ಮೆಟ್ರೋ ನಿರಾಸೆ: ಸಿಲ್ಕ್ ಬೋರ್ಡ್‌-ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಹಳದಿ ರಸ್ತೆ ಈ ವರ್ಷವೂ ಉದ್ಘಾಟನೆಯಾಗಲ್ಲ

Bengaluru: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಸಿಲ್ಕ್ ಬೋರ್ಡ್‌ (silkboard metro 1 year postponed) ಮಾರ್ಗದ ಮೆಟ್ರೋ ಸೇವೆ ಈ ವರ್ಷದ ಜೂನ್ ಹಾಗೂ ಡಿಸೆಂಬರ್‌ನಲ್ಲೇ ಪೂರ್ಣ

ಮಾರ್ಗದಲ್ಲಿ ಆರಂಭ ಆಗಬೇಕಿದ್ದು, ಬೋಗಿಗಳು ಲಭ್ಯವಿಲ್ಲದ ಕಾರಣ ಈ ವರ್ಷವೂ ಆರಂಭ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಆದರೆ ಟ್ರಾಫಿಕ್‌ನಿಂದ ಬೇಸತ್ತಿರುವ ಜನರು ಯಾವಾಗ ಎಲೆಕ್ಟ್ರಾನಿಕ್

ಸಿಟಿ (Electronic City) ಮೆಟ್ರೋ ಆರಂಭ ಅಂತ ಕಾಯುತ್ತಿದ್ದಾರೆ.

ನಮ್ಮ ಮೆಟ್ರೋ (Namma Metro) ಹಳದಿ ಮಾರ್ಗದ ಕಾಮಗಾರಿಯು ಆರ್‌ವಿ (RV) ರಸ್ತೆಯಿಂದ ಬೊಮ್ಮಸಂದ್ರದವರೆಗೆ (Bommasandra) ಸಂಪರ್ಕ ಕಲ್ಪಿಸುವ ಬಹು ನಿರೀಕ್ಷಿತ ಮಾರ್ಗವಾಗಿದ್ದು,

ಬಹುತೇಕ ಪೂರ್ಣಗೊಂಡಿದೆ. ಈ ವರ್ಷಾಂತ್ಯಕ್ಕೆ ಸಂಚಾರ ಆರಂಭಿಸಬೇಕಿತ್ತು. ಆದರೆ ರೈಲು ಬೋಗಿಗಳ ಲಭ್ಯತೆಯ ಕೊರತೆಯಿಂದ ಸಂಚಾರ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಕೋಲ್ಕತ್ತಾದ (Kolkata) ಬಳಿ ಚೀನಾ ರೈಲ್ವೆ ರೋಲಿಂಗ್‌ ಸ್ಟಾಕ್‌ ಕಾರ್ಪೊರೇಷನ್‌ (China Railway Rolling Stock Corporation) ತನ್ನ ಉತ್ಪಾದನಾ ಘಟಕವನ್ನು ಹೊಂದಿರುವ

ಟಿಟಾಗರ್‌ ವ್ಯಾಗನ್ಸ್‌ (Titagarh wagons) ಮೂಲಕ ಈ ಮಾರ್ಗಕ್ಕಾಗಿ 216 ಕೋಚ್‌ಗಳನ್ನು ಅಂದರೆ 36 ರೈಲು ಸೆಟ್‌ಗಳು ಪೂರೈಸಲು ಒಪ್ಪಂದಕ್ಕೆ ಸಹಿ ಹಾಕಿತ್ತು. ಸಿಆರ್‌ಆರ್‌ಸಿ (CRRC)

ಸಂಸ್ಥೆಯು ಆಗಸ್ಟ್‌ನಲ್ಲೇ ಆರು ಬೋಗಿ ರೈಲುಗಳ ಎರಡು ಸೆಟ್‌ಗಳನ್ನು ಪೂರೈಸುವ ಭರವಸೆ ನೀಡಿತ್ತು. ಇದರಲ್ಲಿ ಎರಡು ರೈಲುಗಳು ನೇರಳೆ ಹಾಗೂ ಹಸಿರು ಮಾರ್ಗಕ್ಕೆ ತಲಾ ಒಂದು ರೈಲು

ಮೀಸಲಿಡಲಾಗಿದೆ.

ಬಿಎಂಆರ್‌ಸಿಎಲ್‌ (BMRCL) ಮೂಲಗಳ ಪ್ರಕಾರ ಈ ಮಾರ್ಗದ ಮೊದಲ ಸೆಟ್‌ ಅಕ್ಟೋಬರ್ (October)16ರೊಳಗೆ ಚೀನಾದಿಂದ ಸರಬರಾಜಾಗಲಿದ್ದು, ಇನ್ನು ಉಳಿದ ಸೆಟ್ ತಡವಾಗಲಿವೆ.

