ಸಿದ್ದರಾಮಯ್ಯ ನೇರ ಆರೋಪ : ಗುಜರಾತ್‌ನಲ್ಲಿ ಆಮ್‌ಆದ್ಮಿ ಪಕ್ಷಕ್ಕೆ ಬಿಜೆಪಿ ಫಂಡಿಂಗ್‌ ಮಾಡಿದೆ

Bangalore : ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ(Assembly election) ಕಾಂಗ್ರೆಸ್‌ ಪಕ್ಷವನ್ನು ಸೋಲಿಸಲು ಆಮ್‌ಆದ್ಮಿ ಪಕ್ಷಕ್ಕೆ ಆಡಳಿತರೂಢ ಬಿಜೆಪಿ(Siddaramaiah Allegation on BJP) ಫಂಡಿಂಗ್‌ ಮಾಡಿದೆ.

ಹೀಗಾಗಿ ಗುಜರಾತ್‌ನಲ್ಲಿ ಕಾಂಗ್ರೆಸ್‌ ಪಕ್ಷ ಖರ್ಚು ಮಾಡಿದ ಹಣಕ್ಕಿಂತ ಹೆಚ್ಚಿನ ಹಣವನ್ನು ಆಮ್‌ಆದ್ಮಿ ಪಕ್ಷ ಖರ್ಚು ಮಾಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ವಿಷಯದ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿರುವ ಅವರು, ಗುಜರಾತ್‌ ವಿಧಾನಸಭಾ ಚುನಾವಣೆಯ ಫಲಿತಾಂಶ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ(State Assembly Elections) ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಗುಜರಾತ್‌ ರಾಜ್ಯದಲ್ಲಿನ ವಿಷಯಗಳೇ ಬೇರೆ, ನಮ್ಮ ರಾಜ್ಯದಲ್ಲಿರುವ ವಿಷಯಗಳೇ ಬೇರೆ.

ಹೀಗಾಗಿ ಅಲ್ಲಿನ ಫಲಿತಾಂಶ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಗುಜರಾತ್‌ನಲ್ಲಿ ಆಮ್‌ಆದ್ಮಿ ಪಕ್ಷ ಕಾಂಗ್ರೆಸ್‌ ಪಕ್ಷದ ಮತಬ್ಯಾಂಕ್‌ನ್ನು ಒಡೆದಿದೆ.

ಹೀಗಾಗಿ ಈ ಬಾರಿ ಅಲ್ಲಿ ಕಾಂಗ್ರೆಸ್‌(Siddaramaiah Allegation on BJP) ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಆದರೆ ಬಿಜೆಪಿಯ ಈ ತಂತ್ರಗಾರಿಕೆ ಕರ್ನಾಟಕದಲ್ಲಿ ನಡೆಯುವುದಿಲ್ಲ.

ಇದನ್ನೂ ಓದಿ : https://vijayatimes.com/devegowdas-bitter-experiences-parliament/

ಕರ್ನಾಟಕದಲ್ಲಿ ಆಮ್‌ಆದ್ಮಿ ಪಕ್ಷದ ಆಟವೂ ನಡೆಯುವುದಿಲ್ಲ ಎಂದಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ(Narendra Modi) ಪ್ರಭಾವದ ಕುರಿತು ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,

ಪ್ರಧಾನಿ ಮೋದಿಯವರ ಪ್ರಭಾವ ಕರ್ನಾಟಕದಲ್ಲಿ ನಡೆಯುವುದಿಲ್ಲ. ದೇಶದಲ್ಲಿ ಮೋದಿ ಅವರ ಪ್ರಭಾವ ಉಳಿದಿಲ್ಲ.

ಹಾಗೇ ಮೋದಿ ಪ್ರಭಾವವಿದ್ದರೆ 15 ವರ್ಷಗಳಿಂದ ದೆಹಲಿ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ತನ್ನ ಅಧಿಕಾರವನ್ನು ಕಳೆದುಕೊಳ್ಳುತ್ತಿರಲಿಲ್ಲ.

ಪ್ರಧಾನಿ ಮೋದಿಯವರು ವಾಸಿಸುವ ದೆಹಲಿಯಲ್ಲೇ ಅವರ ಪ್ರಭಾವ ಉಳಿಯಲಿಲ್ಲ ಈ ಕಾರಣಕ್ಕಾಗಿಯೇ ಮೋದಿ ಹವಾ ದೆಹಲಿಯಲ್ಲೇ ನಡೆಯಲಿಲ್ಲ, ಇನ್ನು ಕರ್ನಾಟಕದಲ್ಲಿ ನಡೆಯುತ್ತಾ? ಎಂದು ಅವರು ಪ್ರಶ್ನಿಸಿದರು.

ಇದನ್ನೂ ನೋಡಿ : https://fb.watch/hhxiZ83cnZ/ ಅಂಧನಿಗೆ ವಂಚನೆ! ಸರ್ಕಾರದಿಂದ ಅಂಧನಿಗೆ ಮೋಸ.

ಇನ್ನು ಇಂದು ಪ್ರಕಟಗೊಂಡಿರುವ ಗುಜರಾತ್‌(Gujarat) ಮತ್ತು ಹಿಮಾಚಲ ಪ್ರದೇಶ(Himachal pradesh) ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಮರಳಿ ಅಧಿಕಾರ ಹಿಡಿದಿದೆ.

ಆದರೆ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣೆ ಏರ್ಪಟ್ಟಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ .

Exit mobile version