ಶ್ರಾವಣ ಮಾಸದ ಮೊದಲ ಹಬ್ಬ ವರಮಹಾಲಕ್ಷ್ಮಿ ; ವರಮಹಾಲಕ್ಷ್ಮಿ ಹಬ್ಬದ ವಿಷೇಶತೆ ಏನು ಗೊತ್ತಾ?

Varamahalakshmi

ವರಮಹಾಲಕ್ಷ್ಮಿ ಹಬ್ಬ(Varamahalakshmi Festival) ಲಕ್ಷ್ಮಿದೇವಿಯನ್ನು ಪೂಜಿಸುವ ಹಬ್ಬವಾಗಿದೆ. ವರಮಹಾಲಕ್ಷ್ಮಿ ಹಬ್ಬವನ್ನು ಕರ್ನಾಟಕ(Karnataka), ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಆಚರಿಸುತ್ತಾರೆ. ವರಮಹಾಲಕ್ಷ್ಮಿ ಹಬ್ಬವನ್ನು ಹುಣ್ಣಿಮೆಯ ಎರಡನೇ ಶುಕ್ರವಾರ ಅಥವಾ ಹುಣ್ಣಿಮೆಯ ದಿನದ ಹಿಂದಿನ ದಿನದಂದು ಆಚರಿಸಲಾಗುತ್ತದೆ.
ವಿಶೇಷವಾಗಿ ಮಹಿಳೆಯರೇ ಈ ಹಬ್ಬವನ್ನು ಆಚರಿಸುವುದಕ್ಕೆ ಕಾರಣಗಳೇನು ಎಂಬುದನ್ನು ತಿಳಿಯುವುದಾದರೆ.

ಹಿಂದಿನ ಮಗದ ರಾಜ್ಯದಲ್ಲಿ ಕುಂಡಿನಾಪುರ ಎಂಬ ಊರಿನಲ್ಲಿ ಚಾರುಮತಿ ಎಂಬ ಮಹಿಳೆ ವಾಸವಾಗಿದ್ದಳು. ದೇವಿಯನ್ನು ಅತೀವ ಪೂಜಿಸುತ್ತಿದ್ದಳು. ಅವಳ ಭಕ್ತಿಯ ಮೇಲಿನ ಪ್ರಭಾವಿತಳಾದ ಮಹಾಲಕ್ಷ್ಮೀದೇವಿಯು ಅವಳ ಕನಸಿನಲ್ಲಿ ಕಾಣಿಸಿಕೊಂಡಳು.
ಮತ್ತು ವರಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪೂಜಿಸಿ ತನ್ನ ಇಷ್ಟಾರ್ಥದ ಆಶಯಗಳನ್ನು ಪೂರೈಸಲು ಕೋರಿದಳು. ವರಮಹಾಲಕ್ಷ್ಮಿಯ ಸಂಪತ್ತಿನ ದೇವತೆಯಾದ ಲಕ್ಷ್ಮಿಯ ಇನ್ನೊಂದು ರೂಪವಾಗಿದೆ. ಇದರಿಂದ ಇದೊಂದು ಮಹಿಳೆಯರ ಹಬ್ಬವೆಂದೇ ಗುರುತಿಸಲ್ಪಟ್ಟಿದೆ.

ಚಾರುಮತಿ ತನ್ನ ಕನಸನ್ನು ತನ್ನ ಮನೆಯವರಿಗೆ ವಿವರಿಸಿದಾಗ, ಅವರು ಪೂಜೆ ಮಾಡಲು ಅವಳನ್ನು ಪ್ರೋತ್ಸಾಹಿಸಿದರು. ಜೊತೆಗೆ ಗ್ರಾಮದ ಇತರ ಅನೇಕ ಮಹಿಳೆಯರು ಸಾಂಪ್ರದಾಯಿಕ ರೀತಿಯಲ್ಲಿ ಪೂಜೆಯನ್ನು ನೆರವೇರಿಸಿದರು. ಲಕ್ಷ್ಮಿದೇವಿಗೆ ಅನೇಕ ಸಿಹಿತಿಂಡಿಗಳನ್ನು ಮಾಡಿ, ಪವಿತ್ರ ಮಂತ್ರಗಳಿಂದ ಅರ್ಪಿಸಿದರು. ವರಮಹಾಲಕ್ಷ್ಮೀ ಹಬ್ಬದಂದೇ ದೇವಿಯನ್ನು ಪೂಜಿಸಿದರೆ 8 ಶಕ್ತಿಗಳು ಒಂದೇ ಪೂಜೆಯಲ್ಲಿ ಪ್ರತಿಫಲ ಸಿಗುತ್ತದೆ ಎಂಬುದು ಒಂದು ನಂಬಿಕೆ.

8 ಶಕ್ತಿ ದೇವತೆಗಳು ಯಾವುದು ಎಂದು ತಿಳಿಯುವುದಾದರೆ, ಆದಿಲಕ್ಷ್ಮಿ, ಧನ ಲಕ್ಷ್ಮಿ, ಧೈರ್ಯ ಲಕ್ಷ್ಮಿ, ಸೌಭಾಗ್ಯಲಕ್ಷ್ಮಿ, ವಿಜಯಲಕ್ಷ್ಮಿ, ಧಾನ್ಯಲಕ್ಷ್ಮಿ, ಸಂತಾನ ಲಕ್ಷ್ಮಿ, ವಿದ್ಯಾಲಕ್ಷ್ಮಿ. ಈ ಎಲ್ಲಾ 8 ಶಕ್ತಿಗಳು ಒಟ್ಟುಗೂಡಿ ವರವನ್ನು ಪ್ರಾಪ್ತಿಸುತ್ತದೆ ಎಂಬುದು ಪ್ರತೀತಿ. ಮಹಿಳೆಯರು ವರಮಹಾಲಕ್ಷ್ಮಿ ಹಬ್ಬದಂದು ಪೂಜಿಸಿದರೆ ಪತಿಯ ಏಳಿಗೆ ಮತ್ತು ಕುಟುಂಬದವರಿಗೆ ಆರೋಗ್ಯ, ಐಶ್ವರ್ಯ ಲಭಿಸುತ್ತದೆ ಎಂಬುವುದು ನಂಬಿಕೆ.

ಸಾಮಾನ್ಯವಾಗಿ ಹಬ್ಬದ ದಿನದಂದು, ದೇವರ ಕೋಣೆಯಲ್ಲಿ ಹೊಸ ಬಟ್ಟೆ, ಚಿನ್ನಾಭರಣ, ಹಣ ಮತ್ತಿತರ ವಸ್ತುಗಳನ್ನು ಪೂಜೆಯ ಕೋಣೆಯಲ್ಲಿ ಇಟ್ಟು ಪೂಜೆ ಮಾಡಲಾಗುತ್ತದೆ.

Exit mobile version