ನೆನೆಸಿದ ಬಾದಾಮಿಯ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

ಡ್ರೈ ಫ್ರೂಟ್ಸ್(Dry fruits) ನಮ್ಮ ಆರೋಗ್ಯದ ಮೇಲೆ ಅದ್ಭುತ ಚಮತ್ಕಾರ ಮಾಡುತ್ತವೆ. ಇವು ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು (soaked almond benefits) ಹೆಚ್ಚಿಸುವುದರ ಜೊತೆಗೆ ಸೌಂದರ್ಯ ವರ್ಧಕ ಆಹಾರವಾಗಿ ಕೂಡ ಕೆಲಸ ಮಾಡುತ್ತವೆ. ಇದರಿಂದ ದೇಹಕ್ಕೆ ಶಕ್ತಿ ಮತ್ತು ಚೈತನ್ಯ ಅಪಾರ ಪ್ರಮಾಣದಲ್ಲಿ ಸಿಗುತ್ತದೆ.

ಆದ್ರೆ ಡ್ರೈ ಫ್ರೂಟ್ಸ್ ಒಣಗಿ ಹೋಗಿರುವುದರಿಂದ ಅವುಗಳನ್ನು ನೀರಿನಲ್ಲಿ ನೆನೆಸಿ ಸೇವಿಸುವುದು ಅತ್ಯುತ್ತಮ. ಹಾಗೆಯೇ ಬಾದಾಮಿ(Almond) ಬೀಜಗಳನ್ನು ಸಹ ನೆನೆಸಿ ಸೇವಿಸುವುದರಿಂದ ಆರೋಗ್ಯಕ್ಕೆ ಅಪಾರ ಲಾಭವಿದೆ ಎಂದು ವೈದ್ಯರು ಹೇಳುತ್ತಾರೆ.

ನೆನೆಸಿದ ಬಾದಾಮಿಯ ಆರೋಗ್ಯದ ಗುಟ್ಟು!
ಬಾದಾಮಿ ಬೀಜಗಳಲ್ಲಿ ಅಪಾರ ಆರೋಗ್ಯ ಪ್ರಯೋಜನಗಳಿವೆ. ಇದು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.

ಬಾದಾಮಿಯಲ್ಲಿ ಪ್ರಮುಖವಾಗಿ ಖನಿಜಾಂಶಗಳಾದ ವಿಟಮಿನ್ ಇ, ಕ್ಯಾಲ್ಸಿಯಂ, ಜಿಂಕ್, ಮೆಗ್ನೀಷಿಯಂ ಮತ್ತು ವಿಟಮಿನ್ ವಿಪುಲ ಪ್ರಮಾಣದಲ್ಲಿದೆ.

ಮಾತ್ರವಲ್ಲದೆ ತಲೆ ಕೂದಲಿನ ಆರೋಗ್ಯ ಮತ್ತು ತ್ವಚೆಯ ಆರೋಗ್ಯಕ್ಕೆ ಕೂಡ ಅನುಕೂಲಕಾರಿಯಾಗಿವೆ. ಬಾದಾಮಿ (soaked almond benefits) ಬೀಜಗಳನ್ನು ನೀರಿನಲ್ಲಿ ನೆನೆಸಿ ಸೇವಿಸುವುದರಿಂದ ಜೀರ್ಣ ಶಕ್ತಿ ಕೂಡ ವೃದ್ಧಿಯಾಗುತ್ತದೆ.

ನೆನೆಸಿದ ಬಾದಾಮಿಯ ಕೆಲವು ಆರೋಗ್ಯ ಪ್ರಯೋಜನಗಳನ್ನು ಗಮನಿಸುವುದಾದರೆ…

ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿಯಾಗಿದೆ:
ನಿಮ್ಮ ದೇಹದ ಜೀರ್ಣ ಶಕ್ತಿಯನ್ನು ಹೆಚ್ಚಿಸುವಲ್ಲಿ ನೆನೆಸಿದ ಬಾದಾಮಿ ಬೀಜಗಳು ಪ್ರಮುಖ ಪಾತ್ರ ವಹಿಸುತ್ತವೆ.

