ಆರ್‍ಎಸ್‍ಎಸ್‍ನವರು ಮೂಲ ಭಾರತೀಯರಲ್ಲ : ಸಿದ್ದರಾಮಯ್ಯ!

Congress

ಆರ್‍ಎಸ್‍ಎಸ್‍ನವರು(RSS) ಮೂಲ ಭಾರತೀಯರಲ್ಲ ಎಂಬ ಸಂಗತಿಯನ್ನು ಈ ಹಿಂದೆ ಸಂಸತ್ತಿನಲ್ಲೇ ಸ್ಪಷ್ಟಪಡಿಸಲಾಗಿತ್ತು. ಆದರೆ ಈಗ ಇಂತಹ ವಿಚಾರಗಳ ಚರ್ಚೆ ಬೇಡ.

ನಾವು ಈ ಕುರಿತು ಪ್ರಶ್ನೆ ಮಾಡಿದರೆ ನಮ್ಮ ಮೇಲೆಯೇ ಮುಗಿಬೀಳುತ್ತಾರೆ. ಚರಿತ್ರೆಯನ್ನು, ಇತಿಹಾಸವನ್ನು(History) ಕೆದಕುತ್ತಾ ಹೋಗಬಾರದು ಎಂದು ಸಿದ್ದರಾಮಯ್ಯ(Siddaramaiah) ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ(KPCC Office) ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‍ಎಸ್‍ಎಸ್‍ನವರು ಭಾರತೀಯರಾ? ಇವರೇನು ದ್ರಾವಿಡರಾ? ಎಂದು ಪ್ರಶ್ನಿಸಿದ ಅವರು, ಆರ್‍ಎಸ್‍ಎಸ್‍ನವರ ಮೂಲ ಭಾರತವಲ್ಲ ಎಂದು ಈ ಹಿಂದೆ ಸಂಸತ್ತಿನಲ್ಲಿ ಸ್ಪಷ್ಟಪಡಿಸಲಾಗಿತ್ತು.

ಆದರೆ ಈಗ ಚರಿತ್ರೆಯನ್ನು ಕೆದಕುವ ಪ್ರಯತ್ನ ಮಾಡಬಾರದು. ಇದರಿಂದ ಸಮಾಜದ ಬೆಳವಣಿಗೆಯಾಗುವುದಿಲ್ಲ. ಸಮಾಜದಲ್ಲಿ ದ್ವೇಷ ನಿರ್ಮಾಣವಾಗುತ್ತದೆ, ಜನರ ಮಧ್ಯೆ ಕಂದಕ ಸೃಷ್ಟಿಯಾಗುತ್ತದೆ. ಇದೆಲ್ಲವನ್ನೂ ಬಿಟ್ಟು ಮುಂದೆ ಹೋಗುವ ಪ್ರಯತ್ನವನ್ನು ಮಾಡಬೇಕೆಂದು ತಿಳಿಸಿದರು. ಇನ್ನು ಜವಾಹರ ಲಾಲ್ ನೆಹರೂ(Jawaharlal Nehru) ಮತ್ತು ಪ್ರಧಾನಿ ನರೇಂದ್ರ ಮೋದಿಗೂ(Narendra Modi) ಹೋಲಿಕೆ ಸಾಧ್ಯವಿಲ್ಲ. ಮೋದಿ ಎಲ್ಲಿ? ನೆಹರೂ ಎಲ್ಲಿ? ಹೋಲಿಕೆ ಮಾಡಲು ಸಾಧ್ಯವೇ ಇಲ್ಲ.

ನೆಹರೂ ಅವರ ಸಾಧನೆಗಳನ್ನು ಅಳಿಸುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ. ನೆಹರೂ ದೇಶಕ್ಕಾಗಿ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿದರು. ಆದರೆ ಮೋದಿ ಅದೆಲ್ಲವನ್ನು ರದ್ದು ಮಾಡಿ ನೀತಿ ಆಯೋಗ ತಂದರು ಎಂದು ಅಸಮಾಧಾನ ಹೊರಹಾಕಿದರು. ಇನ್ನು ಬಿಜೆಪಿ ಸರ್ಕಾರ ಮಂದಿರ ಎಲ್ಲಿತ್ತು? ಮಸೀದಿ ಎಲ್ಲಿತ್ತು? ಎಲ್ಲಿ ಮೂರ್ತಿಗಳಿದ್ದವು ಎಂದು ಕೆದಕುವ ಕೆಲಸ ಮಾಡುತ್ತಿದೆ. ಈ ಕುರಿತು ಪ್ರಶ್ನೆ ಮಾಡಿದರೆ ನೀವು ಈ ದೇಶದವರೇ ಅಲ್ಲಾ. ನಿಮ್ಮ ಮೂಲ ಯಾವುದು? ಎಂದು ಚರ್ಚೆ ಆರಂಭಿಸುತ್ತಾರೆ.

ಇಷ್ಟು ದಿನಾ ನಾನೂ ಮಾತನಾಡಬಾರದು ಎಂದು ಸುಮ್ಮನಿದ್ದೆ, ಆರ್‍ಎಸ್‍ಎಸ್‍ನವರು ಭಾರತದವರಾ? ಅವರ ಮೂಲ ಭಾರತವಾ? ಎಂದು ನಾವು ಪ್ರಶ್ನಿಸಬಹುದು ಎಂದರು.

Exit mobile version