ಏಷ್ಯಾ ಕಪ್ 2022 ; ಶಾಹಿದ್ ಅಫ್ರಿದಿ ಹೇಳಿಕೆ ವೈರಲ್‌!

Cricket

Islamabad : ಏಷ್ಯಾಕಪ್‌ (Asia Cup 2022) ಟಿ-20 ಟೂರ್ನಿಯ ಭಾರತ (India) ಮತ್ತು ಪಾಕಿಸ್ತಾನ
(Pakistan) ಪಂದ್ಯದ ವೇಳೆ ನನ್ನ ಕಿರಿಯ ಮಗಳು ಭಾರತದ ಧ್ವಜವನ್ನೇ ಹಿಡಿದು ಸಂಭ್ರಮಿಸಿದ್ದಳು.

ಅದರ ವಿಡಿಯೋವನ್ನು ನನ್ನ ಹೆಂಡಿತಿ ನನಗೆ ಕಳುಹಿಸಿದ್ದಳು, ಆದರೆ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್‌ ಅಫ್ರಿದಿ (Shahid Afridi) ನೀಡಿರುವ ಹೇಳಿಕೆ ಇದೀಗ ಎಲ್ಲೆಡೆ ವೈರಲ್‌ (Viral) ಆಗಿದೆ.

ಈ ಕುರಿತು ಪಾಕಿಸ್ತಾನದ ಮಾದ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, 2022ರ ಏಷ್ಯಾಕಪ್‌ ಟಿ-20 ಟೂರ್ನಿಯಲ್ಲಿ ಪಾಕಿಸ್ತಾನ ಮತ್ತು ಭಾರತದ ನಡುವಿನ ಮೊದಲ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ(Stadium) ಶೇಕಡಾ 90ರಷ್ಟು ಭಾರತದ ಅಭಿಮಾನಿಗಳಿದ್ದರೆ,

ಇದನ್ನೂ ಓದಿ : https://vijayatimes.com/3-year-old-girl-got-up-at-her-own-funeral/

ಕೇವಲ ಶೇಕಡಾ 10ರಷ್ಟು ಮಾತ್ರ ಪಾಕಿಸ್ತಾನದ ಅಭಿಮಾನಿಗಳಿದ್ದರು ಎಂದು ನನ್ನ ಹೆಂಡತಿ ನನಗೆ ಕರೆ ಮಾಡಿ ಹೇಳಿದ್ದಳು. ಇದೇ ವೇಳೆ ಅಲ್ಲಿ ಪಾಕಿಸ್ತಾನದ ಧ್ವಜಗಳು ಕೂಡಾ ಸಿಗುತ್ತಿರಲಿಲ್ಲ,

ಹೀಗಾಗಿ ನನ್ನ ಕಿರಿಯ ಮಗಳು ಭಾರತದ ಧ್ವಜವನ್ನೇ ಹಿಡಿದು ಬೀಸುತ್ತಿದ್ದಳು ಎಂದು ಶಾಹಿದ್‌ ಅಫ್ರಿದಿ ಹೇಳಿಕೊಂಡಿದ್ದಾರೆ.

ಏಷ್ಯಾಕಪ್‌ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಶ್ರೀಲಂಕಾ(Sri Lanka) ತಂಡ ಸೋಲಿಸಿದಾಗ ಸ್ಟೇಡಿಯಂನಲ್ಲೇ ಶ್ರೀಲಂಕಾ ಧ್ವಜವನ್ನು ಹಿಡಿದು, ಭಾರತದ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್ ಸಂಭ್ರಮಿಸಿದ್ದರು. ಈ ವಿಡಿಯೋ ಎಲ್ಲೆಡೆ ಭಾರೀ ವೈರಲ್‌ ಆಗಿತ್ತು.

ಪಾಕಿಸ್ತಾನ ಮಾದ್ಯಮಗಳು ಇದನ್ನು ದೊಡ್ಡ ಸುದ್ದಿ ಮಾಡಿದ್ದವು, ಆದರೆ ತಾವು ಇಷ್ಟಪಡುವ ತಂಡಗಳನ್ನು ಬೆಂಬಲಿಸುವ ಹಕ್ಕು ಅಭಿಮಾನಿಗಳಿಗಿದೆ ಎಂದು ಶಾಹಿದ್‌ ಅಫ್ರಿದಿ ಹೇಳಿಕೊಂಡಿದ್ದಾರೆ.
 
ಗೌತಮ್‌ ಗಂಭೀರ ಶ್ರೀಲಂಕಾ ಧ್ವಜವನ್ನು ಹಿಡಿದಿರುವುದು ಅವರ ಇಚ್ಚೆ, ಅದನ್ನು ಪ್ರಶ್ನೆ ಮಾಡುವ ಹಕ್ಕು ನಮಗಿಲ್ಲ. 

ಇದನ್ನೂ ಓದಿ : https://vijayatimes.com/my-daughter-waved-india-flag-says-afridi/

ಅವರು ಆ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಬೆಂಬಲಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಗೌತಮ್‌ ಗಂಭೀರ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
Exit mobile version