ಸಿಎಸ್‌ಐ ಬಿಷಪ್‌ ಪಿ.ಕೆ ಸ್ಯಾಮುವಲ್‌ ಆಪ್ತ ಡಾ. ಜಾನ್ಸನ್‌ನಿಂದ ಲೈಂಗಿಕ ಕಿರುಕುಳ!

ETCM

ಪ್ರಮುಖಾಂಶ :

Kolar : ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಇಟಿಸಿಎಂ(ETCM) ಆಸ್ಪತ್ರೆಯ ಆಡಳಿತಾಧಿಕಾರಿ ಆಗಿದ್ದ ಡಾ. ಜಾನ್ಸನ್ ಕುಂದರ್(Dr. Johnson Kundar)

ಆಸ್ಪತ್ರೆಯ ನರ್ಸಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ(Sexual Assault) ನೀಡಿದ ಆರೋಪದಡಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಡಾ. ಜಾನ್ಸನ್ ಕುಂದರ್ ಮೇಲೆ ಎಫ್ ಐಆರ್(FIR) ದಾಖಲಾಗಿದೆ.

ಇದನ್ನೂ ಓದಿ : https://vijayatimes.com/i-have-not-received-the-dosa-sent-by-congress/


ವಿದ್ಯಾರ್ಥಿನಿಯರು ನೀಡಿದ ದೂರಿನಡಿ ಡಾ. ಜಾನ್ಸನ್ ಕುಂದರ್ ಮೇಲೆ ಕಳೆದ ಆಗಸ್ಟ್ 30 ರಂದು ಎಫ್ ಐಆರ್ ದಾಖಲಾಗಿದ್ದು.

ಆಸ್ಪತ್ರೆಯ ನರ್ಸಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರು ನೇರ ಠಾಣೆಗೆ ತೆರಳಿ ತಮ್ಮ ಮೇಲಾದ ದೌರ್ಜನ್ಯದ ವಿರುದ್ಧ ದೂರು ದಾಖಲು ಮಾಡಿದ್ದಾರೆ.


ದೂರಿನಡಿ ಪ್ರಕರಣ ದಾಖಲು ಮಾಡಿಕೊಂಡಿರುವ ಮಹಿಳಾ ಠಾಣೆ ಪೊಲೀಸರು ಗುರುವಾರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದೂರು ದಾಖಲು ಆಗುತ್ತಿದ್ದಂತೆ ಡಾ. ಜಾನ್ಸನ್ ಕುಂದ ತಲೆ ಮರೆಸಿಕೊಂಡಿರುವುದಾಗಿ ತಿಳಿದು ಬಂದಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.


ಕಳೆದ 17 ವರ್ಷಗಳಿಂದ ಇಟಿಸಿಎಂ ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಖಜನಾಧಿಕಾರಿಯಾಗಿದ್ದ ಡಾ. ಜಾನ್ಸನ್ ಕುಂದರ್ ಅವರ ಕುಟುಂಬ ಸಿಎಸ್‌ಐ ಬಿಷಪ್‌ ಪ್ರಸನ್ನ ಕುಮಾರ್‌ ಸ್ಯಾಮುವಲ್‌ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದೆ.

ಅಲ್ಲದೆ ಮೆಥೋಡಿಸ್ಟ್‌ ಹಾಗೂ ಸಿಎಸ್‌ಐ ಎರಡೂ ಚರ್ಚ್‌ಗಳ ಆಡಳಿತ ಮಂಡಳಿಯಲ್ಲಿ ಹಿಡಿತ ಸಾಧಿಸಿರುವ ಡಾ. ಜಾನ್ಸನ್ ಕುಂದರ್ ಅವರ ಕುಟುಂಬದ ಮೇಲೆ ಈ ಮೊದಲು ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು.

ತಮ್ಮ ಮೇಲೆ ಆರೋಪ ಮಾಡಿದವರ ವಿರುದ್ಧವೇ ಸುಳ್ಳು ದೂರು ದಾಖಲು ಮಾಡಿದ್ದರು. ಈ ಸುಳ್ಳು ಆರೋಪಗಳ ಬಗ್ಗೆ ನ್ಯಾಯಾಲಯದಲ್ಲಿ ಕೂಲಂಕುಷ ತನಿಖೆಯಾಗಿ ಪ್ರಕರಣಗಳನ್ನು ಖುಲಾಸೆಗೊಳಿಸಲಾಗಿತ್ತು.

