ಚಿಕ್ಕಬಳ್ಳಾಪುರ ಬಿಜೆಪಿಯಲ್ಲಿ ಭಿನ್ನಮತ: ಎಸ್‌.ಆರ್.ವಿಶ್ವನಾಥ್ ಮನೆ ಬಾಗಿಲಿಗೆ ಕೆ.ಸುಧಾಕರ್ ಬಂದರೂ ಕ್ಯಾರೇ ಎನ್ನದ ಬಿಜೆಪಿ ಶಾಸಕ

Chikkaballapura: ಲೋಕಸಭಾ ಸಮರದ ಭಾರೀ ಪೈಪೋಟಿಯ ನಡುವೆಯೂ ಮಾಜಿ ಸಚಿವ ಕೆ.ಸುಧಾಕರ್ (K Sudhakar) ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಶಾಸಕ ಎಸ್‌.ಆರ್‌. ವಿಶ್ವನಾಥ್ ಅವರು ಇವರಿಗೆ ಹಲವು ಸಲ ಕರೆ ಮಾಡಿದರು, ಮನೆ ಬಾಗಿಲಿಗೆ ಬಂದರೂ ಭೇಟಿ ಮಾಡದೆ ವಾಪಸ್ ಕಳುಹಿಸಿದ್ದಾರೆ.

ಶಾಸಕ ಎಸ್‌.ಆರ್‌. ವಿಶ್ವನಾಥ್ (S.R.Vishwanath) ಅವರು ಸುಧಾಕರ್ ಸ್ಫರ್ಧೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದು, ತನ್ನ ಮಗ ಅಲೋಕ್‌ ಅವರಿಗೆ ಟಿಕೆಡ್ ಕೊಡಿಸುವಲ್ಲಿ ವಿಫಲರಾಗಿರುವ ಯಲಹಂಕ ಬಿಜೆಪಿ ಶಾಸಕರು, ಸುಧಾಕರ್ ಜೊತೆಗೆ ವೇದಿಕೆ ಹಂಚಿಕೊಳ್ಳುವುದಿಲ್ಲ, ಅವರ ಪರ ಪ್ರಚಾರ ನಡೆಸುವುದಿಲ್ಲ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. ಹಲವು ಭಾರಿ ಕರೆ ಮಾಡಿದರೂ ಉತ್ತರಿಸದ ವಿಶ್ವನಾಥ್, ಸುಧಾಕರ್ ಮನೆ ಬಾಗಿಲಿಗೆ ಬಂದರೂ ಭೇಟಿ ಮಾಡದೆ ವಾಪಸ್ ಕಳುಹಿಸಿದ್ದಾರೆ. ಯಲಹಂಕ ಶಾಸಕರ ಈ ನಡೆಯು ಸುಧಾಕರ್‌ಗೆ ಭಾರೀ ಮುಜುಗರ ಉಂಟು ಮಾಡಿರುವುದರ ಜತೆಗೆ, ಸೋಲಿನ ಭೀತಿಗೂ ಕಾರಣವಾಗಿದೆ.

ಕರ್ನಾಟಕದಲ್ಲಿ (Karntaka) ಲೋಕಸಭೆ ಚುನಾವಣೆಗೂ ಮುನ್ನವೇ ಬಿಜೆಪಿಯ ಕೆಲ ನಾಯಕರಿಗೆ ಟಿಕೆಟ್ ನಿರಾಕರಿಸಿರುವುದು ಭಾರೀ ಸಂಚಲನ ಮೂಡಿಸಿದ್ದು, ಚಿಕ್ಕಬಳ್ಳಾಪುರದಿಂದ ಕೆ ಸುಧಾಕರ್‌ ಅವರನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಶಾಸಕರ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕೆ.ಸುಧಾಕರ್ ಅವರನ್ನು ಕಣಕ್ಕಿಳಿಸುವ ಪಕ್ಷದ ನಿರ್ಧಾರ ಯಲಹಂಕದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಬೆಂಬಲಿಗರು ಇನ್ನೂ ಒಪ್ಪಿಕೊಂಡಿಲ್ಲ.

ವಿಶ್ವನಾಥ್ ಅವರು ಇದೇ ಸ್ಥಾನದಿಂದ ತಮ್ಮ ಪುತ್ರ ಅಲೋಕ್‌ಗೆ (Alok) ಟಿಕೆಟ್ ನೀಡುವಂತೆ ಕೋರಿದ್ದರು. ಆದರೆ, ಪಕ್ಷವು ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿಯಾಗಿ ಸುಧಾಕರ್ ಅವರನ್ನು ಆಯ್ಕೆ ಮಾಡಿದೆ. ಭಾನುವಾರ ಕೆ.ಸುಧಾಕರ್ ಎಸ್.ಆರ್.ವಿಶ್ವನಾಥ್ ಅವರನ್ನು ಭೇಟಿ ಮಾಡಲು ತೆರಳಿದ್ದರು, ಆದರೆ ಅವರು ಮನೆಯಲ್ಲಿಲ್ಲ ಎಂದು ತಿಳಿಸಿದ ಅವರ ಬೆಂಬಲಿಗರು, ಮನೆ ಒಳಗೂ ಕರೆಯದೇ ವಾಪಸ್ ಕಳುಹಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್‌ಗೆ ಬಿಜೆಪಿ ಟಿಕೆಟ್ ನೀಡಿದ್ದರಿಂದ ಶಾಸಕ ಎಸ್‌ಆರ್ ವಿಶ್ವನಾಥ್ ರೆಬೆಲ್ ಆಗಿದ್ದಾರೆ. ಬಿಎಸ್ ಯಡಿಯೂರಪ್ಪ (B.S Yediyurappa) ಬಣದಲ್ಲಿ ಗುರುತಿಸಕೊಂಡಿರುವ ಅವರು, ವರಿಷ್ಠರ ಮಾತಿಗೂ ಕೇರ್ ಮಾಡದೆ ಸುಧಾಖರ್ ವಿರುದ್ಧವಾಗಿ ನಿಂತಿದ್ದಾರೆ. ಟಿಕೆಟ್ ಘೋಷಣೆಯಾಗಿ ವಾರವಾದರೂ ವಿಶ್ವನಾಥ್ ಮುನಿಸು ತಣಿಸುವಲ್ಲಿ ರಾಜ್ಯ ನಾಯಕರು ಮತ್ತು ಸೂಧಾಖರ್ ವಿಫಲರಾಗಿದ್ದಾರೆ.

