Health : ಫ್ರೆಂಚ್ ಮಹಿಳೆಯರ ಸೌಂದರ್ಯದ ಗುಟ್ಟು ಬಹಳ ಸಿಂಪಲ್ ; ಈ ನಿಯಮ ಅನುಸರಿಸಿ, ನಿಮ್ಮ ಸೌಂದರ್ಯ ಕಾಪಾಡಿಕೊಳ್ಳಿ

Face Beauty

Beauty Tips : ನೈಸರ್ಗಿಕ ಸೌಂದರ್ಯ(Natural Beauty) ಮತ್ತು ಚರ್ಮದ ಕಾಳಜಿ(Skin Care) ವಿಚಾರಕ್ಕೆ ಬಂದರೆ ಮೊದಲು ನೆನಪಾಗುವುದೇ ಫ್ರೆಂಚ್ ಮಹಿಳೆಯರು(French Women). ಹಾಗಾದರೆ, ಇವರ ಸೌಂದರ್ಯದ ಗುಟ್ಟೇನು ಎನ್ನುವುದನ್ನು ತಿಳಿಯೋಣ ಬನ್ನಿ.


ಮೊದಲನೇದಾಗಿ, ಫ್ರೆಂಚ್ ಮಹಿಳೆಯರು ತಮ್ಮ ವಯಸ್ಸಿನ ಚಿಹ್ನೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲವಂತೆ ಯಾಕೆ ಗೊತ್ತಾ? ಅವರು ತಮ್ಮ ವಯಸ್ಸು ಎಷ್ಟೇ ಅದರೂ ನಾವು ಸುಂದರವಾಗಿ ಕಾಣುತ್ತೇವೆ ಎಂಬ ಭಾವನೆ ಹೊಂದಿರುತ್ತಾರೆ. ಅವರು ತಮ್ಮ ವಯಸ್ಸಿನ ಬಗ್ಗೆ ಭಯ ಪಡುವುದಿಲ್ಲ.

ಚರ್ಮದಲ್ಲಿ ನೆರಿಗೆಗಳಾಗುವುದು ಮತ್ತು ಕೂದಲು ಬಿಳಿಯಾಗುವ ಬಗ್ಗೆ ಅವರಿಗೆ ಯಾವುದೇ ಬೇಸರವಿರುವುದಿಲ್ಲ. ಇನ್ನು, ಮಾರುಕಟ್ಟೆಗಳಲ್ಲಿ ಸಿಗುವ ಆಂಟಿ-ಏಜಿಂಗ್ ಕ್ರೀಮ್ ಗಳು ಮತ್ತು ಲೋಷನ್ ಗಳನ್ನು ಬಳಕೆ ಮಾಡುವ ಬದಲಾಗಿ ಅವರು ನೈಸರ್ಗಿಕ ಎಣ್ಣೆ ಮತ್ತು ಜೇನುತುಪ್ಪವನ್ನು ಬಳಕೆ ಮಾಡುತ್ತಾರಂತೆ.

ಇದನ್ನೂ ಓದಿ : https://vijayatimes.com/kmf-decides-to-hike-milk-products/

ದುಬಾರಿ ವೆಚ್ಚದ ಚರ್ಮದ ಚಿಕಿತ್ಸೆಗಳನ್ನು ಪಡೆಯುವ ಬದಲಾಗಿ, ಅವರು ನೈಸರ್ಗಿಕ ವಿಧಾನಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಇವರು ಹೆಚ್ಚು ಹಣ್ಣುಗಳನ್ನು ಸೇವಿಸುತ್ತಾರೆ ಮತ್ತು ಹಸಿರು ತರಕಾರಿಗಳು ಮತ್ತು ಪೋಷಕಾಂಶ ಭರಿತ ಆಹಾರ ಸೇವನೆಗೆ ಮಹತ್ವ ನೀಡಿ ತಮ್ಮ ಉತ್ತಮ ಆರೋಗ್ಯ ಮತ್ತು ಚರ್ಮದ ಆರೈಕೆಯನ್ನು ಮಾಡಿಕೊಳ್ಳುತ್ತಾರೆ.


ಅದೇ ರೀತಿ, ಅವರ ಮೇಕಪ್ ಕಿಟ್ ನಲ್ಲಿ ಕೇವಲ ನೈಸರ್ಗಿಕ ಸೌಂದರ್ಯ ವರ್ಧಕಗಳು ಮಾತ್ರ ಇರುತ್ತದೆ. ಇವರು ರೆಡಿಯಾಗುವಾಗ ಅತೀ ಕಡಿಮೆ ಮೇಕಪ್ ಅಪ್ ಬಳಸಲು ಇಚ್ಛಿಸುತ್ತಾರೆ ಮತ್ತು ನೈಸರ್ಗಿಕವಾಗಿ ಬ್ಯೂಟಿಫುಲ್ ಆಗಿ ಕಾಣಲು ಬಯಸುತ್ತಾರೆ.

