ರಾಜ್ಯದಲ್ಲಿ ಮಾರ್ಚ್ 17 ರಿಂದ 2 ದಿನ ಭಾರೀ ಮಳೆ: ಹವಾಮಾನ ಇಲಾಖೆ

karnataka: ಮಾರ್ಚ್ 17 ರಿಂದ ಎರಡು ದಿನಗಳ ಕಾಲ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ (Meteorological Department) ನೀಡಿದೆ. ನಿನ್ನೆ ಹಾವೇರಿಯಲ್ಲಿ ಭಾರೀ ಮಳೆಯಾಗಿತ್ತು. ಮಳೆಯ ಆರ್ಭಟಕ್ಕೆ ಹಾವೇರಿಯಲ್ಲಿ ನಡೆದಿದ್ದ ಮುಖ್ಯಮಂತ್ರಿಗಳ ಕಾರ್ಯಕ್ರಮ |(State Weather Report) ಅಸ್ಥವ್ಯಸ್ಥವಾಗಿತ್ತು. ನಿನ್ನೆ ಹಾವೇರಿ ಅಲ್ಲದೆ ಜಯಪುರ, ಬಾಳೆಹೊನ್ನೂರು, ಶುಂಠಿಕೊಪ್ಪದಲ್ಲೂ ಮಳೆಯಾಗಿದೆ.

ಇಂದು ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ. ಕಲಬುರಗಿಯಲ್ಲಿ 37.5 ಡಿಗ್ರಿ ಸೇಲ್ಸಿಯಸ್ ಉಷ್ಣಾಶ, ಬಾಗಲಕೋಟಿಯಲ್ಲಿ 13.0 ಡಿಗ್ರಿ ಅತಿ ಕನಿಷ್ಠ ಉಷ್ಣಾOಶ ದಾಖಲಾಗಿದೆ.

ಬಿರು ಬಿಸುಲಿನಿಂದ ಕಂಗೆಟ್ಟ ಜನರಿಗೆ ವರ್ಷದಾರೆ ತOಪೆರೆಯುತ್ತಿದೆ. . ಮಾರ್ಚ್ 16 ರಿಂದ ಉತ್ತರ ಒಳನಾಡು , ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಅದಲ್ಲದೆ ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಬೆಂಗಳೂರು, ರಾಯಚೂರು, ಹಾಸನ, ಬಳ್ಳಾರಿ, ಕೊಡಗು ಕೊಪ್ಪಳ, ಶಿವಮೊಗ್ಗ, ತುಮುಕೂರು,

ವಿಜಯನಗರ ಜಿಲ್ಲೆಗಳಲ್ಲಿ ಮುಂದಿನ 2 ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

https://youtu.be/q3ZLwCWjXzg

ಬೆAಗಳೂರಿನಲ್ಲೂ ಮಳೆ: ಕರ್ನಾಟಕ ರಾಜ್ಯದ (state karnataka) ರಾಜ್ಯಧಾನಿ , ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು (State Weather Report) ಹಗುರ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನ ಎಚ್. ಎ. ಎಲ್. ನಲ್ಲಿ 32.5 ಡಿಗ್ರಿ ಸೇಲ್ಸಿಯಸ್ ಉಷ್ಣಾಂಶ ಇದೆ. 19.0 ಡಿಗ್ರಿ ಸೇಲ್ಸಿಯಸ್ ಕನಿಷ್ಠಉಷ್ಣಾಂಶವಾಗಿದೆ.

ಇದನ್ನೂ ಓದಿ : https://vijayatimes.com/basavaraj-vs-siddaramaiah/


ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಹಾಗಾಗಿ ಮನೆಯಿಂದ ಕೆಲಸಕ್ಕೆ ತೆರಳುವವರು ಛತ್ರಿ, ಜಾಕೆಟ್ ಮುಂತಾದ ವಸ್ತುಗಳನ್ನು ಮಳೆಯಿಂದ ರಕ್ಷಿಸಿಕೊಳ್ಳಲು ತೆಗೆದುಕೊಂಡು ಹೋಗುವುದು ಉಪಯುಕ್ತವೆನಿಸುವುದು.

Exit mobile version