ಡ್ರಗ್ಸ್‌ ಸೇವಿಸುವಂತೆ ಒತ್ತಾಯಿಸಿ ಶಾಲೆಯಲ್ಲೇ ಸಹಪಾಠಿ ಮೇಲೆ ಹಲ್ಲೆ ಮಾಡಿದ ವಿದ್ಯಾರ್ಥಿನಿಯರು

Lahore : ಪಾಕಿಸ್ತಾನದ(Pakistan) ಲಾಹೋರನ ಶಾಲೆಯೊಂದರಲ್ಲಿ ನಡೆದ ಘಟನೆ ಇದೀಗ ವಿಶ್ವದಾದ್ಯಂತ ಚರ್ಚೆಗೆ(student forcing to drugs) ಗ್ರಾಸವಾಗಿದೆ.

ಲಾಹೋರನ ಅಮೇರಿಕನ್‌ ಪಬ್ಲಿಕ್‌ ಅಂತರಾಷ್ಟ್ರೀಯ ಶಾಲೆಯಲ್ಲಿ ಮೂವರು ವಿದ್ಯಾರ್ಥಿನಿಯರು ಸೇರಿಕೊಂಡು, ಸಹಪಾಠಿ ವಿದ್ಯಾರ್ಥಿನಿಗೆ ಡ್ರಗ್ಸ್‌(Drugs) ತೆಗೆದುಕೊಳ್ಳುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ಆಗಿದೆ.

ವಿಡಿಯೋದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಸೇರಿಕೊಂಡು ಸಹಪಾಠಿ ವಿದ್ಯಾರ್ಥಿನಿಯನ್ನು ಕೆಳಗೆ ಹಾಕಿ ಇಬ್ಬರು ವಿದ್ಯಾರ್ಥಿನಿಯರು ಮೇಲೆ ಕುಳಿತು, ಕೂದಲು ಹಿಡಿದು ಹಲ್ಲೆ ಮಾಡುತ್ತಿದ್ದಾರೆ.

ಇನ್ನೋರ್ವ ವಿದ್ಯಾರ್ಥಿನಿ ಕಾಲಿನಿಂದ ಒದ್ದು ಹಲ್ಲೆ ಮಾಡುತ್ತಿರುವುದನ್ನು ದೃಶ್ಯದಲ್ಲಿ ಕಾಣಬಹುದು. ಈ ಘಟನೆ ಇದೀಗ ಪಾಕಿಸ್ತಾನ ಸೇರಿದಂತೆ ಜಗತ್ತಿನಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ.

ಪಾಕಿಸ್ತಾನದಂತ ಇಸ್ಲಾಮಿಕ್‌(Islamic) ದೇಶದಲ್ಲಿ ಈ ರೀತಿಯ ಘಟನೆ ನಡೆದಿರುವುದು ಪಾಕಿಸ್ತಾನದಾದ್ಯಂತ ಚರ್ಚೆಗೆ ಕಾರಣವಾಗಿದೆ.

ಇನ್ನು ಪಾಕಿಸ್ತಾನದ ತೆಹ್ರಿಕ್-ಎ-ಇನ್ಸಾಪ್‌ ಪಕ್ಷದ ಸದಸ್ಯ ಮಾಹಿನ್‌ ಫೈಸಲ್‌ಈ ವಿಡಿಯೋವನ್ನು ಟ್ವೀಟರ್‌ನಲ್ಲಿ(Twitter) ಹಂಚಿಕೊಂಡಿದ್ದು, “ಇದು ಸಂಪೂರ್ಣ ಅಸಹ್ಯಕರ ಘಟನೆಯಾಗಿದೆ.

ಲಾಹೋರನ(Lahore) ಅಮೇರಿಕನ್‌ ಅಂತರಾಷ್ಟ್ರೀಯ ಶಾಲೆಯಲ್ಲಿ(American International school) ಈ ಘಟನೆ ನಡೆದಿದೆ.

ಡ್ರಗ್ಸ್‌ತೆಗೆದುಕೊಳ್ಳಲು ನಿರಾಕರಿಸಿದ ಸಹಪಾಠಿಯ ಮೇಲೆ ನಾಲ್ವರು ವಿದ್ಯಾರ್ಥಿನಿಯರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ.

ಈ ಘಟನೆ ಇಡೀ ಪಾಕಿಸ್ತಾನವೇ ತಲೆತಗ್ಗಿಸುವ ಘಟನೆಯಾಗಿದೆ. ಇದು ಸ್ವೀಕಾರ್ಹವಲ್ಲ. ಹೀಗಾಗಿ ವಿದ್ಯಾರ್ಥಿನಿಯರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಈ ನಗರದಲ್ಲಿ ಅನಗತ್ಯ ಹಾರ್ನ್ ಮಾಡಿದ್ರೆ 10,000 ರೂ. ದಂಡ..

ವಿಡಿಯೋ ಎಲ್ಲೆಡೆ ವೈರಲ್‌ ಆದ ನಂತರ, ಹಲ್ಲೆಗೊಳಗಾದ ವಿದ್ಯಾರ್ಥಿನಿಯ ತಂದೆ ಈ ಬಗ್ಗೆ ಪೊಲೀಸ್‌ಠಾಣೆಗೆ ದೂರು ನೀಡಿದ್ದು, ಹಲ್ಲೆ ನಡೆಸಿದ ನಾಲ್ವರು (student forcing to drugs) ವಿದ್ಯಾರ್ಥಿನಿಯರಲ್ಲಿ ಜನ್ನತ್‌(Jannat) ಎಂಬುವವಳು ಈಗಾಗಲೇ ಡ್ರಗ್ಸ್‌ವ್ಯಸನಿಯಾಗಿದ್ದು, ಡ್ರಗ್ಸ್‌ತೆಗೆದುಕೊಳ್ಳುವಂತೆ ನನ್ನ ಮಗಳಿಗೆ ಒತ್ತಾಯಿಸಿದ್ದಾಳೆ.

ಅದನ್ನು ನಿರಾಕರಿಸಿದ್ದಕ್ಕಾಗಿ ನನ್ನ ಮಗಳ ಮೇಲೆ ಹಲ್ಲೆ ನಡೆಸಿದ್ದಾಳೆ. ಹೀಗಾಗಿ ಈ ನಾಲ್ವರು ವಿದ್ಯಾರ್ಥಿನಿಯರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಡ್ರಗ್ಸ್‌ಹಾವಳಿ ಹೆಚ್ಚಿದೆ. ಅಫ್ಘಾನಿಸ್ತಾನದಲ್ಲಿ(Afghanistan) ತಾಲಿಬಾನ್‌(Taliban) ಆಡಳಿತ ಬಂದ ನಂತರ ಅಲ್ಲಿ ಡ್ಗಗ್ಸ್‌ ಒಂದು ಉದ್ಯಮವಾಗಿ ಬೆಳೆಯುತ್ತಿದೆ.

ಅಫ್ಘಾನಿಸ್ತಾನದಲ್ಲಿ ಬೆಳೆಯುತ್ತಿರುವ ಡ್ರಗ್ಸ್‌ಅನ್ನು ಪಾಕಿಸ್ತಾನದ ಮೂಲಕ ಜಗತ್ತಿನಾದ್ಯಂತ ಸಾಗಿಸಲಾಗುತ್ತಿದೆ. ಅದರ ಪ್ರಭಾವ ಇದೀಗ ಪಾಕಿಸ್ತಾನದ ಮೇಲೆಯೂ ಉಂಟಾಗುತ್ತಿದೆ.

Exit mobile version