ಶ್ವಾನವನ್ನು ಹೊಡೆದು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ-ಮಗನ ವಿರುದ್ಧ ಕೇಸ್ ದಾಖಲು!

ಮಹಾರಾಷ್ಟ್ರದ(Maharashtra) ಉಲ್ಲಾಸ್‌ನಗರದ ವ್ಯಕ್ತಿ ಮತ್ತು ಆತನ ಮಗನ ವಿರುದ್ಧ ಬೀದಿ ನಾಯಿಯನ್ನು(Stray Dog) ಕೊಂದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ವರದಿಯ ಪ್ರಕಾರ, ವ್ಯಕ್ತಿ ಗುರುವಾರ ಉಲ್ಲಾಸ್‌ನಗರ ಟೌನ್‌ಶಿಪ್‌ನಲ್ಲಿ ನಾಯಿಯನ್ನು ಕೋಲಿನಿಂದ ಹೊಡೆಯಲು ಪ್ರಾರಂಭಿಸಿದ್ದಾನೆ. ಆತನ ಮಗ ಶನಿವಾರವೂ ದೊಣ್ಣೆಯಿಂದ ನಾಯಿಯ ಮೇಲೆ ಹಲ್ಲೆ ನಡೆಸಿದ್ದು, ನಂತರ ನಾಯಿ ಸಾವನ್ನಪ್ಪಿದೆ. ಪಿಟಿಐ ವರದಿಗಳ ಪ್ರಕಾರ, ನೆರೆಹೊರೆಯವರು ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ ಆದರೆ ಅವರ್ಯಾರು ಗಟ್ಟಿಯಾಗಿ ತಡೆದಿಲ್ಲ. ಇದನ್ನು ನೋಡಿದ ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ವಿಡಿಯೋವನ್ನು ಗಮನಕ್ಕೆ ತೆಗೆದುಕೊಂಡು ಕೆಲವು ಕಾರ್ಯಕರ್ತರು ತಂದೆ-ಮಗ ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಪೊಲೀಸರು ಭಾನುವಾರದಂದು ವ್ಯಕ್ತಿ ಮತ್ತು ಆತನ ಮಗನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 429 (ಪ್ರಾಣಿಯನ್ನು ಕೊಲ್ಲುವ ಅಥವಾ ಅಂಗವಿಕಲಗೊಳಿಸುವ ಮೂಲಕ ದುಷ್ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದ್ರೆ, ಸದ್ಯ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂಬುದು ಸ್ಥಳೀಯರ ಆರೋಪ!

Exit mobile version