ಇವತ್ತಿನ ಪೆಟ್ರೋಲ್-ಡೀಸೆಲ್ ಬೆಲೆ ಎಲ್ಲೆಲ್ಲಿ ಎಷ್ಟಿದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ!

petrol

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಬಿಟ್ಟರೆ ಇಳಿಕೆ ಕಂಡಿರುವುದು ಬಹಳ ಕಡಿಮೆ ನಿದರ್ಶನ ಎಂದೇ ಹೇಳಬಹುದು. ಅದರಲ್ಲೂ ಇಂದಿನ ದಿನಗಳಲ್ಲಂತೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಅಂತ ಇಳಿಕೆ ಕಂಡುಬಂದಿಲ್ಲ. ಕೋವಿಡ್ ಸಮಯದಲ್ಲಿ ಪೆಟ್ರೋಲ್ ಬೆಲೆ 113 ರೂಪಾಯಿಗೆ ಏರಿಕೆಯಾಗಿತ್ತು. ಇದರಲ್ಲಿ 13 ರೂಪಾಯಿಯನ್ನು ಇಳಿಕೆ ಮಾಡಿತು ಸರ್ಕಾರ! ಆದರೆ ಅದು ಕೂಡ ಮುಂದಿನ ಚುನಾವಣೆಗೆ ಯಾವುದೇ ತೊಂದರೆಯಾಗದಿರಲಿ ಎಂಬ ಮುಂದಾಲೋಚನೆಯಿಂದ ಕಡಿತಗೊಳಿಸಿತು.

ಇಲ್ಲ ಎಂದರೆ ಯಾವುದೇ ಕಾರಣಕ್ಕೂ ಕಡಿಮೆಗೊಳಿಸುವ ಯೋಚನೆ ಸರ್ಕಾರಕ್ಕೇನು ಇರಲಿಲ್ಲ! ಸದ್ಯ ಕಾರಣ ಏನೇ ಇರಲಿ, ಯಾವುದೇ ಇರಲಿ ಜನರಿಗೆ ಇಂಧನ ಬೆಲೆಯಲ್ಲಿ ಇಳಿಕೆ ತೋರಿಸಿದ್ದು, ನಿಟ್ಟುಸಿರು ಬಿಟ್ಟಂತಾಗಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 5 ರೂಪಾಯಿ ಅಬಕಾರಿ ಸುಂಕವನ್ನು ಹಾಗೂ ಡೀಸೆಲ್ ಮೇಲೆ 10 ರೂಪಾಯಿ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ. ಸದ್ಯ ತದನಂತರ ಇಂಧನ ಬೆಲೆಯಲ್ಲಿ ಯಾವುದೇ ಏರಿಕೆ ಮತ್ತು ಇಳಿಕೆ ಕಂಡುಬಂದಿಲ್ಲ.

ಒಟ್ಟಾರೆ ಎಲ್ಲೆಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ದರಪಟ್ಟಿ ಹೇಗಿದೆ ಎಂಬುದನ್ನು ತಿಳಿಯೋಣ :

ನವದೆಹಲಿ : ಪೆಟ್ರೋಲ್ 95.41, ಡೀಸೆಲ್ 86,67
ಪಶ್ಚಿಮ ಬಂಗಾಳ ಕೋಲ್ಕತ್ತಾ : ಪೆಟ್ರೋಲ್ 104.67, ಡೀಸೆಲ್ 89.79
ಮುಂಬೈ : ಪೆಟ್ರೋಲ್ 109.98, ಡೀಸೆಲ್ 94.14
ಚೆನೈ : ಪೆಟ್ರೋಲ್ 101.50, ಡೀಸೆಲ್ 91.52
ರಾಜಧಾನಿ ಬೆಂಗಳೂರು : ಪೆಟ್ರೋಲ್ 100.58, ಡೀಸೆಲ್ 85.01
ಮಂಗಳೂರು : ಪೆಟ್ರೋಲ್ 99.84, ಡೀಸೆಲ್ 84.31
ಮೈಸೂರು : ಪೆಟ್ರೋಲ್ 100.32, ಡೀಸೆಲ್ 84.77

Exit mobile version