ಆರ್.ಎಸ್.ಎಸ್ ನನ್ನ ಸರಳ ಪ್ರಶ್ನೆಗೆ ಉತ್ತರಿಸಲಾಗದಷ್ಟು ದುರ್ಬಲವೇ? : ಸಿದ್ದರಾಮಯ್ಯ!

congress

ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಆರ್‍ಎಸ್‍ಎಸ್(RSS) ಮೂಲ ಕೆದಕಿ ಹೊಸ ಚರ್ಚೆಗೆ ನಾಂದಿಹಾಡಿದ ನಂತರ ಇದೀಗ ಸರಣಿ ಟ್ವೀಟ್‍ಗಳ ಮೂಲಕ ನಿರಂತರವಾಗಿ ಆರ್‍ಎಸ್‍ಎಸ್ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ.

ಆದರೆ ಸಿದ್ದರಾಮಯ್ಯ ಪ್ರಶ್ನೆಗಳಿಗೆ ಆರ್‍ಎಸ್‍ಎಸ್ ಯಾವುದೇ ಪ್ರತಿಕ್ರಿಯೆ ನೀಡದಿರುವ ಕಾರಣ, ಆರ್‍ಎಸ್‍ಎಸ್‍ನ ಮೌನವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಟ್ವೀಟ್‍ಗಳ ಮೂಲಕ ಆರ್‍ಎಸ್‍ಎಸ್ ಸಂಘಟನೆಯನ್ನು ಟೀಕಿಸಿದ್ದಾರೆ. ಸಿದ್ದರಾಮಯ್ಯನವರ ಟ್ವೀಟ್‍ಗಳ ವಿವರ ಇಲ್ಲಿದೆ ನೋಡಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೌರವಾನ್ವಿತ ನಾಯಕರಲ್ಲಿ ಮತ್ತೊಮ್ಮೆ ಮನವಿ ಮಾಡುತ್ತಿದ್ದೇನೆ. ಹಿಂದುಗಳೆಲ್ಲ ಒಂದು ಎನ್ನುವ ನಿಮ್ಮ ಸಂಘದ ಉನ್ನತ ಪದಾಧಿಕಾರ ಯಾಕೆ ಒಂದು ಜಾತಿಗೆ ಸೀಮಿತವಾಗಿದೆ? ಉಳಿದ ಜಾತಿಗಳು ಯಾಕೆ ಅಸ್ಪೃಶ್ಯವಾಗಿವೆ? ದಯವಿಟ್ಟು ಉತ್ತರಿಸಿ.

ಆರ್.ಎಸ್.ಎಸ್ ಶಾಖೆಗಳಿಗೆ ಹೋದರೆ ಏನಾಗುತ್ತದೆ ಎನ್ನುವುದಕ್ಕೆ
ರಾಜ್ಯ ಬಿಜೆಪಿ ಅಧ್ಯಕ್ಷ(BJP President) ನಳಿನ್‍ಕುಮಾರ್‍ಕಟೀಲ್(Nalin Kumarkateel) ಅವರೇ ಜೀವಂತ ಉದಾಹರಣೆ. ಸಂಸ್ಕೃತಿ, ಸಂಸ್ಕಾರ, ಸಚ್ಛಾರಿತ್ರ್ಯದಂತಹ ಮೌಲ್ಯಗಳಿಗೆ, ನಿತ್ಯ ಶಬ್ದಭೇದ ಮಾಡುತ್ತಿರುವ ಕಟೀಲು ಅವರಿಗೂ ಏನಾದರೂ ಸಂಬಂಧವಿದೆಯೇ? ನನ್ನ ಮೇಲೆ ವಾಗ್ದಾಳಿ ನಡೆಸುತ್ತಿರುವ ರಾಜ್ಯ ಬಿಜೆಪಿ ನಾಯಕರ ಮಾತುಗಳೇ, ಆರ್.ಎಸ್.ಎಸ್ ತನ್ನ ಸ್ವಯಂಸೇವಕರಿಗೆ ಕಲಿಸುವ ಸಂಸ್ಕಾರ- ಸಂಸ್ಕೃತಿ ಏನು ಎನ್ನುವುದನ್ನು ಸೂಚಿಸುತ್ತದೆ.

ಬಿಜೆಪಿಯ ಒಬ್ಬ ನಾಯಕರು ಆರ್.ಎಸ್.ಎಸ್ ಶಾಖೆಗೆ ಬನ್ನಿ ಎಂದು ಕರೆಯುತ್ತಿದ್ದಾರೆ, ಇತರರು ಆರ್.ಎಸ್.ಎಸ್ ಪುಸ್ತಕ ಓದಿ ಎಂದು ಸಲಹೆ ನೀಡಿದರು. ಅಲ್ಲಿಗೆ ಹೋಗಿ, ಓದಿ ಓದಿ ಏನನ್ನು ಕಲಿಯುವುದು? 40% ಕಮಿಷನ್ ಹೊಡೆಯುವುದಾ? ದುಡ್ಡು ಪಡೆದು ಪಕ್ಷಾಂತರ ಮಾಡುವುದಾ..? ನನ್ನ ಸರಳ ಪ್ರಶ್ನೆಗೆ ಉತ್ತರಿಸಲಾಗದ ಆರ್.ಎಸ್.ಎಸ್, ರಾಜ್ಯ ಬಿಜೆಪಿಯ ಕೂಗುಮಾರಿಗಳನ್ನು ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸಲು ಛೂ ಬಿಟ್ಟಿದೆ. 97 ವರ್ಷಗಳ ಇತಿಹಾಸವಿರುವ ಆರ್.ಎಸ್.ಎಸ್ ನನ್ನದೊಂದು ಸರಳ ಪ್ರಶ್ನೆಗೆ ಉತ್ತರಿಸಲಾಗದಷ್ಟು ದುರ್ಬಲ ಸಂಘಟನೆಯೇ..?

ನಿಮ್ಮ ಸಂಘದಲ್ಲಿ ಒಂದು ಜಾತಿಯ ಪದಾಧಿಕಾರಿಗಳು ಮಾತ್ರ ಯಾಕಿದ್ದಾರೆ? ದಲಿತರು, ಹಿಂದುಳಿದವರು ಸೇರಿದಂತೆ ಬೇರೆ ಜಾತಿಗಳಿಗೆ ಯಾಕೆ ಅವಕಾಶ ಇಲ್ಲ? ಇಂತಹದ್ದೊಂದು ಸರಳ ಪ್ರಶ್ನೆಗೆ ಆರ್.ಎಸ್.ಎಸ್ ನಲ್ಲಿ ಉತ್ತರ ಇಲ್ಲ ಎನ್ನುವುದೇ ಈ ಸಂಘಟನೆಯ ಡೋಂಗಿತನಕ್ಕೆ ಸಾಕ್ಷಿ.

Exit mobile version