ಗೋಮಾಂಸವನ್ನು ಹಿಂದೂಗಳು, ಕ್ರಿಶ್ಚಿಯನ್ನರು ತಿನ್ನುತ್ತಾರೆ : ಸಿದ್ದರಾಮಯ್ಯ!

politics

ಹಿಂದೂಗಳು(Hindus) ಮತ್ತು ಕ್ರಿಶ್ಚಿಯನ್ನರು(Christians) ಕೂಡಾ ಗೋಮಾಂಸವನ್ನು ತಿನ್ನುತ್ತಾರೆ ಎಂದು ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಹೇಳಿದರು

ತುಮಕೂರು(Tumkuru) ನಗರದಲ್ಲಿ ನಡೆದ ಮಡಿವಾಳ-ಅಲ್ಪಸಂಖ್ಯಾತ ಸಮಾವೇಶದಲ್ಲಿ ಮಾತನಾಡಿದ ಅವರು, ಈ ದೇಶ ಯಾವುದೇ ಒಂದು ಧರ್ಮಕ್ಕೆ ಸೇರಿದ್ದಲ್ಲ. ಇಲ್ಲಿ ಎಲ್ಲರೂ ಶಾಂತಿ-ಸಹಬಾಳ್ವೆಯಿಂದ ಬದುಕಬೇಕು. ಎಲ್ಲರಿಗೂ ಸಮಾನ ಅವಕಾಶಗಳನ್ನು ನಮ್ಮ ಸಂವಿಧಾನ ನೀಡಿದೆ. ಹೀಗಾಗಿ ಎಲ್ಲ ಧರ್ಮಗಳು ಜನರ ನಡುವೆ ಸೌಹಾರ್ದತೆ ಅಗತ್ಯ. ಇದನ್ನೇ ನಮ್ಮ ಸಂವಿಧಾನ ಕೂಡಾ ಪ್ರತಿಪಾದಿಸುತ್ತದೆ ಎಂದರು.

ನಾನು ಯಾವ ಧರ್ಮದಲ್ಲಿ ಹುಟ್ಟಿದ್ದೇನೆ ಎಂಬುದು ಮುಖ್ಯವಲ್ಲ. ನಾವ್ಯಾರು ಇಂತಹದೇ ಧರ್ಮದಲ್ಲಿ ಜನಿಸಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ಆದರೆ ನಾವೆಲ್ಲರೂ ಭಾರತೀಯರು ಎಂಬುದನ್ನು ಮಾತ್ರ ಮರೆಯಬಾರದು. ಈ ದೇಶದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವದಿಂದ ಬದುಕಬೇಕು. ಇನ್ನು ರಾಷ್ಟ್ರಕವಿ ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಹಲವು ಭಾವನಾತ್ಮಕ ವಿಚಾರಗಳ ಮೂಲಕ ಸಮಾಜವನ್ನು ಒಡೆಯುವ ಕೆಲಸ ನಡೆಯುತ್ತಿದೆ. ಮನುಷ್ಯ- ಮನುಷ್ಯರ ನಡುವೆ ಗೋಡೆ ನಿರ್ಮಾಣ ಮಾಡಲಾಗುತ್ತಿದೆ.

ಸಮಾಜದಲ್ಲಿ ದ್ವೇಷ ಭಾವನೆ ಭಿತ್ತಲಾಗುತ್ತಿದೆ. ಹೀಗೆ ಸಮಾಜದಲ್ಲಿ ದ್ವೇಷ ಮತ್ತು ಅಸಮಾನತೆಯನ್ನು ಬಿತ್ತುವ ಕೆಲಸವನ್ನು ಸಂಘಪರಿವಾರದವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇನ್ನು ಸಂವಿಧಾನದ ಆಶಯಗಳನ್ನು ನಂಬಿರುವ ನಾವೆಲ್ಲರೂ ಈ ದೇಶವನ್ನು, ಈ ಸಮಾಜವನ್ನು ಒಡೆಯುವ ಕೈಗಳಿಗೆ ಅಧಿಕಾರವನ್ನು ನೀಡಬಾರದು. 1964 ರಲ್ಲಿಯೇ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಲಾಗುತ್ತಿದೆ.

ಅದೇ ರೀತಿ ಮತಾಂತರ ನಿಷೇಧ ಕಾಯ್ದೆ(Anti Conversion law) ಜಾರಿ ಮಾಡುವ ಮೂಲಕ ಅಲ್ಪಸಂಖ್ಯಾತ ಸಮುದಾಯಕ್ಕೆ ಕಿರುಕುಳ ನೀಡಲಾಗುತ್ತಿದೆ. ಈ ಎರಡು ಕಾಯ್ದೆಗಳು ವಿಧಾನಸಭೆಯಲ್ಲಿ ಬಂದಾಗ ಸಭಾತ್ಯಾಗ ಮಾಡಿ ಪರೋಕ್ಷವಾಗಿ ಈ ಎರಡು ಕಾಯ್ದೆಗಳ ಬಿಲ್ ಪಾಸ್ ಆಗಲು ಜೆಡಿಎಸ್ ಸಹಕರಿಸಿತು. ಜೆಡಿಎಸ್‍ನವರದು ಡೊಂಗಿ ಜಾತ್ಯಾತೀತವಾದ ಎಂದು ಟೀಕಿಸಿದರು.

Exit mobile version