Heart : ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ನಿರ್ವಹಿಸುವ ಚಮತ್ಕಾರಿ ಅಂಗ, ಈ ಮುಷ್ಠಿ ಗಾತ್ರದ ಹೃದಯ

Health : ಹೃದಯವನ್ನು (Heart) ಮನುಷ್ಯ‌ನ ದೇಹದ ಅತ್ಯಂತ ಮುಖ್ಯ ಅಂಗ ಎನ್ನಬಹುದು. ಒಮ್ಮೆ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿತು ಎಂದಾದಲ್ಲಿ, ಮನುಷ್ಯನ ಉಸಿರೇ ನಿಲ್ಲುತ್ತದೆ.

ಅವನ ಬದುಕು ಮುಗಿದಿದೆ ಎಂದೇ ಅರ್ಥ. ಹೃದಯವು ದೇಹದ ಎಲ್ಲಾ ಭಾಗಗಳ ಚಲನವಲನಗಳಲ್ಲಿಯೂ ಅತೀ ಮುಖ್ಯ ಪಾತ್ರ ವಹಿಸುತ್ತದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದ ವಿಚಾರ.

ಹೃದಯ ದೇಹದ ಎಲ್ಲಾ ಭಾಗಗಳಿಗೂ ರಕ್ತವನ್ನು ಪಂಪ್ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿಯೂ ಹೆಚ್ಚು ಪೂರಕವಾಗಿ ಸಹಾಯ ಮಾಡುತ್ತದೆ. ಇಂತಹ ಹೃದಯದ ಬಗ್ಗೆ ಕೆಲವು ಆಸಕ್ತಿಕರ ವಿಚಾರಗಳು ಇಲ್ಲಿವೆ.


ಹೃದಯವು ಸಂವಹನ ನಡೆಸುವುದು : ಹೃದಯವು ಮೆದುಳು (Brain) ಮತ್ತು ದೇಹದೊಂದಿಗೆ ನಾಲ್ಕು ವಿಧದಿಂದ ಸಂವಹನ ನಡೆಸುತ್ತದೆ. ಇದು ನರ ವ್ಯವಸ್ಥೆ ಸಂಪರ್ಕ, ಹಾರ್ಮೋನು ಬಿಡುಗಡೆ,

ರಕ್ತದೊತ್ತಡ ಅಲೆಗಳು ಮತ್ತು ಇತರ ಶಕ್ತಿಶಾಲಿ ವಿದ್ಯುತ್ ಮತ್ತು ವಿದ್ಯುತ್ ಕಾಂತೀಯ ಕ್ಷೇತ್ರಗಳ ಮೂಲಕ ಸಂವಹನ ನಡೆಸುವುದು.

ಇದನ್ನೂ ಓದಿ : https://vijayatimes.com/rahul-gandhi-election-plans/


ಮೆದುಳಿನಲ್ಲಿನ ಚಟುವಟಿಕೆಗಳಿಗೆ ಹೋಲಿಸಿದರೆ ಹೃದಯದಿಂದ 60 ಪಟ್ಟು ಹೆಚ್ಚು ವಿದ್ಯುತ್ ಕ್ಷೇತ್ರವನ್ನು ಹೊರಸೂಸುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತು ಆಗಿದೆ.

ಹೃದಯದಲ್ಲಿನ ವಿದ್ಯುತ್ಕಾಂತೀಯ ಕ್ಷೇತ್ರವು ಮೆದುಳಿಗಿಂತ ಸುಮಾರು 5000 ಪಟ್ಟು ಬಲಿಷ್ಠವಾಗಿದೆ ಎಂದು ಸಂಶೋಧನೆಗಳು ಹೇಳಿವೆ.


ಒಬ್ಬ ವ್ಯಕ್ತಿಯ ಹೃದಯದಲ್ಲಿನ ಚಟುವಟಿಕೆಯನ್ನು ಮತ್ತೊಬ್ಬ ವ್ಯಕ್ತಿಯ ಮೆದುಳಿನ ಅಲೆಗಳಿಂದ ಅಳೆಯಬಹುದಾಗಿದೆ. ಅವರು ಪರಸ್ಪರ ಸ್ಪರ್ಶಿಸಿದ್ದರೆ ಅಥವಾ ಕೆಲವೇ ಅಡಿ ಅಂತರದಲ್ಲಿ ಇದ್ದರೆ ಹೀಗೆ ಮಾಡಬಹುದು. ಕೆಲವೊಂದು ಚಿಕಿತ್ಸೆಗಳಲ್ಲಿ ಈ ಸಂವಹನ ಪದ್ಧತಿಯನ್ನು ಬಳಸಿಕೊಳ್ಳಲಾಗುತ್ತದೆ.


ಮೆದುಳಿನ ಸೆರೆಬ್ರಲ್ ಕಾರ್ಟೆಕ್ಸ್ ಮೂಲಕ ಇದು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ನೆರವಾಗುವುದು. ಹೃದಯದ ಆರೋಗ್ಯ‌ಕ್ಕೆ ನಾವು ನಮ್ಮ ಮಾನಸಿಕ ಆರೋಗ್ಯ‌ವನ್ನು ಕಾಪಾಡಿಕೊಳ್ಳುವುದು ಸಹ ಅತೀ ಮುಖ್ಯ. ಅಧಿಕ ಒತ್ತಡಕ್ಕೆ ಒಳಗಾಗದೆ ಸಮಸ್ಥಿತಿಯನ್ನು ಕಾಪಾಡಿಕೊಳ್ಳುವ ಮೂಲಕ ನಮ್ಮ ಹೃದಯವನ್ನು ನಾವು ಜೋಪಾನ ಮಾಡಬಹುದು.

https://youtu.be/qA8iySF16NI ಗ್ಯಾಸ್‌ ಮೋಸ! ಎಚ್ಚರ! COVER STORY PROMO

ದೇಹಕ್ಕೆ ದಣಿವಾದಷ್ಟೇ ವಿರಾಮದ ಅಗತ್ಯ ಸಹ ಇದೆ. ದೈಹಿಕ‌ವಾಗಿ ಮಾತ್ರ‌ವಲ್ಲ, ಮಾನಸಿಕ ದಣಿವು ಸಹ ನಮ್ಮ ದೇಹದ ಆರೋಗ್ಯ, ಹೃದಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.

ಹಾಗಾಗಿ ವಿಶ್ರಾಂತಿ ಪಡೆಯುವುದಕ್ಕೂ ಸಹ ನಾವು ಪ್ರಾಮುಖ್ಯತೆ ನೀಡುವುದು ಅತೀ ಮುಖ್ಯ.

Exit mobile version