ಪ್ರಧಾನಿ ಮೋದಿಯವರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ: ಬರ ಪರಿಸ್ಥಿತಿ ಕುರಿತು ಚರ್ಚೆ

Dehli: ಪ್ರಧಾನಿ ಮೋದಿ ಅವರ ಜೊತೆ ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಸಿಎಂ ಸಿದ್ದರಾಮಯ್ಯ (Siddaramaiah Meets Narendra Modi) ಚರ್ಚೆ ನಡೆಸಿದ್ದು, ಪರಿಹಾರಕ್ಕೆ ಮನವಿ

ಮಾಡಿದ್ದಾರೆ. ಮುಖ್ಯಮಂತ್ರಿಯಾದ ನಂತರ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಆಗುತ್ತಿರುವ ಎರಡನೇ ಭೇಟಿ ಇದಾಗಿದೆ.

ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗಷ್ಟೇ ಬೆಳಗಾವಿಯಲ್ಲಿ (Belagavi) ನಡೆದ ಚಳಿಗಾಲದ ಅಧಿವೇಶನದಲ್ಲಿ ಬರ ಪರಿಹಾರಕ್ಕೆ ಕೇಂದ್ರದಿಂದ ಒಂದು ಪೈಸೆಯೂ ಬಿಡುಗಡೆಯಾಗಿಲ್ಲ ಎಂದು ಪ್ರಧಾನಿಯನ್ನು

ಟೀಕಿಸಿದ್ದು, ಜೊತೆಗೆ ನಮ್ಮ ಸಚಿವರು ಭೇಟಿ ಮಾಡಲು ಯತ್ನಿಸಿದರೂ ಪ್ರಧಾನಿ ಮೋದಿ (Siddaramaiah Meets Narendra Modi) ಹಾಗೂ ಕೇಂದ್ರ ಸಚಿವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

ಸದ್ಯಕ್ಕೆ ಪ್ರಧಾನಿಯವರು ಸಿಎಂ ಸಿದ್ದರಾಮಯ್ಯರಿಗೆ ಭೇಟಿಗೆ ಅವಕಾಶ ನೀಡಿದ್ದು, ಸಿದ್ದರಾಮಯ್ಯ ಮೋದಿಯವರನ್ನು ಭೇಟಿ ಮಾಡಿ ಬರದ ಬಗ್ಗೆ ಚರ್ಚೆ ಮಾಡಿದ್ದಾರೆ. ಕರ್ನಾಟಕ (Karnataka)ವು

ಕೇಂದ್ರದಿಂದ 18,171.44 ಕೋಟಿ ರೂಪಾಯಿ ಬರ ಪರಿಹಾರ ಕೋರಿದೆ. ಇನ್ನು ಮತ್ತೊಂದೆಡೆ ಇಂದು ಕಾಂಗ್ರೆಸ್ (Congress)​​ ಕಾರ್ಯಕಾರಿಣಿ ಸಭೆ ಇದ್ದು ಅದರಲ್ಲೂ ಸಿಎಂ ಸಿದ್ದರಾಮಯ್ಯ

ಭಾಗಿಯಾಗಲಿದ್ದಾರೆ. ಹೈಕಮಾಂಡ್​ (High Command) ನಾಯಕರ ಜೊತೆ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ವರಿಷ್ಠರ ಜೊತೆ ನಿಗಮ, ಮಂಡಳಿ ಬಗ್ಗೆಯೂ ಚರ್ಚೆ ಮಾಡಲಿದ್ದಾರೆ.

ವಿಶೇಷ ಉಡುಗೊರೆ ನೀಡಿದ್ದ ಸಿದ್ದರಾಮಯ್ಯ
ಸಿದ್ದರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ಆಗಸ್ಟ್ (August) 3 ರಂದು ಮೊದಲ ಬಾರಿ ಮೋದಿ ಅವರನ್ನು ಭೇಟಿಯಾಗಿದ್ದರು. ತಮ್ಮ ಜನ್ಮದಿನದಂದೇ ಸಿದ್ದರಾಮಯ್ಯ ಅವರು

ಭೇಟಿಯಾಗಿದ್ದರು. ಈ ವೇಳೆ ಪ್ರಧಾನಿಗೆ ವಿಶೇಷ ಉಡುಗೊರೆಯಾಗಿ ಆನೆಯ ಅಂಬಾರಿ ಹೊತ್ತಿರುವ ಕೆತ್ತನೆಯ ಆಕೃತಿಯನ್ನು ನೀಡಿದ್ದರು. ಮೈಸೂರು ಪೇಟ, ಶಾಲು ಹಾಕಿ ಸನ್ಮಾನಿಸಿದ್ದರು.

ಮೋದಿ ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಸಿದ್ದರಾಮಯ್ಯ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh) ಅವರನ್ನು ಭೇಟಿಯಾಗಿದ್ದರು. ಇವರಿಗೂ ಅದೇ ರೀತಿಯ ಉಡುಗೊರೆ

ನೀಡಿದ್ದ ಸಿದ್ದರಾಮಯ್ಯ, ಮೈಸೂರು ದಸರಾ (Mysore Dasara) ಉತ್ಸವದಲ್ಲಿ ಏರ್​ಶೋ ಆಯೋಜಿಸಲು ಮನವಿ ಮಾಡಿದ್ದರು. ಬಳಿಕ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ (Nirmala

Seetharaman) ಅವರನ್ನು ಭೇಟಿಯಾಗಿದ್ದರು.

ಇದನ್ನು ಓದಿ: ಕೋವಿಡ್ ರೂಪಾಂತರ ಜೆಎನ್1 ಪತ್ತೆ ಪ್ರಕರಣ: ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

Exit mobile version