Bengaluru: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿರುವ ಅಭ್ಯರ್ಥಿಗಳ ಮಾಹಿತಿಯನ್ನು ಚುನಾವಣಾ ಆಯೋಗ (Shock for all 3 parties) ಬಿಡುಗಡೆ ಮಾಡಿದೆ.

ಠೇವಣಿ ಕಳೆದುಕೊಂಡಿರುವ ಅಭ್ಯರ್ಥಿಗಳ ಠೇವಣಿಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಂಡಿದೆ. ಇದೀಗ ರಾಜ್ಯದ ಪ್ರಮುಖ ಪಕ್ಷಗಳಾಗಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದ
ಅಧಿಕೃತವಾಗಿ ಸ್ಪರ್ಧೆ ಮಾಡಿದ್ದ ಎಷ್ಟು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ ಎಂಬ ಅಂಕಿಅಂಶಗಳ ಮೇಲೆ ಮುಂದಿನ ಲೋಕಸಭಾ ಚುನಾವಣೆಯ ಲೆಕ್ಕಾಚಾರಗಳನ್ನು ಕೆಲ ರಾಜಕೀಯ ತಜ್ಞರು ಹಾಕುತ್ತಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ತ್ರಿಕೋನ ಹಣಾಹಣಿ, ಮಧ್ಯ ಮತ್ತು ಉತ್ತರ ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆದಿದೆ. ಇದು ಹೀಗೆಯೇ
ಮುಂದುವರಿದರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಲ್ಪಮಟ್ಟಿನ ಮೇಲುಗೈ ಸಾಧಿಸಬಹುದು ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ. ಆದರೆ ಮೂರು ಪಕ್ಷಗಳು ಹೆಚ್ಚಿನ ಕ್ಷೇತ್ರಗಳಲ್ಲಿ ಠೇವಣಿ


ಕಳೆದುಕೊಂಡಿರುವುದು ಮೂರು ಪಕ್ಷಗಳಿಗೂ (Shock for all 3 parties) ಶಾಕ್ ಆಗಿದೆ.
ಇದನ್ನು ಓದಿ: ಹಿರಿಯ ನಾಗರಿಕರ ಎಫ್ಡಿ ಮೇಲೆ 9% ಬಡ್ಡಿ ನೀಡುವ 6 ಬ್ಯಾಂಕ್ಗಳು…!
ಕಾಂಗ್ರೆಸ್
ಸ್ಪರ್ಧಿಸಿದ ಒಟ್ಟು ಸ್ಥಾನಗಳು: 223
ಗೆದ್ದ ಸ್ಥಾನಗಳು: 135
ಪಡೆದ ಮತಗಳು: 43.08 %
ಕಳೆದುಹೋದ ಠೇವಣಿ: 11 ಸ್ಥಾನಗಳು
ಬಿಜೆಪಿ
ಸ್ಪರ್ಧಿಸಿದ ಒಟ್ಟು ಸ್ಥಾನಗಳು: 224
ಗೆದ್ದ ಸ್ಥಾನಗಳು: 66
ಪಡೆದ ಮತಗಳು: 36 %
ಕಳೆದುಹೋದ ಠೇವಣಿಗಳು: 31
ಜೆಡಿಎಸ್
ಸ್ಪರ್ಧಿಸಿದ ಸ್ಥಾನಗಳು: 209
ಗೆದ್ದ ಸ್ಥಾನಗಳು: 19
ಪಡೆದ ಮತಗಳು: 14.27%
ಉಳಿಸಿದ ಠೇವಣಿಗಳು: 139.
ಬಿಎಸ್ಪಿ
ಸ್ಪರ್ಧಿಸಿದ ಸ್ಥಾನಗಳು: 133
ಗೆಲುವು: ಶೂನ್ಯ
ಪಡೆದ ಮತಗಳು: 0.51%
ಉಳಿಸಿದ ಠೇವಣಿಗಳು: 132
ಎಎಪಿ
ಸ್ಪರ್ಧಿಸಿದ ಸ್ಥಾನಗಳು: 209
ಗೆಲುವು: ಶೂನ್ಯ
ಪಡೆದ ಮತಗಳು: 0.62%
ಕಳೆದುಹೋದ ಠೇವಣಿಗಳು: 209
ಎಸ್ ಡಿ ಪಿಐ
ಸ್ಪರ್ಧಿಸಿದ ಸ್ಥಾನಗಳು: 16
ಗೆಲುವು: ಶೂನ್ಯ
ಪಡೆದ ಮತಗಳು: 3.4%
ಕಳೆದುಹೋದ ಠೇವಣಿಗಳು: 15
ಕೆ.ಆರ್.ಪಿ.ಪಿ
ಸ್ಪರ್ಧಿಸಿದವರು: 46
ಗೆಲುವು: ಒಂದು
ಪಡೆದ ಮತಗಳು: 3.2%
ಕಳೆದುಹೋದ ಠೇವಣಿಗಳು: 42