ನೀವು ಸೇವಿಸಿರುವ ಇತರ ಆಹಾರಗಳಲ್ಲಿ ಸಿಗುವ ಪ್ರೋಟೀನ್ ಮತ್ತು ಪೌಷ್ಟಿಕಾಂಶಗಳ ಪ್ರಮಾಣವನ್ನು ಹೀರಿಕೊಂಡು ದೇಹದ ಚೈತನ್ಯ ವೃದ್ಧಿಗೆ ನೆರವಾಗುತ್ತದೆ.

ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು:
ಅಧ್ಯಯನಗಳ ಪ್ರಕಾರ ಬಾದಾಮಿ ಬೀಜಗಳಲ್ಲಿ ಆಂಟಿ ಆಕ್ಸಿಡೆಂಟ್(Anti oxident) ಪ್ರಮಾಣ ಹೆಚ್ಚಾಗಿದ್ದು,

ಇದು ಎಲ್ ಡಿ ಎಲ್ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣವನ್ನು ಹೊಂದಿವೆ.ಇದರಿಂದ ಹೃದಯಕ್ಕೆ ಹಾಗೂ ಹೃದಯ ರಕ್ತನಾಳಗಳಿಗೆ ಪ್ರಯೋಜನಕಾರಿಯಾಗಿದೆ.

ಗರ್ಭದಲ್ಲಿ ಮಗುವಿನ ಬೆಳವಣಿಗೆಗೆ ಸಹಕಾರಿಯಾಗಿದೆ:
ಗರ್ಭಿಣಿಯರ ಗರ್ಭಕೋಶದ ಆರೋಗ್ಯ ಕಾಪಾಡುವಲ್ಲಿ ನೆನೆಸಿದ ಬಾದಾಮಿ ಬೀಜ ಸಹಕಾರಿಯಾಗುತ್ತದೆ.

ಏಕೆಂದರೆ ಇದರಲ್ಲಿ ಪೋಲಿಕ್ ಆಮ್ಲ ಅಪಾರ ಪ್ರಮಾಣದಲ್ಲಿದೆ.ಇದು ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣವಾಗುತ್ತದೆ ಮಾತ್ರವಲ್ಲದೆ ಮಗುವಿಗೆ ಬೇಕಾಗಿರುವ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸುತ್ತದೆ.

ಅಧಿಕ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ:
ಪ್ರತಿ ದಿನ ಖಾಲಿ ಹೊಟ್ಟೆಗೆ ನೆನೆಸಿದ ಬಾದಾಮಿ ಬೀಜಗಳನ್ನು ತಿಂದ್ರೆ ಬಹಳ ಬೇಗನೇ ರಕ್ತದ ಒತ್ತಡ(Blood pressure) ನಾರ್ಮಲ್ ಆಗುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ:
ದೇಹದಲ್ಲಿ ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್(Cholesterol) ಇದ್ರೆ ಹೃದಯದ ಕಾಯಿಲೆಗಳು ಶುರುವಾಗುತ್ತವೆ. ರಕ್ತನಾಳಗಳಲ್ಲಿ ಸರಿಯಾದ ರಕ್ತ ಸಂಚಾರ ಇರುವುದಿಲ್ಲ. ಆದರೆ ನೆನೆಸಿದ ಬಾದಾಮಿ ಬೀಜಗಳನ್ನು ತಿನ್ನುವುದರಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶ ದೂರವಾಗುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. aಹೀಗೆ ನೀರಿನಲ್ಲಿ ನೆನಸಿದ ಬಾದಾಮಿಯಿಂದ ಹತ್ತು ಹಲವು ಪ್ರಯೋಜನಗಳಿವೆ.

Exit mobile version