ಈ ಹಿಂದೆ ಸೆಪ್ಟೆಂಬರ್‌ (September) ವೇಳೆಗೆ ಎಲ್ಲಾ ಬೋಗಿಗಳು ಸಿಗಲಿವೆ ಅಂದುಕೊಂಡಿದ್ದೆವು, ಆದರೆ ಈ ಸಾಧ್ಯತೆ ಕಡಿಮೆ ಇರುವುದರಿಂದ ಬೋಗಿಗಳು ಬಂದ ನಂತರ ಕನಿಷ್ಠ ಮೂರು

ತಿಂಗಳ ಕಾಲ ಪರೀಕ್ಷೆ ಮತ್ತು ಪ್ರಯೋಗಕ್ಕೆ ಒಳಪಡಿಸಬೇಕಾಗಿದ್ದು, ಹಾಗಾಗಿ ಈ ಮಾರ್ಗದ ಸಂಚಾರ ತಡವಾಗಲಿದೆ(silkboard metro 1 year postponed) ಎಂದು ತಿಳಿಸಲಾಗಿದೆ.

ಬಿಎಂಆರ್‌ಸಿಎಲ್‌ಗೆ 2019ರಲ್ಲಿ ಚೀನಾ ಕಂಪೆನಿಯು 1,578 ಕೋಟಿ ರೂಪಾಯಿ ವೆಚ್ಚದಲ್ಲಿ 216 ಮೆಟ್ರೊ ಬೋಗಿಗಳನ್ನು ಪೂರೈಸಲು ಒಪ್ಪಂದ ಮಾಡಿಕೊಂಡಿದ್ದು, ಭಾರತದಲ್ಲಿ ಉತ್ಪಾದನಾ ಘಟಕ

ಸ್ಥಾಪಿಸಲು ಕಂಪೆನಿಯು ವಿಫಲವಾದ ಹಿನ್ನೆಲೆಯಲ್ಲಿ ರೈಲು ಬೋಗಿಗಳ ವಿತರಣೆ ಸ್ಥಗಿತಗೊಳಿಸಿತ್ತು. ಬಳಿಕ ಕಂಪೆನಿಯು ಕೋಲ್ಕತ್ತಾದ ಟಿಟಾಗರ್‌ ವ್ಯಾಗನ್ಸ್‌ ಲಿಮಿಟೆಡ್‌ (ಟಿಡಬ್ಲ್ಯುಎಲ್‌) ಜತೆ ಒಪ್ಪಂದ

ಮಾಡಿಕೊಂಡು ಬೋಗಿಗಳನ್ನು ನಿರ್ಮಿಸುತ್ತಿದೆ.

ಈ ಮೊದಲು ಬಿಎಂಆರ್‌ಸಿಎಲ್‌ (BMRCL) ಎರಡು ಹಂತಗಳಲ್ಲಿ ಮೆಟ್ರೊ ರೈಲು ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಿತ್ತು. ಮೊದಲ ಹಂತದಲ್ಲಿ ಜೂನ್‌ ತಿಂಗಳಲ್ಲಿ ಬೊಮ್ಮಸಂದ್ರದಿಂದ

(Bommasandra) ಸಿಲ್ಕ್ ಬೋರ್ಡ್‌ವರೆಗೆ ಮತ್ತು ಎರಡನೇ ಹಂತದಲ್ಲಿ ಡಿಸೆಂಬರ್‌ನಲ್ಲಿ (December) ಸೆಂಟ್ರಲ್‌ ಸಿಲ್ಕ್ ಬೋರ್ಡ್‌ನಿಂದ ಆರ್‌.ವಿ. ರಸ್ತೆವರೆಗೆ ರೈಲುಗಳ ಸಂಚಾರಕ್ಕೆ ಉದ್ದೇಶಿಸಿತ್ತು.

ಆದರೆ ಈ ಕ್ರಮದಿಂದ ಪ್ರಯಾಣಿಕರನ್ನು ಆಕರ್ಷಿಸುವುದು ಕಷ್ಟವೆಂದು ಅರಿತು ಒಂದೇ ಹಂತದಲ್ಲಿ ಪೂರ್ಣಗೊಳಿಸಲು ನಿರ್ಧಾರ ಮಾಡಿ ಸಿವಿಲ್‌ (Civil) ಕಾಮಗಾರಿಯನ್ನು ವೇಗದಲ್ಲಿ ಪೂರ್ಣಗೊಳಿಸಿತ್ತು.

ಆದರೆ ಬೋಗಿ ಪೂರೈಕೆಯಲ್ಲಿನ ವ್ಯತ್ಯಯದಿಂದ ಈ ಭಾಗದ ಪ್ರಯಾಣಿಕರಿಗೆ ನಿರಾಸೆಯಾಗಿದೆ.

ಭವ್ಯಶ್ರೀ ಆರ್.ಜೆ

Exit mobile version