ಈ ದೇಶದ ಅಲಿಬಾಬಾ ಮತ್ತು 40 ಮಂದಿ ಕಳ್ಳರೆಂದರೆ ಬೊಮ್ಮಾಯಿ ಮತ್ತು ಬಿಜೆಪಿ ನಾಯಕರು : ಸಿದ್ದರಾಮಯ್ಯ

Karnataka: ಹಳೇ ಮೈಸೂರು (Siddaramaiah tweet for bommai) ಭಾಗದಲ್ಲಿ ನಡೆದ ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಗೃಹ ಸಚಿವ ಅಮಿತ್‌ ಶಾ ನೀಡಿದ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದು, ಬಿಜೆಪಿ ವಿರುದ್ಧ ಟ್ವೀಟ್‌ ಮುಖಾಂತರ ಸರಣಿ ಆರೋಪ ಮಾಡಿದ್ದಾರೆ.

ಹಳೇ ಮೈಸೂರಿನಲ್ಲಿ ಜನಸಂಕಲ್ಪಯಾತ್ರೆಗೆ (Janasankalpayatra) ಆಗಮಿಸಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ಅಮಿತ್‌ ಶಾ,

ಕಾಂಗ್ರೆಸ್‌ ಭ್ರಷ್ಟ ಹಾಗೂ ಕುಟುಂಬ ರಾಜಕೀಯ ಮಾಡುವ ಪಕ್ಷ ಎಂದು ನೇರವಾಗಿ ಆರೋಪಿಸಿದರು. ಅಮಿತ್‌ ಶಾ ಆರೋಪ ಸಿದ್ದರಾಮಯ್ಯ (Siddaramaiah) ಅವರ ಕಿವಿಗೆ ಅಪ್ಪಳಿಸುತ್ತಿದ್ದಂತೆ,

ಅಮಿತ್‌ ಶಾ ಹೇಳಿಕೆಯ ಬೆನ್ನಲ್ಲೇ ಬಿಜೆಪಿಯ (BJP) ವಿರುದ್ಧ ಸರಣಿ ಆರೋಪಗಳನ್ನು ಎಸಗಿದ್ದಾರೆ. ಸರಣಿ ಟ್ವೀಟ್‌ (Tweet) ಮೂಲಕ ಸಿದ್ದರಾಮಯ್ಯ ಅವರು ಮಾಡಿರುವ ಆರೋಪಗಳು ಹೀಗಿವೆ.

2013ರ ಚುನಾವಣಾ ಕಾಲದಲ್ಲಿ ರಾಜ್ಯದ ನೀರಾವರಿ ಯೋಜನೆಗಳಿಗಾಗಿ 50,000 ಕೋಟಿ ರೂ. ಖರ್ಚು ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದೆವು. ಐದು ವರ್ಷಗಳ ಅಧಿಕಾರವಧಿಯಲ್ಲಿ ಅದಕ್ಕಿಂತಲೂ ಹೆಚ್ಚು ಖರ್ಚು ಮಾಡಿದ್ದೆವು.

ಇದನ್ನೂ ಓದಿ : https://vijayatimes.com/madhavan-spokes-sons-achievement/

ಕೇವಲ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿಯೇ ಸುಮಾರು 21,000 ಕೋಟಿ ಹಣವನ್ನು ಬಿಡುಗಡೆ ಮಾಡಿ, ಸುಮಾರು 20,000 ಕೋಟಿ ಹಣವನ್ನು ಖರ್ಚು ಮಾಡಿದ್ದೆವು.

ನುಡಿದಂತೆ ನಡೆದ ಸರ್ಕಾರ ಇದ್ದರೆ ಅದು ನಮ್ಮ ಕಾಂಗ್ರೆಸ್ ಸರ್ಕಾರ ಮಾತ್ರ.

ಬಿಜೆಪಿ ಪಕ್ಷ 2018ರ ಚುನಾವಣೆಯ‍ ಪ್ರಣಾಳಿಕೆಯಲ್ಲಿ ಪ್ರತೀ ವರ್ಷ 30,000 ಕೋಟಿಗಳಂತೆ 150 ಲಕ್ಷ ಕೋಟಿ ಹಣವನ್ನು ಖರ್ಚು ಮಾಡುವ (Siddaramaiah tweet for bommai) ಭರವಸೆ ನೀಡಿತ್ತು.

