Politics : ಡಿಕೆಶಿ ಅವರೇ, ಭಾರತ್ ಜೋಡೋ ಯಾತ್ರೆಗೆ ಸಿದ್ದು ಬಣದಿಂದ ಸಹಕಾರ ಸಿಗುತ್ತಿಲ್ಲವೇ? : ಬಿಜೆಪಿ

dk shivakumar

Bengaluru : ಡಿಕೆಶಿ(DKS) ಅವರೇ, ಭಾರತ್ ಜೋಡೋ(Bharat Jodo) ಯಾತ್ರೆಗೆ ಸಿದ್ದರಾಮಯ್ಯ(Siddaramaiah) ಬಣದಿಂದ ಸಹಕಾರ ಸಿಗುತ್ತಿಲ್ಲವೇ? ಭಾರತ್ ಜೋಡೋ ಯಾತ್ರೆಯ ಮೂಲಕ ಕಾಂಗ್ರೆಸ್(state-bjp-Counter attack DK Shivkumar) ಒಳಜಗಳ ಮತ್ತೆ ಬೀದಿಗೆ ಬಂದಿದೆ ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ.

ಈ ಕುರಿತು ಟ್ವೀಟ್‌(Tweet) ಮಾಡಿರುವ ರಾಜ್ಯ ಬಿಜೆಪಿ, ಭಾರತ್ ಜೋಡೋ ಯಾತ್ರೆಯ ಮೂಲಕ ಕಾಂಗ್ರೆಸ್ ಒಳಜಗಳ ಮತ್ತೆ ಬೀದಿಗೆ ಬಂದಿದೆ. ಕೆಪಿಸಿಸಿ ಅಧ್ಯಕ್ಷ(KPCC President) ಡಿ.ಕೆ.ಶಿವಕುಮಾರ(DK Shivkumar) ಮತ್ತು ವಿಪಕ್ಷ ಸಿದ್ದರಾಮಯ್ಯ ಅವರೊಳಗಿನ ಕುರ್ಚಿ ಕಿತ್ತಾಟ ಈಗ ಹೊಸರೂಪ ಪಡೆದಿದೆ.

ಡಿಕೆಶಿ ಅವರೇ, ಭಾರತ್ ಜೋಡೋ ಯಾತ್ರೆಗೆ ಸಿದ್ದರಾಮಯ್ಯ ಬಣದಿಂದ ಸಹಕಾರ ಸಿಗುತ್ತಿಲ್ಲವೇ? ಎಂದು ಪ್ರಶ್ನಿಸಿದೆ.

ಪಕ್ಷದಲ್ಲಿ ಡಿಕೆಶಿ ವರ್ಚಸ್ಸಿನ ಪ್ರಭಾವ ವಲಯವನ್ನು ತಮ್ಮ ಆಪ್ತ ವಲಯದ ಮೂಲಕ ತಗ್ಗಿಸಲು ಸಿದ್ದರಾಮಯ್ಯ ಹೆಣಗಾಡುತ್ತಿದ್ದಾರೆ. ಭಾರತ್ ಜೋಡೋ ಯಾತ್ರೆಯಲ್ಲಿ ಇದು ಪೂರ್ಣವಾಗಿ ಬಯಲಾಗುತ್ತಿದೆ.

ಇದನ್ನೂ ಓದಿ : https://vijayatimes.com/unknown-facts-about-bloodwood-tree/

ಸಿದ್ದರಾಮೋತ್ಸವಕ್ಕೆ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಮುನಿಸು. ಭಾರತ್ ಜೋಡೋ ಯಾತ್ರೆಗೆ ಕಾಂಗ್ರೆಸ್‌ ವಿಪಕ್ಷ ನಾಯಕ ಮುನಿಸು. ವಿಪಕ್ಷ ನಾಯಕ, ಕೆಪಿಸಿಸಿ ಅಧ್ಯಕ್ಷರ ನಡುವಿನ ಸಂಬಂಧ ಬೂದಿ ಮುಚ್ಚಿದ ಕೆಂಡ.

ಸಿದ್ದರಾಮಯ್ಯ ಯಾತ್ರೆಗೆ ಜನ ಸೇರಿಸಿದ ಕಾಂಗ್ರೆಸ್ ನಾಯಕರು ಭಾರತ್ ಜೋಡೋ ಯಾತ್ರೆಗೆ ಜನ ಸೇರಿಸಲು ನಿರಾಕರಿಸುತ್ತಿರುವುದು ಡಿಕೆಶಿ ಮೇಲಿನ ದ್ವೇಷದಿಂದಲೋ ಅಥವಾ ರಾಹುಲ್ ಗಾಂಧಿ(Rahul Gandhi) ಜೊತೆಗಿನ ವೈಮನಸ್ಸಿನಿಂದಲೋ? ಎಂದು ವ್ಯಂಗ್ಯವಾಡಿದೆ.

ಸಿದ್ದರಾಮಯ್ಯ ಗರಂ : ಭಾರತ್‌ ಜೋಡೋ ಯಾತ್ರೆ ಸದ್ಯ ಕೇರಳದಲ್ಲಿ(Kerala) ಸಾಗುತ್ತಿದೆ. ಇದೇ ತಿಂಗಳು ಚಾಮರಾಜನಗರದ(Chamrajnagar) ಮೂಲಕ ಕರ್ನಾಟಕಕ್ಕೆ(Karnataka) ಪ್ರವೇಶಿಸಿ, ರಾಮಚೂರಿನವರೆಗೂ ಯಾತ್ರೆ ಸಾಗಲಿದ್ದು, ಇದರ ಪೂರ್ವಭಾವಿ ಸಭೆಗಳನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ : https://vijayatimes.com/memes-to-a-comedian-hero-ositha-iheme/

ಆದರೆ ಈ ಸಭೆಗಳಿಗೆ ನನಗೆ ಆಹ್ವಾನ ನೀಡಿಲ್ಲ. ಹಾಗಾಗಿ ನಾನು ಸಭೆಗೆ ಬರುವುದಿಲ್ಲ ಎಂದು ಸಿದ್ದರಾಮಯ್ಯ ಗರಂ ಆಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರು ಕೆಲ ಕಾಂಗ್ರೆಸ್‌ ನಾಯಕರ ಬಳಿ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಭಾರತ್‌ ಜೋಡೋ ಯಾತ್ರೆಯ ಸಂಪೂರ್ಣ ಜವಾಬ್ದಾರಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ವಹಿಸಿಕೊಂಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಬಣ ಯಾತ್ರೆಯ ಚಟುವಟಿಕೆಗಳಿಂದ ಅಂತರ ಕಾಯ್ದುಕೊಳ್ಳುತ್ತಿದೆ ಎನ್ನಲಾಗಿದೆ.

Exit mobile version