ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆಗೊಳಿಸುವಂತೆ ಕೋರಿ ರಾಷ್ಟ್ರಪತಿಗೆ ಸ್ಟ್ಯಾಲಿನ್ ಪತ್ರ

ಚೆನ್ನೈ, ಮೇ. 21: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಎಂದು ಕೋರಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರಾಷ್ಟ್ರಪತಿ ರಾಮನಾಥ್ ಕೋವಿಂದದ ಅವರಿಗೆ ಪತ್ರ ಬರೆದಿದ್ದಾರೆ. 2018ರಲ್ಲಿ ತಮಿಳುನಾಡು ಸರ್ಕಾರ ನೀಡಿದ್ದ ಶಿಫಾರಸುಗಳನ್ನು ಪರಿಗಣಿಸಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆಗೈದಿದ್ದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಎಲ್ಲಾ 7 ಅಪರಾಧಿಗಳನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಆಗ್ರಹಿಸಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆಗೈದಿದ್ದ ಪ್ರಕರಣದಲ್ಲಿ ಅಪರಾಧಿಗಳು 30 ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದಾರೆ. ತಮಿಳುನಾಡು ಸರ್ಕಾರ ಅವರ ಶಿಕ್ಷೆಯನ್ನು ಕಡಿತಗೊಳಿಸಿ ಬಿಡುಗಡೆಗೊಳಿಸಲು ಈಗಾಗಲೇ ಮನವಿ ಮಾಡಿದೆ. ಅಲ್ಲದೇ ಬಹುತೇಕ ರಾಜಕೀಯ ಪಕ್ಷಗಳು ಸಹ ಈ ಮನವಿಗೆ ದನಿಗೂಡಿಸಿವೆ. ನಮ್ಮ ಮನವಿಯನ್ನು ಪರಿಗಣಿಸಿ ಎಲ್ಲಾ 7 ಅಪರಾಧಿಗಳನ್ನು ಬಿಡುಗಡೆಗೊಳಿಸುವಂತೆ ಕೋರಿ ಅವರು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.

ಇಂದು ರಾಜೀವ್ ಗಾಂಧಿ ದಿವಂಗತರಾದ ದಿನ:
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಲ್ಟಿಟಿಇ ಉಗ್ರರಿಂದ ಹತರಾಗಿ 2021ರ ಮೇ 21ಕ್ಕೆ 30 ನೇ ವರ್ಷ. ತಮಿಳುನಾಡು ರಾಜಧಾನಿ ಚೆನ್ನೈ ಸಮೀಪದ ಪೆರಂಬದೂರು ಬಳಿ ಕಾಂಗ್ರೆಸ್ ಪರ ಪ್ರಚಾರದಲ್ಲಿ ನಿರತರಾಗಿದ್ದ ರಾಜೀವ್ ಗಾಂಧಿ ತಮಗರಿವಿಲ್ಲದೇ ಉಗ್ರರಿಂದ ಮೃತರಾಗಿದ್ದರು.
ಎಲ್ಟಿಟಿಟಿಯ ಸದಸ್ಯರು ಸ್ವತಃ ಮಾನವ ಬಾಂಬ್ ಆಗಿ ಪರಿವರ್ತನೆಗೊಂಡು ರಾಜೀವ್ ಗಾಂಧಿಯವರು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಪೆರಂಬದೂರ್ಗೆ ಆಗಮಿಸಿದ್ದರು. ಪ್ರಧಾನಿಯವರಿಗೆ ನಮಸ್ಕರಿಸುವುದಾಗಿ ಕೆಳಗೆ ಬಾಗಿ ರಾಜೀವ್ ಗಾಂಧಿಯವರ ಪಾದಗಳನ್ನು ಸ್ಪರ್ಶಿಸುತ್ತಿದ್ದಂತೆಯೇ ಮಾನವ ಬಾಂಬ್ ಸಿಡಿದಿತ್ತು. ಮಾನವ ಬಾಂಬ್ ಆಗಿದ್ದ ವ್ಯಕ್ತಿಯು ಸೇರಿ ಒಟ್ಟು 14 ಜನರು ಈ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಜೀವ ಕಳೆದುಕೊಂಡಿದ್ದರು

Exit mobile version