ಪಾನ್, ಆಧಾರ್ ಲಿಂಕ್ ಮತ್ತು ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವಂತೆ ಆರ್ ಬಿ ಐ(RBI) ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಸೈಬರ್ ಖದೀಮರು

ಸಲಹೆ ಕೊಡುವ ನೆಪದಲ್ಲಿ ಸಹ ಕನ್ನ ಹಾಕುತ್ತಿದ್ದಾರೆ.

ಇಷ್ಟೇ ಅಲ್ಲದೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಜನ್ ಧನ್ ಯೋಜನೆ, ಮುದ್ರಾ ಯೋಜನೆಯಡಿ(Mudra Scheme) ಸಾಲ, ಪಿಎಫ್ ರೀಫಂಡ್, ವೃದ್ಧಾಪ್ಯ ವೇತನ, ಕಿಸಾನ್ ಸಮ್ಮಾನ್ ನಿಧಿ, ಮತ್ತು ಕರೊನಾ

(Corona) ವೇಳೆ ಬ್ಯಾಂಕ್ ಸಾಲದ ಕಂತು ವಿನಾಯಿತಿ ಮುಂತಾದ ಅರ್ಜಿ ಸ್ವೀಕರಿಸುವ ನೆಪದಲ್ಲಿ ದಾಖಲೆ ಪತ್ರಗಳನ್ನು ಪಡೆದು ಮೋಸ ಮಾಡುತ್ತಿರುವ ಸಾಕಷ್ಟು ಪ್ರಕರಣಗಳು ಇದೀಗ ದಾಖಲಾಗುತ್ತಿವೆ.

ಲಾ 1 ರೂ. ಕದ್ದರೂ ಕೋಟಿ ಲೆಕ್ಕ:

ಗ್ಯಾರಂಟಿ ಯೋಜನೆ ಪ್ರತಿಯೊಬ್ಬರಿಗೂ ತಲುಪಲಿದೆ ಎನ್ನಲಾಗುತ್ತಿದೆ. ಅಂದಾಜು 2.50 ಕೋಟಿ ಜನರಿಂದ ಅರ್ಜಿ ಬರುವ ನಿರೀಕ್ಷೆಯಲ್ಲಿದೆ ಸರ್ಕಾರ. ತಲಾ 1 ರೂ. ಇವರಿಂದ ಕನ್ನ ಹಾಕಿದರೂ 2 ಕೋಟಿ ರೂ.ಗೂ

ಅಧಿಕವಾಗಲಿದೆ. ಜನರು ಬ್ಯಾಂಕ್ ಖಾತೆಯಿಂದ 1 ರೂ. ಕಡಿತವಾದರೇ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದನ್ನು ಸೈಬರ್ ಕ್ರೖೆಂನಲ್ಲಿ(Cyber Crime) ಬಾಟಮ್ ಫೀಶ್ ಎಂದು ಕರೆಯಲಾಗುತ್ತದೆ.

ಜನ್ಧನ್ ಖಾತೆಗೆ ಈ ಹಿಂದೆ ಕನ್ನ ಹಾಕಲಾಗಿತ್ತು. ಇದು ಮರು ಕಳುಹಿಸುವುದು ಬೇಡ ಎಂಬುದು ಸೈಬರ್ ತಜ್ಞರ ಸಲಹೆಯಾಗಿದೆ.

ಫಲಾನುಭವಿಗಳು ಹೀಗೆ ಮಾಡಿ

ರಶ್ಮಿತಾ ಅನೀಶ್

Exit mobile version