ವಿಜಯಪುರ : ವಿಪಕ್ಷ ನಾಯಕ(Opposition Leader) ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಅವರು ಸ್ವಾತಂತ್ರ್ಯ ಹೋರಾಟಗಾರ(Freedom Fighter) ವೀರ ಸಾವರ್ಕರ್(Veera Savarkar) ಕುರಿತು ನೀಡಿದ್ದ ಹೇಳಿಕೆಯ ವಿರುದ್ದ ಹೊಸ ರೀತಿಯ ಅಭಿಯಾನ ನಡೆಸಲು ವೀರ ಸಾವರ್ಕರ್ ಅಭಿಮಾನಿಗಳು ನಿರ್ಧರಿಸಿದ್ದಾರೆ.

ದೇಶಕ್ಕೆ ವೀರ ಸಾವರ್ಕರ್ ನೀಡಿದ್ದ ಕೊಡಗೆಯನ್ನು ಮನೆಮನೆಗೆ ತಲುಪಿಸುವ ಸಲುವಾಗಿ ಮುಂಬರುವ ಗಣೇಶೋತ್ಸವವನ್ನು ವೇದಿಕೆಯನ್ನಾಗಿ ಬಳಸಿಕೊಳ್ಳಲು ಸಾವರ್ಕರ್ ಅಭಿಮಾನಿಗಳು ನಿರ್ಧರಿಸಿದ್ದಾರೆ. ಅದಕ್ಕಾಗಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗಣೇಶೋತ್ಸವದ ಜೊತೆಗೆ ಸಾವರ್ಕರ್ ಉತ್ಸವ ನಡೆಸಲು ಸಿದ್ದತೆ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ : https://vijayatimes.com/prathap-simha-strikes-congress-siddaramaiah/
ಗಣೇಶೋತ್ಸವವನ್ನು ಸಾವರ್ಕರ್ ಉತ್ಸವವಾಗಿ ಆಚರಿಸುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್(Pramod Muthalik) ಹೇಳಿಕೆ ನೀಡಿದ ಬೆನ್ನಲ್ಲೇ, ಈ ಅಭಿಯಾನಕ್ಕೆ ಎಲ್ಲೆಡೆಯಿಂದ ಭಾರೀ ಬೆಂಬಲ ವ್ಯಕ್ತವಾಗಿದೆ. ಗಣೇಶೋತ್ಸವದಲ್ಲಿ ಸಾವರ್ಕರ್ ಪೋಟೋ ಇರಿಸುತ್ತೇವೆ, ಅವರ ಮೆರವಣಿಗೆ ನಡೆಸಿ, ಉತ್ಸವ ಮಾಡುತ್ತೇವೆ ಎಂದು ಅನೇಕ ಬಿಜೆಪಿ(BJP) ಮುಖಂಡರು ಕೂಡಾ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.

ಇನ್ನೊಂದೆಡೆ ವಿಜಯಪುರ(Vijayapura) ಜಿಲ್ಲೆಯಲ್ಲಿ ಗಣೇಶೋತ್ಸವನ್ನು ಸಾವರ್ಕರ್ ಉತ್ಸವವನ್ನಾಗಿ ಆಚರಿಸಲು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಿದ್ದತೆ ನಡೆಸಿದ್ದಾರೆ. ಸಾವರ್ಕರ್ ಅವರ ಸ್ವಾತಂತ್ರ್ಯ ಹೋರಾಟ, ತ್ಯಾಗ, ಬಲಿದಾನ, ಸಾವರ್ಕರ್ ಅವರು ಅಂಡಮಾನ್ ಜೈಲಿನಲ್ಲಿ ಅನುಭವಿಸಿದ ಸಂಕಷ್ಟಗಳ ವೀಡಿಯೋಗಳನ್ನು ಪ್ರಸಾರ ಮಾಡುವುದು, ಸಾವರ್ಕರ್ ಚರಿತ್ರೆಯ ಪುಸ್ತಕ,
ಸಾವರ್ಕರ್ ಕುರಿತು ನಾಟಕ ಪ್ರದರ್ಶನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಡೆಸಲು ಸಿದ್ದತೆ ನಡೆಸಲಾಗಿದೆ. ಇದೇ ಮಾದರಿಯಲ್ಲಿ ಬೆಳಗಾವಿ(Belagavi) ಜಿಲ್ಲೆಯಲ್ಲಿ ಸಾವರ್ಕರ್ ಉತ್ಸವನ್ನು ವಿಭಿನ್ನವಾಗಿ ಆಚರಿಸಲು ಸಿದ್ದತೆ ನಡೆಸಲಾಗಿದೆ. ಒಟ್ಟಾರೆಯಾಗಿ ಈ ಬಾರಿಯ ಗಣೇಶೋತ್ಸವ ವಿಭಿನ್ನವಾಗಿ ಸಾವರ್ಕರ್ ಉತ್ಸವವಾಗಿ ಬದಲಾಗಲಿದೆ.