ಹಿಂದಿ ದಿವಸ್ ರದ್ದು ಮಾಡ್ತೀವಿ ಎಂದು ರಾಹುಲ್ ಗಾಂಧಿಯಿಂದ ಹೇಳಿಕೆ ಕೊಡಿಸುವ ಧಮ್ ಇದೆಯೇ? ; ಸಿದ್ದರಾಮಯ್ಯನವರಿಗೆ ಬಿಜೆಪಿ ಸವಾಲು!

Karnataka : ನಿಮ್ಮ ಅಧಿಕಾರದ ಕನಸಿನಲ್ಲಾದರೂ ಹಿಂದಿ ದಿವಸ್(Hindi Diwas) ರದ್ದು ಮಾಡುತ್ತೇವೆ ಎಂದು ಸೋನಿಯಾ(Sonia Gandhi), ರಾಹುಲ್ ಗಾಂಧಿ(Rahul Gandhi) ಅವರಿಂದ ಹೇಳಿಕೆ ಕೊಡಿಸುವ ಧಮ್ ಇದೆಯೇ? ಎಂದು ರಾಜ್ಯ ಬಿಜೆಪಿ(State BJP) ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರಿಗೆ ಸವಾಲು ಹಾಕಿದೆ.

ಈ ಕುರಿತು ಟ್ವೀಟ್‌(Tweet) ಮಾಡಿರುವ ರಾಜ್ಯ ಬಿಜೆಪಿ, ಸಿದ್ದರಾಮಯ್ಯನವರೇ, ಮೋದಿ ಸರ್ಕಾರ ಎನ್ಇಪಿ(NEP) ಮೂಲಕ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಿದೆ. ಆದರೆ ಕಾಂಗ್ರೆಸ್‌(Congress) ರಾಷ್ಟ್ರವ್ಯಾಪಿ ತ್ರಿಭಾಷಾ ಸೂತ್ರ ಹೇರಿತು.

ಇದನ್ನೂ ಓದಿ : https://vijayatimes.com/annamalai-against-a-raja-statement/

ನಿಮ್ಮ ಅಧಿಕಾರದ ಕನಸಿನಲ್ಲಾದರೂ ಹಿಂದಿ ದಿವಸ್ ರದ್ದು ಮಾಡುತ್ತೇವೆ ಎಂದು ಸೋನಿಯಾ, ರಾಹುಲ್ ಗಾಂಧಿ ಅವರಿಂದ ಹೇಳಿಕೆ ಕೊಡಿಸುವ ಧಮ್ ಇದೆಯೇ? ಎಂದು ಪ್ರಶ್ನಿಸಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹಿಂದಿ ದಿವಸ್‌ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದು, ಯಾವ ಭಾಷೆಯ ಕಲಿಕೆಯನ್ನೂ ವಿರೋಧಿಸುವುದಿಲ್ಲ,

ಯಾವ ಭಾಷೆಯ ಹೇರಿಕೆಯನ್ನೂ ಸಹಿಸುವುದಿಲ್ಲ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಪೂಜೆ. ಕೇಂದ್ರ ಸರ್ಕಾರ ಹಿಂದಿ ದಿವಸ ಆಚರಿಸಿ ಹಿಂದಿ ಭಾಷೆಯ ಹೆಸರಲ್ಲಿ ಆರ್ ಎಸ್ ಎಸ್ ಪ್ರಣೀತ ಹಿಂದುತ್ವ ಹೇರುವುದನ್ನ ನಾನು ಖಂಡಿಸುತ್ತೇನೆ ಎಂದಿದ್ದರು. ಇನ್ನು ಇದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು,

https://youtu.be/H4Z1yZVsL8M ರೈತರಿಗೆ ನ್ಯಾಯ ಒದಗಿಸಿಕೊಡಿ!

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುವ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಆಶಯವನ್ನು ನಮ್ಮ ಸರ್ಕಾರವು ಕನ್ನಡ ಕಡ್ಡಾಯದ ಹೊಸ ಕಾನೂನಿನ ಮೂಲಕ ಪೂರೈಸಿದೆ. ಜೊತೆಗೆ ಎಲ್ಲ ವೃತ್ತಿಪರ ಕೋರ್ಸ್ಗಳ ಪರೀಕ್ಷೆಗಳನ್ನು ಕನ್ನಡದಲ್ಲೇ ಬರೆಯಲು ಅನುವು ಮಾಡಿಕೊಡುವ ಮೂಲಕ ಕನ್ನಡ ರಕ್ಷಣೆಗೆ ನಮ್ಮ ಸರ್ಕಾರ ಬದ್ಧತೆ ತೋರಿದೆ ಎಂದಿದ್ದರು.

Exit mobile version