ಅದರ ಅರ್ಧದಷ್ಟಾದರೂ ಖರ್ಚು ಮಾಡಲಾಗಿದೆಯೇ ಬಿಜೆಪಿ ಸರ್ಕಾರ? (BJP Govt) ಬಿಜೆಪಿ ಸರ್ಕಾರ ನೀರಾವರಿಗೆ ಖರ್ಚು ಮಾಡಿರುವುದು 45,000 ಕೋಟಿ ಮಾತ್ರ.

ಉತ್ತರ ಕರ್ನಾಟಕ (North Karnataka) ಮತ್ತು ಕೃಷ್ಣಾ ಮೇಲ್ದಂಡೆ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ ಪಕ್ಷಕ್ಕೆ ಇದೆಯಾ?

ನಾವು ಮತ್ತೆ ಅಧಿಕಾರಕ್ಕೆ ಬಂದರೆ 5 ವರ್ಷಗಳಲ್ಲಿ 2 ಲಕ್ಷ ಕೋಟಿ ರೂ.ನೀಡಿ ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ, ಮೇಕೆದಾಟು ಈ ಎಲ್ಲಾ ಯೋಜನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ.

ಕೃಷ್ಣಾ ಮೇಲ್ದಂಡೆಯ 3ನೇ ಹಂತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪುನರ್ವಸತಿ ಕಾರ್ಯಕ್ಕಾಗಿ 51,000 ಕೋಟಿ ಅಂದಾಜು ಮಾಡಿದ್ದೆವು,

ಈಗ ಅದು 75,000 ಕೋಟಿಗೆ ಹೆಚ್ಚಾಗಿದೆ. ಈ ಹಣವನ್ನು ಮುಂದಿನ 5 ವರ್ಷಗಳಲ್ಲಿ ನೀಡಿ, ಜನರಿಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳುತ್ತೇವೆ.

2013ರಲ್ಲಿ ನಮ್ಮ ಪಕ್ಷ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಯನ್ನು ಈಡೇರಿಸಿದ್ದೆವು, ಜೊತೆಗೆ 25 ಹೆಚ್ಚುವರಿ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೆವು.

ಈಗಿನ ಬಿಜೆಪಿ ಸರ್ಕಾರ ಜನರಿಗೆ 600 ಭರವಸೆಗಳನ್ನು ನೀಡಿ ಅದರಲ್ಲಿ 10% ಅನ್ನೂ ಕೂಡ ಈಡೇರಿಸಿಲ್ಲ. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರದ (Central Govt) ಮೇಲೆ ಒತ್ತಡ ಹಾಕಿ,

ನ್ಯಾಯಾಲಯದಲ್ಲಿ ಹೋರಾಟ ಮಾಡಿ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.

ಇದನ್ನೂ ಓದಿ : https://vijayatimes.com/madhavan-spokes-sons-achievement/

ಪ್ರತೀ ವರ್ಷ 40,000 ಕೋಟಿಯಂತೆ ಹಣ ಖರ್ಚು ಮಾಡಿದರೆ 5 ವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಿದೆ. ಈ ಕೆಲಸವನ್ನು ನಾವು ಮಾಡೇ ಮಾಡುತ್ತೇವೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ (Congress) ಪಕ್ಷ ಅಧಿಕಾರಕ್ಕೆ ಬಂದೇ ಬರಲಿದೆ. ಹೇಮಾವತಿ ಎಡದಂಡೆ ನಾಲೆಯಲ್ಲಿ ಕೆಲಸವನ್ನೇ ಮಾಡದೆ ಬಿಲ್‌ ಹಣ ತೆಗೆದುಕೊಂಡಿದ್ದಾರೆ.