ಬಿಜೆಪಿ (BJP) ನಾಯಕರಲ್ಲಿ ಆತಂಕ ಹೆಚ್ಚಾಗಿದ್ದು, ಚಿಕ್ಕಬಳ್ಳಾಪುರ ಬಿಜೆಪಿಯಲ್ಲಿನ ಭಿನ್ನಮತ ತೀವ್ರಗೊಂಡಿದೆ. ಎಸ್‌.ಆರ್. ವಿಶ್ವನಾಥ್ ಭೇಟಿ ಮಾಡಲು ಒಪ್ಪದ ಹಿನ್ನೆಲೆ ಸುಧಾಕರ್‌ಗೆ ಮುಜುಗರವುಂಟಾಗಿ ವಾಪಸ್ ತೆರಳಿದ್ದಾರೆ. ಯಲಹಂಕ ಶಾಸಕರಾದ ಎಸ್‌ಆರ್ ವಿಶ್ವನಾಥ್ ನಮ್ಮ ಸ್ನೇಹಿತರು. ಹಲವಾರು ಸಲ ನಾನು ಕರೆ ಮಾಡಿದ್ದೆ, ಮೆಸೇಜ್ ಮಾಡಿದ್ದೆ. ಅದಕ್ಕೆ ಯಾವುದೇ ಉತ್ತರ ಇಲ್ಲ. ಯಾವುದಕ್ಕೂ ಸ್ಪಂದಿಸಿರಲಿಲ್ಲ. ನಮ್ಮ ನಾಯಕರು ಯಡಿಯೂರಪ್ಪ ಅವರು ಮಾತನಾಡುತ್ತಾರೆ ಎಂದು ಹೇಳಿದ್ದಾರೆ.

ಇದೇ ಚುನಾವಣೆ ಕೊನೆಯಲ್ಲ. ನಮ್ಮ ನಾಯಕರು ಸಮಸ್ಯೆ ಬಗೆಹರಿಸುತ್ತಾರೆ. ಇದರ ನಡುವೆ ನಮ್ಮ ಅವರ ಭೇಟಿ ಸಾಧ್ಯವಾಗಿಲ್ಲ. ಕೆಲವು ರಾಜಕಾರಣದಲ್ಲಿ ಎಲ್ಲವು ಸರಾಗವಾಗಿ ನಡೆದರೆ ಅದು ರಾಜಕಾರಣವಲ್ಲ. ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗಬೇಕು. ನನ್ನ ಮತ್ತು ಅವರ ನಡುವೆ ವೈಯಕ್ತಿಕ ಕಲಹಗಳು ಏನು ಇಲ್ಲ. ನಾನು ಸೇರಿ ಮೋದಿ ಅವರ ಹೆಸರು ಹೇಳಿ ಮತ ಕೇಳುತ್ತಿರೋದು. ಏ.4ರಂದು ನಾಮಪತ್ರ ಸಲ್ಲಿಸುತ್ತೇನೆ. ಚಿಕ್ಕಬಳ್ಳಾಪುರದಲ್ಲಿ ರೋಡ್ ಶೋ ನಡೆಸಿ ಅಧಿಕೃತ ನಾಮಪತ್ರ ಸಲ್ಲಿಸುತ್ತೇನೆ” ಎಂದು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ಸುಧಾಕರ್ ನಡೆಗೆ ಕಿಡಿಕಾರಿದ ಎಸ್‌.ಆರ್ ವಿಶ್ವನಾಥ್:
ಮಾಧ್ಯಮದವರಿಗೆ ಮಾಹಿತಿ ನೀಡಿದರೆ ಸಾಕೇ? ನಮ್ಮ ಮನೆಗೆ ಬರುವಾಗ ನನಗೆ ಹೇಳೋದು ಬೇಡ್ವಾ? ನಾನ್ಯಾಕೆ ಒಬ್ಬನೇ ಮಾತಾಡಲಿ? ಹೇಳಿದ್ದರೆ ಕಾರ್ಯಕರ್ತರನ್ನು ಸೇರಿಸಿ ಅವರ ಎದುರೇ ಮಾತನಾಡುತ್ತಿದ್ದೆ. ಅಮಿತ್ ಶಾ ಕಾರ್ಯಕ್ರಮಕ್ಕೆ ಹೋಗುತ್ತೇನೆ. ಅಮಿತ್ ಶಾ ಕಾರ್ಯಕ್ರಮದ ತಯಾರಿಗಳನ್ನು ನೋಡಿಕೊಳ್ಳಲು ತೆರಳುತ್ತೇನೆ” ಎಂದಿದ್ದಾರೆ.

Exit mobile version