ಸಮಾಜ ಅವಮಾನಿಸಿದರು ಕುಗ್ಗದೇ UPSC ಫಲಿತಾಂಶಗಳಲ್ಲಿ 177ನೇ ರ್ಯಾಂಕ್ ಪಡೆದ 7 ವರ್ಷದ ಮಗುವಿನ ತಾಯಿ!

ಹಾಪುರ್‌ನ ಪಿಲ್ಖುವಾ ನಿವಾಸಿ ಶಿವಂಗಿ ಗೋಯಲ್(Shivangi Goyal) ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ(UPSC Exam) 177 ನೇ ರ್ಯಾಂಕ್ ಪಡೆಯುವ ಮೂಲಕ ತಮ್ಮ ಕುಟುಂಬಕ್ಕೆ ಮಾತ್ರವಲ್ಲದೆ, ಇಡೀ ಜಿಲ್ಲೆಗೆ ಗೌರವ ತಂದಿದ್ದಾರೆ.

ಆದರೆ ಆಕೆಯ ಯಶಸ್ಸಿನ ಪಯಣ ತುಂಬಾ ಕಷ್ಟಕರವಾಗಿತ್ತು. ಶಿವಾಂಗಿಗೆ ಮದುವೆಯಾಗಿದ್ದು, ಒಬ್ಬಳು ಮಗಳಿದ್ದಾಳೆ. ದಿನನಿತ್ಯ ಅತ್ತೆ-ಮಾವಂದಿರ ಕಿರುಕುಳದಿಂದ ಬೇಸತ್ತ ಆಕೆ, ತನ್ನ ತಂದೆ-ತಾಯಿಯೊಂದಿಗೆ ವಾಸ್ತವ್ಯ ಹೂಡಿದ್ದಾರೆ. ಆಕೆಯ ವಿಚ್ಛೇದನ(Divorce) ಪ್ರಕರಣವೂ ಪತಿಯೊಂದಿಗೆ ಇನ್ನು ನ್ಯಾಯಲಯದಲ್ಲಿ ನಡೆಯುತ್ತಿದೆ. ತಮ್ಮ ಸಾಧನೆ ಬಗ್ಗೆ ಮಾತನಾಡಿದ ಶಿವಾಂಗಿ, ಸಮಾಜದಲ್ಲಿರುವ ವಿವಾಹಿತ ಮಹಿಳೆಯರಿಗೆ ತಮ್ಮ ಅತ್ತೆಯ ಮನೆಯಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ದಯವಿಟ್ಟು ಭಯಪಡಬೇಡಿ, ಹೆದರಬೇಡಿ.

ನಿಮ್ಮ ಕಾಲಿನ ಮೇಲೆ ನೀವು ನಿಲ್ಲಬಲ್ಲಿರಿ ಎಂಬುದನ್ನು ಅವರಿಗೆ ತೋರಿಸಿ, ಮಹಿಳೆಯರು ಏನು ಬೇಕಾದರೂ ಮಾಡಬಹುದು ಎಂಬ ಸಂದೇಶವನ್ನು ನಾನು ನೀಡಲು ಬಯಸುತ್ತೇನೆ. ಚೆನ್ನಾಗಿ ಓದಿ, ಕಷ್ಟಪಟ್ಟು ಕೆಲಸ ಮಾಡಿದರೆ ಐಎಎಸ್‌ ಆಗಬಹುದು’ ಎಂದು ಶಿವಾಂಗಿ ತಮ್ಮ ಅನುಭವವನ್ನು ನೆನಪಿಸಿಕೊಂಡು ಸ್ಪೂರ್ತಿದಾಯಕ ಮಾತುಗಳನ್ನಾಡಿದ್ದಾರೆ.

ಮದುವೆಗೂ ಮುನ್ನವೇ ಐಎಎಸ್(IAS) ಆಗಬೇಕೆಂಬ ಆಸೆ ಇತ್ತು. ಎರಡು ಬಾರಿ ಪ್ರಯತ್ನಿಸಿದರು ಆಗಿಲ್ಲ, ಎರಡೂ ಬಾರಿ ಕೂಡ ವಿಫಲರಾಗಿದ್ದಾರೆ. ನಂತರ ಅವರು ಮದುವೆಯಾದರು. ತನ್ನ ಅತ್ತೆಯಿಂದ ಕೌಟುಂಬಿಕ ಹಿಂಸೆಯನ್ನು ಅನುಭವಿಸಿದ್ದರಿಂದ, ತನ್ನ ಏಳು ವರ್ಷದ ಮಗಳೊಂದಿಗೆ ತನ್ನ ತಾಯಿಯ ಮನೆಗೆ ವಾಪಾಸ್ ಬಂದು ಜೀವನ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಈ ದಿನದ ಕನಸು ಕಾಣುತ್ತಿದ್ದೆ ಎಂದು ಶಿವಾಂಗಿ ಹೇಳಿದ್ದಾರೆ.

ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ನಂತರ, ಅಂತಿಮವಾಗಿ, ಆ ದಿನ ನನಗೆ ಇಂದು ಒದಗಿ ಬಂದಿದೆ. ನನ್ನ ಯಶಸ್ಸಿನ ಶ್ರೇಯವನ್ನು ತನ್ನ ಹೆತ್ತವರು ಮತ್ತು ಮಗಳು ರೈನಾಗೆ ಅರ್ಪಿಸುತ್ತೇನೆ. ಶಿವಾಂಗಿ ಅವರು ಹಾಪುರ ನಿವಾಸಿ. ಆಕೆಯ ತಂದೆ ರಾಜೇಶ್ ಗೋಯಲ್ ಉದ್ಯಮಿ ಮತ್ತು ತಾಯಿ ಗೃಹಿಣಿ. ತಾನು ಶಾಲೆಯಲ್ಲಿದ್ದಾಗ ಪ್ರಾಂಶುಪಾಲರು ಯುಪಿಎಸ್‌ಸಿಗೆ ತಯಾರಿ ನಡೆಸುವಂತೆ ಹೇಳಿದ್ದರು ಎಂದು ಶಿವಂಗಿ ಸಂದರ್ಶನದಲ್ಲಿ ಹೇಳಿದ್ದಾರೆ. ಅಂದಿನಿಂದ ಐಎಎಸ್ ಆಗಬೇಕೆಂಬುದು ಆಕೆಯ ಕನಸಾಗಿತ್ತು.

Exit mobile version