ಹೌದು, ಅತೀ ಕಡಿಮೆ ಮೇಕಪ್ ಮಾಡಿಕೊಂಡರೆ ಹೆಚ್ಚು ಸುಂದರವಾಗಿ ಕಾಣಲು ಸಾಧ್ಯವಿದೆ ಎನ್ನುವುದನ್ನು ಫ್ರೆಂಚ್ ಮಹಿಳೆಯರು ಯಾವಾಗಲೂ ಸಾಧಿಸಿ ತೋರಿಸುತ್ತಾರೆ. ಇನ್ನು, ಫ್ರೆಂಚ್ ಮಹಿಳೆಯರು ಮನೆಯಲ್ಲೇ ಇರಲಿ ಇಲ್ಲವೇ ಹೊರಗಡೆ ಹೋಗುತ್ತಿರಲಿ ಅವರು ಅವರ ಕೂದಲನ್ನು ಬಿಗಿಯಾಗಿ ಕಟ್ಟುವುದಿಲ್ಲ.

ಆದಷ್ಟು ಕೂದಲು ಬಿಟ್ಟುಕೊಂಡಿರುವುದಕ್ಕೆ ಆಸಕ್ತಿ ತೋರುತ್ತಾರೆ, ಆ ಮೂಲಕ ಕೂದಲಿನ ಉಸಿರಾಟಕ್ಕೆ ಅವಕಾಶ ನೀಡುತ್ತಾರೆ. ಒಂದು ವೇಳೆ ಅವರು ಕೂದಲನ್ನು ಕಟ್ಟಿಕೊಂಡರೂ ಕೂಡ ಅದು ಎಂದಿಗೂ ಬಿಗಿಯಾಗಿರುವುದಿಲ್ಲ. ಲೂಸ್ ಆಗಿರುವ ಒಂದು ಗಂಟನ್ನು ಹಾಕಿಕೊಳ್ಳುತ್ತಾರೆ ಹಾಗಾಗಿ ಅತ್ಯಂತ ಹೆಚ್ಚು ಸುಂದರವಾಗಿ ಕಾಣಿಸುತ್ತಾರೆ.

https://youtu.be/zi6g-d3dDwM

ಹೀಗೆ ಕೂದಲನ್ನು ಬಿಗಿಯಾಗಿ ಕಟ್ಟದೇ ಇದ್ದರೆ ಕೂದಲು ತುಂಡಾಗುವಿಕೆ ಇರುವುದೇ ಅಲ್ಲ ಅಥವಾ ಇದ್ದರೂ ಅತ್ಯಂತ ಕಡಿಮೆ ಇರುತ್ತದೆ. ಇದರಿಂದ ಕೂದಲಿನ ಆರೋಗ್ಯ ಚೆನ್ನಾಗಿರುತ್ತದೆ. ಅದೇ ರೀತಿ, ಪ್ರತಿಯೊಬ್ಬರೂ ಕೂಡ ಹೆಚ್ಚು ನೀರು ಕುಡಿಯುವುದರಿಂದಾಗಿ ಅವರ ಆರೋಗ್ಯವನ್ನು ಅದ್ಭುತವಾಗಿ ಇಟ್ಟುಕೊಳ್ಳಬಹುದು.

ಒಂದು ವೇಳೆ ನೀವು ಕೂಡ ಫ್ರೆಂಚ್ ಮಹಿಳೆಯರಂತೆ ನಿಮ್ಮ ಚರ್ಮವು ನೈಸರ್ಗಿಕವಾಗಿ ಸುಂದರವಾಗಿ ಕಾಣಬೇಕು ಎಂದು ಭಾವಿಸಿದರೆ ಸಾಕಷ್ಟು ನೀರು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಹಾಗೇ, ಫ್ರೆಂಚ್ ಮಹಿಳೆಯರು ವೈನ್ ಪ್ರಿಯರು. ಪ್ರತಿ ಊಟ ಮತ್ತು ತಿಂಡಿ, ಉಪಹಾರದ ಸಮಯದಲ್ಲೂ ಅವರಿಗೆ ವೈನ್ ಬೇಕೇ ಬೇಕು.

ನಿಜ ಹೇಳಬೇಕು ಅಂದರೆ, ನಿಮಗೆ ತಿಳಿದಿಲ್ಲದ ಒಂದು ವಿಚಾರವೇನೆಂದರೆ ವೈನ್ ಅಥವಾ ರೆಡ್ ವೈನ್ ನಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳಿದ್ದು, ಅದು ವಯಸ್ಸಿನ ಚಿಹ್ನೆಗಳು ಬೇಗನೆ ಕಾಣಿಸಿಕೊಳ್ಳದಂತೆ ನೋಡಿಕೊಳ್ಳುತ್ತದೆ.

Exit mobile version