ಅಲ್ಲದೆ ಡಾ.ಜಾನ್ಸನ್ ಕುಂದರ್ ಮೇಲೆ ಹಾಕಿದ್ದ ಕೆಲ ದೂರುಗಳು ಇನ್ನೂ ನ್ಯಾಯಾಲಯದಲ್ಲಿ ವಾದ ಪ್ರತಿವಾದಗಳು ನಡೆಯುತ್ತವೆ.


ಇತ್ತೀಚೆಗೆ ಆಸ್ಪತ್ರೆಯಲ್ಲಿ ಭಾರೀ ಅವ್ಯವಹಾರ ಹಾಗೂ ಅಕ್ರಮಗಳು ನಡೆದಿವೆ ಎಂಬ ದೂರಿನ ಮೇರೆಗೆ ಇಟಿಸಿಎಂ ಆಸ್ಪತ್ರೆಯ ಬೋರ್ಡ್ ಆಫ್ ಕಮಿಟಿ ತನಿಖೆಗೆ ಕೈಗೊಂಡಿತ್ತು. ಸುಮಾರು 19 ಜನರಿಂದ ಇಟಿಸಿಎಂ ಬೋಟ್ ಹೌಸ್ ಕಮಿಟಿ ನಡೆಸಿದ ಸಮೀಕ್ಷೆಯಲ್ಲಿ,

https://youtu.be/zi6g-d3dDwM

ಹಣ ದುರುಪಯೋಗ ಹಾಗೂ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಸಿರುವ ಬಗ್ಗೆ ಬಹಿರಂಗಗೊಂಡ ಬೆನ್ನಲ್ಲೇ

ಡಾ.ಜಾನ್ಸನ್ ಕುಂದರ್ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿ ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಖಜಾಂಜಿ ಹಾಗೂ ಸಂಸ್ಥೆಯ ಇತರ ಹುದ್ದೆಯಿಂದ ಕೈಬಿಡಲಾಯಿತು.


ಇನ್ನೂ ನೊಂದ ವಿದ್ಯಾರ್ಥಿನಿಯರು ಆಸ್ಪತ್ರೆಯ ಆಡಳಿತಾಧಿಕಾರಿ ಹುದ್ದೆಯಿಂದ ಡಾ.ಜಾನ್ಸನ್ ಕುಂದರ್ ಅನ್ನು ತೆಗೆದು ಹಾಕಿದ ಮೇರೆಗೆ ಧೈರ್ಯದಿಂದ ಪೊಲೀಸರಿಗೆ ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ವಿರುದ್ಧ ದಾಖಲೆ ಸಮೇತರಾಗಿ ದೂರು ದಾಖಲು ಮಾಡಿದ್ದಾರೆ.


ಈ ಬಗ್ಗೆ ಕ್ರೈಸ್ತ ಸಮುದಾಯದ ಪ್ರಮುಖರು ಡಾ.ಜಾನ್ಸನ್ ಕುಂದರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹವರಿಂದ ಸಮುದಾಯದ ಸೇವಾ ಕಾರ್ಯಗಳಿಗೆ ಅಪಮಾನವಾಗಿದೆ. ಈ ಮೊದಲು ಇವರ ಮೇಲಿನ ಸಾಕಷ್ಟು ಆರೋಪಗಳು ಕೇಳಿ ಬಂದಾಗ ಕ್ರಮ ಜರುಗಿಸಿದ್ದರೆ ಈ ರೀತಿ ಆಗುತ್ತಿರಲಿಲ್ಲ.

ಇದನ್ನೂ ಓದಿ : https://vijayatimes.com/simple-beauty-tips-are-here/

ಈಗ ಧೈರ್ಯವಾಗಿ ಮುಂದೆ ಬಂದಿರುವ ವಿದ್ಯಾರ್ಥಿನಿಯರ ಪರ ನ್ಯಾಯ ಇದ್ದರೆ ನಾವು ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದಾರೆ.

Exit mobile version