ಬೆಂಗಳೂರು : ಮೈಸೂರು ಎಕ್ಸ್‌ಪ್ರೆಸ್‌ವೇ ಪರಿಶೀಲನೆಗೆ ಹೊರಟ ಸಿದ್ದರಾಮಯ್ಯ

Mysore :  ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾರ್ಚ್ 9 ರಂದು ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇಯ ಪರಿಶೀಲನೆಗೆ ಸಮಯ (Siddaramaiah inspect Mysore Expressway.) ನಿಗದಿಪಡಿಸಿದ್ದಾರೆ.

ಸಿದ್ದರಾಮಯ್ಯನವರ ಈ ನಡೆ ರಾಜ್ಯ ರಾಜಕೀಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಇನ್ನೊಂದೆಡೆ  ಬೆಂಗಳುರು – ಮೈಸೂರು ನಡುವಿನ  ಹತ್ತು ಪಥಗಳ ಎಕ್ಸ್‌ಪ್ರೆಸ್‌ವೇ ಯನ್ನು  ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್‌12ರಂದು  ಉದ್ಘಾಟನೆ ಮಾಡಲಿದ್ದಾರೆ.

ಇನ್ನು ಬೆಂಗಳೂರು – ಮೈಸೂರು ನಡುವಿನ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಸಮೀಪಿಸುತ್ತಿರುವ ವೇಳೆಯಲ್ಲಿ  ಯೋಜನೆಯ ಕ್ರೆಡಿಟ್‌ ಪಡೆದುಕೊಳ್ಳಲು ಕಾಂಗ್ರೆಸ್‌ ಮತ್ತು ಬಿಜೆಪಿ  ನಡುವೆ ತೀವ್ರ ವಾಕ್ಸಮರ ನಡೆಯುತ್ತಿದೆ. 

ಈ ಕುರಿತು  ಮೈಸೂರಿನಲ್ಲಿ ಮದ್ಯಮಗಳೊಂದಿಗೆ ಮಾತನಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, 

ಬೆಂಗಳೂರು – ಮೈಸೂರು ನಡುವಿನ ಎಕ್ಸ್‌ಪ್ರೆಸ್‌ವೇಯನ್ನು ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಅಪ್‌ಗ್ರೇಡ್(Upgrade) ಮಾಡಲಾಗಿದೆ.

ಇದನ್ನು ನಮ್ಮ ಸರ್ಕಾರದ  ಅವಧಿಯಲ್ಲಿ ಮಾಡಲಾಗಿದೆ.  ಹೀಗಾಗಿ ನಾನು ಮಾರ್ಚ್‌ 9 ರಂದು ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು(Siddaramaiah inspect Mysore Expressway) ಪರಿಶೀಲನೆ ಮಾಡಲು ಹೋಗುತ್ತಿದ್ದೇನೆ  ಎಂದು ಹೇಳಿದರು.

ಅಂದಿನ ಕಾಂಗ್ರೆಸ್ (Congress) ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್(Oscar Fernandes), ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಗೆ ನವೀಕರಿಸಿದ್ದಲ್ಲದೆ,

ಹೆದ್ದಾರಿಯನ್ನು 10 ಪಥದ ರಸ್ತೆಗೆ ವಿಸ್ತರಿಸುವ ಪ್ರಸ್ತಾಪವನ್ನು ಸಹ ಅನುಮೋದಿಸಿದರು. 

ರಾಷ್ಟ್ರೀಯ ಹೆದ್ದಾರಿಗೆ ಅಪ್‌ಗ್ರೇಡ್ ಮಾಡಿದ ನಂತರ ರಸ್ತೆಯನ್ನು ವಿಸ್ತರಿಸಲು ಅನುಮೋದನೆ ಪಡೆಯಲು ಮಹಾದೇವಪ್ಪ ಅವರ ಜೊತೆಗೆ ದೆಹಲಿಗೆ ಪ್ರಯಾಣಿಸಿದ್ದರು.

ರಸ್ತೆಯನ್ನು ಅಗಲಗೊಳಿಸುವಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ  ಅವರದ್ದು ಯಾವುದೇ ಪಾತ್ರವಿರಲಿಲ್ಲ.

 ಈ ಯೋಜನೆಗಾಗಿ 2014 ರಲ್ಲಿ  ಡಿಪಿಆರ್ ಮಾಡಲಾಗಿದೆ. ಎನ್‌ಎಚ್‌ಎಐ ಈ ಯೋಜನೆಯನ್ನು 2016 ರಲ್ಲಿ ವಹಿಸಿಕೊಂಡಿದೆ.

2018 ರಲ್ಲಿ, ಪ್ರಧಾನಿ ಮೋದಿ ಮೈಸೂರುಗೆ ಬಂದಾಗ, ಅವರು ಈ ಯೋಜನೆಯನ್ನು ಘೋಷಿಸಿದರು. ಕರ್ನಾಟಕದ ಮೊದಲ ಎಕ್ಸ್‌ಪ್ರೆಸ್ ಹೆದ್ದಾರಿ ಇದಾಗಿದ್ದು,

ಯೋಜನೆಯನ್ನು ಘೋಷಿಸಿದ ವ್ಯಕ್ತಿ ಯೋಜನೆಯನ್ನು ಉದ್ಘಾಟಿಸುತ್ತಿದ್ದಾನೆ. ಆದರೆ ಜನರಿಗೆ ಇದರ ಸತ್ಯ ತಿಳಿದಿದೆ ಎಂದು ಮಾಜಿ  ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.

ಇನ್ನು 117 ಕಿ.ಮೀ ಎಕ್ಸ್‌ಪ್ರೆಸ್‌ವೇ ಅನ್ನು, 8,408 ಕೋಟಿ ರೂ. ವೆಚ್ಚದಲ್ಲಿ   ನಿರ್ಮಿಸಲಾಗಿದ್ದು 52 ಕಿ.ಮೀ ಗ್ರೀನ್‌ಫೀಲ್ಡ್ ಆಗಿದ್ದು,

ದಟ್ಟಣೆಯನ್ನು ಕಡಿಮೆ ಮಾಡಲು ಐದು ಬೈಪಾಸ್‌ಗಳನ್ನು ಒಳಗೊಂಡಿರುತ್ತದೆ.  ಇದು ಕರ್ನಾಟಕದ ಮೊದಲ ಎಕ್ಸ್‌ಪ್ರೆಸ್ ಹೆದ್ದಾರಿ ಆಗಿದೆ.

Exit mobile version