ಸಾರಿಗೆ ನೌಕರರ ಅಮಾನತ್ತು ಆದೇಶ ವಾಪಸ್

ಬೆಂಗಳೂರು ಸೆ 21: ಸಾರಿಗೆ ನೌಕರ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಪ್ರತಿಭಟನೆ ಅವಕಾಶ ನೀಡದಿದ್ದಾಗಲೂ ಕೂಡ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದ್ದರು, ಆ ಸಮಯದಲ್ಲಿ ಸರ್ಕಾರ  ಸಾರಿಗೆ ನೌಕರರ ಮೇಲೆ ಪ್ರಕರಣವನ್ನು ದಾಖಲಿಸಿತ್ತು ಜೊತೆಗೆ ಕೆಲವರನ್ನು ಅಮಾನತ್ತು ಕೂಡ ಮಾಡಿತ್ತು. ಆದರೆ ಈಗ ಸರ್ಕಾರ ಸಾರಿಗೆ ನೌಕರರ ಮೇಲೆ ದಾಖಲಿಸಲಾದ ಮೊಕದ್ದಮೆ‌ಗಳನ್ನು ಹಿಂಪಡೆಯಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಈ ಬಗ್ಗೆ ಸಾರಿಗೆ ಸಚಿವ ಶ್ರೀರಾಮುಲು ಅವರು ಮಾತನಾಡಿ,ಸ್ರಕಾರದ ಈ ಆದೇಶದಿಂದ ಸುಮಾರು ಆರು ಸಾವಿರ ನೌಕರರು ತೊಂದರೆಗೀಡಾಗಿದ್ದರು. ನಾಲ್ಕು ಸಾವಿರ ನೌಕರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಉಳಿದ ಎರಡು ಸಾವಿರ ಸಿಬ್ಬಂದಿ ಜೊತೆ ಮಾತನಾಡಲಾಗುತ್ತದೆ. ಕಾನೂನು ತಜ್ಞರ ಜೊತೆ ಮಾತನಾಡಿ ಅವರ ಮೇಲಿನ ಪ್ರಕರಣ ಹಿಂಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.,

ಜೊತೆಗೆ ಇದರ ಸಾಧಕ ಬಾಧಕಗಳ ಬಗ್ಗೆ ನಾಲ್ಕು ನಿಗಮಗಳ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಾಗಿದೆ. ಈ ಪ್ರತಿಭಟನೆಯಲ್ಲಿ ಕೆಲ ನೌಕರರು ಅಮಾನತಾಗಿದ್ದರು, ಇನ್ನು ಕೆಲವರು ವರ್ಗಾವಣೆ ಆಗಿದ್ದರು ಅವರೆಲ್ಲರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವುದಕ್ಕೆ ಚಿಂತನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

Exit mobile version