ಕರುನಾಡಿನ ನಂದಿನಿ ಹಾಗೂ ಗುಜರಾತ್‌ನ ಅಮುಲ್‌ನೊಂದಿಗೆ ವಿಲೀನ : ಅಮಿತ್‌ ಷಾ ಹೇಳಿಕೆಗೆ ಸಿದ್ದರಾಮಯ್ಯ ಖಂಡನೆ

Bengaluru: ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್)(Siddaramaiah condemns AmitShah’s statement) ನಂದಿನಿ(Nandini) ಬ್ರಾಂಡನ್ನು ಗುಜರಾತ್‌ನ ಅಮುಲ್(Amul) ಬ್ರಾಂಡ್ ನೊಂದಿಗೆ ವಿಲೀನ ಮಾಡುವ ಕೇಂದ್ರ ಗ್ರಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಸಲಹೆಯನ್ನು ಮಾಜಿ ಮುಖ್ಯಮಂತ್ರಿ,

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಟುವಾಗಿ ಖಂಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು(siddaramaiah),

“ ಕರ್ನಾಟಕ ಹಾಲು ಮಹಾ ಮಂಡಳಿ ಗುಜರಾತ್‌ನ ಅಮೂಲ್ ಜೊತೆಗೂಡ ಬೇಕೆಂಬ ಬಯಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit shah) ಅವರು ವ್ಯಕ್ತಪಡಿಸಿದ್ದಾರೆ.

ಕನ್ನಡಿಗರು ಈಗಲೇ ಎಚ್ಚೆತ್ತುಕೊಂಡು, ವಿರೋಧ ತೋರ್ಪಡಿಸದಿದ್ದರೆ, ನಮ್ಮ ರಾಜ್ಯದ ಬ್ಯಾಂಕ್‌ಗಳಿಗೆ ಬಂದ ಗತಿಯೇ ನಂದಿನಿಗೂ ಬರಲಿದೆ. ನಮ್ಮ ರಾಜ್ಯದ ಹಾಲು ಉತ್ಪಾದಕ ರೈತರು 20,000 ಕೋಟಿ ರೂಪಾಯಿವರೆಗೆ ಹಾಲಿನ ವಹಿವಾಟು ಮಾಡುತ್ತಾರೆ.

https://youtu.be/gRAVtWuZck8

ಇವರ ಬದುಕು ನಿಂತಿರುವುದೇ ಹೈನುಗಾರಿಕೆ ಮೇಲೆ. ಮಕ್ಕಳ ವಿದ್ಯಾಭ್ಯಾಸ,

ಆಸ್ಪತ್ರೆಯ ಖರ್ಚುನಿಂದ ಹಿಡಿದು, ಅಕ್ಕಿ ಬೇಳೆ, ಬಟ್ಟೆ ಇತ್ಯಾದಿ ಹಾಲಿನಿಂದಲೇ ಬರಬೇಕು. ಇಂಥಾ ಚಿನ್ನದ ಮೊಟ್ಟೆ ಇಡುವ ಕೊಳಿಯ ಮೇಲೆ ಈಗ ಗುಜರಾತ್‌ನ ಕಾರ್ಪೊರೇಟ್ ಕುಳಗಳ ಕಣ್ಣು ಬಿದ್ದಿದೆ.

ಅವರ ಕಣ್ಣು ಬಿದ್ದ ಕಡೆ, ಅವರು ಕಾಲು ಇಟ್ಟ ಎಲ್ಲಾ ಕಡೆ ಸರ್ವನಾಶವಾಗುತ್ತದೆ.

ಇವರಿಗಾಗಿಯೇ ಹಗಲಿರುಳು ದುಡಿಯುತ್ತಿರುವ ಅಮಿತ್ ಶಾ, ನರೇಂದ್ರ ಮೋದಿ ಮುಂತಾದವರೆಲ್ಲರೂ ಥರ ಥರದ ಸುಳ್ಳುಗಳನ್ನು ಸಿದ್ಧಪಡಿಸಿಕೊಂಡು ಕನ್ನಡಿಗರ ತಲೆಗೆ ತುಂಬುತ್ತಾರೆ.

https://vijayatimes.com/chandrababu-2024-last-election/

ನಮ್ಮನ್ನು ದೋಚಲು ಬಿಜೆಪಿ(BJP) ಸಿದ್ಧಪಡಿಸಿರುವ ಸುಳ್ಳಿನ ಸರಮಾಲೆಯಲ್ಲಿ ಹಿಂದೂ ಮುಸ್ಲಿಂ ದ್ವೇಷ, ಭ್ರಷ್ಟಾಚಾರ,

ಕುಟುಂಬ ರಾಜಕಾರಣ ಎಂಬ ಮೂರು ಅಂಶಗಳು ಕಡ್ಡಾಯವಾಗಿ ಇರುತ್ತವೆ.

ಹಾಗಾಗಿ ಜನರು ಎಚ್ಚರ ವಹಿಸಬೇಕು” ಎಂದು ಸಿದ್ದರಾಮಯ್ಯರವರು ಟ್ವೀಟ್ ಮಾಡಿದ್ದಾರೆ. ಗೃಹ ಸಚಿವ ಅಮಿತ್ ಷಾ ಅವರ ಎರಡು ದಿನಗಳ ಕರ್ನಾಟಕದ ಭೇಟಿ ಮುಕ್ತಾಯವಾಗಿದೆ.

ಡಿಸೆಂಬರ್ 30ರಂದು ಮಂಡ್ಯದ(Mandya) ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿರುವ ಮಂಡ್ಯ ಜಿಲ್ಲಾ

ಹಾಲು ಒಕ್ಕೂಟ ನಿರ್ಮಿಸಿರುವ ಡೈರಿಗೆ ಚಾಲನೆ ನೀಡಿ ಕೊಟ್ಟ ಸಂದರ್ಭದಲ್ಲಿ ನೀಡಿದ ವಿಲೀನದ ಹೇಳಿಕೆ ಈಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಅಮಿತ್ ಶಾ ಅವರ ಹೇಳಿಕೆಯ ಕುರಿತು ಎಚ್ ಡಿ ಕುಮಾರಸ್ವಾಮಿ(HD Kumaraswamy),

ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್(DK Shivakumar) ಹಲವು ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.


ಅಷ್ಟೇ ಅಲ್ಲದೆ ಅಮಿತ್ ಶಾ ಅವರ ಈ ಪ್ರಸ್ತಾಪದ ಕುರಿತು ಅಸಮಧಾನಗೊಂಡಿರುವ ಕರ್ನಾಟಕದ ಜನರು ತಮ್ಮ ಸಾಮಾಜಿಕ ಜಾಲತಾಣದಲ್ಲಿ #save nandini(#save nandini) ಅಭಿಯಾನವನ್ನು ಶುರು ಮಾಡಿದ್ದಾರೆ.

Exit mobile version