ಬಾಹ್ಯಾಕಾಶದಲ್ಲಿ ಅಪಾಯದಲ್ಲಿ ಸಿಲುಕಿದ ಭಾರತ ಮೂಲದ ವಿಜ್ಞಾನಿ ಸುನಿತಾ ವಿಲಿಯಮ್ಸ್.

NASA: ಭಾರತ ಮೂಲದ ವಿಜ್ಞಾನಿ ಸುನಿತಾ ವಿಲಿಯಮ್ಸ್​ (Sunitha Williams) ಬಾಹ್ಯಾಕಾಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದು, ಗಗನನೌಕೆಯಲ್ಲಿ ತಾಂತ್ರಿಕದೋಷ ಕಂಡು ಬಂದ ಹಿನ್ನೆಲೆ ವಾಪಸ್ ಬರಲಾರದೇ ಅಲ್ಲೇ ಸಿಲುಕಿದ್ದಾರೆ. ಹಾಗಾಗಿ ನಾಸಾ ಎಮರ್ಜೆನ್ಸಿ ಮೆಸೇಜ್ ಪಾಸ್ ಮಾಡಿದೆ.

NASA

ಎಮೆರ್ಜೆನ್ಸಿ ಮೆಸೇಜ್ ಪಾಸ್!
ಭೂಮಂಡಲ ಮಾತ್ರವಲ್ಲದೇ ಬಾಹ್ಯಕಾಶದಲ್ಲೂ ಚರಿತ್ರೆ ಬರೆದಿರುವ ಸುನಿತಾ ವಿಲಿಯಮ್ಸ್ ತಮ್ಮದೇ ಚರಿತ್ರೆಯ ಮುದ್ರೆವೊತ್ತಿದ್ದ ಭಾರತ‌ ಮೂಲದ ಹೆಮ್ಮೆಯ ವಿಜ್ಞಾನಿ. ನಾಸಾದ ಈ ಗಗನಯಾತ್ರಿಗೆ ಬಾಹ್ಯಾಕಾಶದಲ್ಲಿಯೇ ಆಪತ್ತು ಎದುರಾಗಿದೆ. ಅಮೆರಿಕದ ಮೂಲದ ಬುಚ್ ವಿಲ್ಮೋರ್ (Butch Wilmore) ಜೊತೆ ಸುನಿತಾ ಅವರು ಕಳೆದ ಜೂನ್ 5 ರಂದು ಗಗನಯಾನ ಕೈಗೊಂಡಿದ್ದರು.

ಎಲ್ಲವೂ ಅಂದುಕೊಂಡಂತೆ ಹಾಗಿದಿದ್ದರೆ ಇಷ್ಟೊತ್ತಿಗಾಗಲೇ ಭೂಮಿಗೆ ವಾಪಸ್ ಆಗಬೇಕಿತ್ತು. ಆದರೆ ಗಗನನೌಕೆಯಲ್ಲಿ ತಾಂತ್ರಿಕದೋಷ ಕಂಡು ಬಂದಿದ್ದು ಇವರಿಬ್ಬರೂ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಳ್ಳಲೇ ಬೇಕಾದ ಪರಿಸ್ಥಿತಿ ಎದುರಾಗಿರುವುದರಿಂದ ನಾಸಾ ಎಮರ್ಜೆನ್ಸಿ ಮೆಸೇಜ್ (Emergency Message) ಪಾಸ್ ಮಾಡಿದೆ.

ಏನಿದು ಪ್ರಕರಣ!
ನಾಸಾ (NASA)ವು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತನ್ನ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಹಾಗೂ ಸುನೀತಾ ವಿಲಿಯಮ್ಸ್ ಅವರನ್ನು ಕಳಿಸಿತ್ತು. ಮಾನವರನ್ನ ಬಾಹ್ಯಾಕಾಶಕ್ಕೆ ಟೂರ್ ಕರೆದೊಯ್ಯೋ ಪ್ಲಾನ್​ನಲ್ಲಿರೋ ನಾಸಾ ಇದರ ಮೊದಲ ಭಾಗವಾಗಿ ಬೋಯಿಂಗ್ ಸಹಯೋಗದೊಂದಿಗೆ ಗಗನಯಾತ್ರಿಗಳನ್ನ ಕಳಿಸಿತ್ತು. ಕಕ್ಷೆಯಲ್ಲಿರುವ ಬಾಹ್ಯಾಕಾಶ ಪ್ರಯೋಗಾಲಯದಲ್ಲಿ 8 ದಿನಗಳನ್ನು ಕಳೆಯಲು ಗಗನಯಾತ್ರಿಗಳು ನಿರ್ಧರಿಸಿದ್ದರು. ಜೂನ್ (June) 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುನಿತಾ ಲ್ಯಾಂಡ್ ಆಗಿದ್ದರು. ಅಂದು ಕುಣಿದು ಕುಪ್ಪಳಿಸಿದ್ದರು ಸುನಿತಾ ವಿಲಿಯಮ್ಸ್.

ಎಲ್ಲಾ ಅಂದುಕೊಂಡಂತೆ ಆಗಿದ್ರೆ ಜೂನ್ 14 ರಂದು ಇಬ್ಬರು ಭೂಮಿಗೆ ಹಿಂದಿರುಗಬೇಕಿತ್ತು. ಆದರೆ ಅನಿರೀಕ್ಷಿತ ಆಘಾತ ಕಾದಿತ್ತು. ತಾಂತ್ರಿಕ ಸಮಸ್ಯೆ ಎದುರಾಗಿದ್ದರಿಂದ ಬಾಹ್ಯಕಾಶ ನೌಕೆಯ ಪ್ರೊಪಲ್ಷನ್​ ಸಿಸ್ಟಂ ಮತ್ತು ಸೀಲಿಯಂ ಸೋರಿಕೆಯಿಂದಾಗಿ ಕೊಂಚ ಸಮಸ್ಯೆ ಕಾಣಿಸಿಕೊಂಡಿತು. ಸದ್ಯ ಇಬ್ಬರು ಬಾಹ್ಯಾಕಾಶದಲ್ಲೇ ಉಳಿದಿದ್ದಾರೆ.

Exit mobile version