ನಾರಾಯಣಪುರ ಬಲದಂಡೆ ನಾಲೆ ರೂ. 750 ಕೋಟಿ ಇದ್ದದ್ದು ರೂ. 2,000 ಕೋಟಿಗೂ ಹೆಚ್ಚಾಗಿದೆ. ಹೀಗೆ ಎಸ್ಟಿಮೇಷನ್‌ ನಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ನಮ್ಮ ಪಕ್ಷದವರು ಮುಖ್ಯಮಂತ್ರಿಗಳಿಗೆ ನೀಡಿದ್ದ ದೂರಿನ ಪರಿಶೀಲನೆಗೆ ಹೋದ ತಂಡದ ಮೇಲೆ ರೌಡಿಗಳನ್ನು ಬಿಟ್ಟು ಹಲ್ಲೆ ಮಾಡಿಸಿ, ವಾಪಾಸು ಕಳಿಸಿದ್ದಾರೆ.

ಇದು ಬಿಜೆಪಿ ಅವರ ಗೂಂಡಾಗಿರಿ‌ ಅಲ್ಲದೆ ಇನ್ಯಾರದ್ದು? ರೈತರ ಜಮೀನಿಗೆ ನೀರು ಕೇಳಿದರೆ ಅಲ್ಲೂ ಲೂಟಿ ಮಾಡುತ್ತಾರೆ.

ಈ ದೇಶದ ಅಲಿಬಾಬಾ ಮತ್ತು 40 ಮಂದಿ ಕಳ್ಳರೆಂದರೆ ಸಿಎಂ ಬೊಮ್ಮಾಯಿ ಮತ್ತು ರಾಜ್ಯ ಬಿಜೆಪಿ (State bjp) ನಾಯಕರು. ಈ ಕಳ್ಳರ ತಂಡವನ್ನು ಅಧಿಕಾರದಿಂದ ಕಿತ್ತು ಹಾಕುವ ಕೆಲಸವನ್ನು ರಾಜ್ಯದ ಜನತೆ ಮಾಡಬೇಕು.

ಕಬ್ಬು ಬೆಳೆಗೆ ಟನ್‌ ಗೆ 3500 ರೂ. ಕೊಟ್ಟು ಖರೀದಿ ಮಾಡಿ ಎಂದು ನಾನು ಸದನದಲ್ಲಿ ಮನವಿ ಮಾಡಿದ್ದೆ. ನರೇಂದ್ರ ಮೋದಿ ಅವರು ಕಬ್ಬಿನ ಇಳುವರಿಯನ್ನು 10 ರಿಂದ 10.25ಕ್ಕೆ ಹೆಚ್ಚಿಸಿ,

150 ರೂ. ಹೆಚ್ಚು ಕೊಟ್ಟಂತೆ ಮಾಡಿ ಜನರಿಗೆ ಟೋಪಿ ಹಾಕಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ಕಬ್ಬಿನ ಬೆಲೆ ಬಿದ್ದುಹೋದಾಗ 1800 ಕೋಟಿ ರೂ.

ಅನ್ನು ರೈತರಿಗೆ ನೀಡಿ ರೈತರನ್ನು ಕಾಪಾಡುವ ಕೆಲಸ ಮಾಡಿದ್ದೆವು. ಬಿಜೆಪಿ ಸರ್ಕಾರ ಕೈಕಟ್ಟಿ ಕೂತಿದೆ.

ಇದನ್ನೂ ಓದಿ : https://vijayatimes.com/madhavan-spokes-sons-achievement/

ನಾವು ಮಹದಾಯಿ ಯೋಜನೆಯನ್ನು ಜಾರಿ ಮಾಡುತ್ತೇವೆ ಎನ್ನುವ ಸಿಎಂ ಬೊಮ್ಮಾಯಿ (Basavaraj Bommai) ಅವರೇ, 22-7-2020ರಲ್ಲಿ ನೋಟಿಫಿಕೇಷನ್‌ ಆಗಿತ್ತು,
ಎರಡು ವರ್ಷ 9 ತಿಂಗಳು ಯೋಜನೆ ಕೈಗೆತ್ತಿಕೊಳ್ಳದೆ ಸುಮ್ಮನಿದ್ದದ್ದು ಯಾಕೆ? ಎಂದು ಪ್ರಶ್ನಿಸುವ ಮುಖೇನ ಸರಣಿ ಟ್ವೀಟ್‌ ಮಾಡಿ ಆರೋಪಿಸಿದ್ದಾರೆ.
Exit mobile version