New Delhi : ಉತ್ತರ ಪ್ರದೇಶದಲ್ಲಿ (SupremeCourt about UP encounters) 2017 ರಿಂದ ನಡೆದ 183 ಎನ್ಕೌಂಟರ್ಗಳಿಗೆ (Encounter) ಸಂಬಂಧಿಸಿದ ತನಿಖಾ ಸ್ಥಿತಿಗತಿಗಳ ಕುರಿತು ಮತ್ತು
ವಿಚಾರಣೆ ಕುರಿತು ವಿವರ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ (Supreme Court) ಸೂಚಿಸಿದೆ. ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ನೇತೃತ್ವದ ಯುಪಿ ಸರ್ಕಾರಕ್ಕೆ
ಈ ಬಗ್ಗೆ ವಿವರಗಳನ್ನು ಹೊಂದಿರುವ ವಿವರಿಸುವ ಅಫಿಡವಿಟ್ ಅನ್ನು (SupremeCourt about UP encounters) ಸಲ್ಲಿಸುವಂತೆ ನಿರ್ದೇಶಿಸಿದೆ.

ಅಷ್ಟೇ ಅಲ್ಲದೆ ಸುಪ್ರೀಂ ಕೋರ್ಟ್ ಇದೀಗ ಗ್ಯಾಂಗ್ಸ್ಟಾರ್ (Gangster) ಹಾಗೂ ರಾಜಕಾರಣಿ ಅತೀಕ್ ಅಹ್ಮದ್ (Ateek Ahmed) ಮತ್ತು ಆತನ ಸಹೋದರ ಅಶ್ರಫ್ (Ashraf) ಅವರನ್ನು
ಏಪ್ರಿಲ್ 15, 2023 ರಂದು ಪೊಲೀಸ್ ಕಸ್ಟಡಿಯಲ್ಲಿ ಇರುವಾಗಲೇ ಆಗಿದ್ದ ಸಾವಿನ ಕುರಿತು ವಿಚಾರವಣೆಯನ್ನು ಕೂಡ ಕೈಗೆತ್ತಿಕೊಂಡಿದೆ.ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದ ಆಯೋಗವನ್ನು
ಈ ಪ್ರಕರಣದ ತನಿಖೆ ನಡೆಸಲು ರಚಿಸುವುದಾಗಿ ತಿಳಿಸಿದೆ.
ಇದನ್ನೂ ಓದಿ : 1,695 ಅನಧಿಕೃತ ಶಾಲೆಗಳ ವಿರುದ್ಧ ಏಕಾಏಕಿ ಕ್ರಮದ ಬದಲು, ಹಂತ ಹಂತವಾಗಿ ಮುಚ್ಚಲು ಕ್ರಮ
ನ್ಯಾಯಮೂರ್ತಿ ಎಸ್ಆರ್ ಭಟ್(S R Bhat) ನೇತೃತ್ವದ ಪೀಠವು ಪೊಲೀಸ್ ಎನ್ಕೌಂಟರ್ಗಳು ಮತ್ತು ಕಸ್ಟಡಿ ಸಾವಿನ ಪ್ರಕರಣಗಳು ಕೇವಲ ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿಯೂ
ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಕ್ರಿಯಾತ್ಮಕ ಕಾರ್ಯವಿಧಾನವನ್ನು ತನಿಖೆಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಅಳವಡಿಸಿಕೊಳ್ಳಬೇಕೆಂದು ಅದು ಹೇಳಿದೆ.

ಎನ್ಎಚ್ಆರ್ಸಿ(NHRC) ಮಾರ್ಗಸೂಚಿಗಳ ಅನುಸರಣೆಯ ಬಗ್ಗೆ ಮತ್ತು ‘ಆರೋಪಿ ಬಗ್ಗೆ ಅಷ್ಟೇ ಅಲ್ಲದೆ ವಿಚಾರಣೆ ಹಂತಗಳ ಬಗ್ಗೆ ಕೂಡ ನಮಗೆ ಮಾಹಿತಿ ಬೇಕಿದೆ.ಈ ಘಟನೆಗಳು ಜೈಲಿನ ಗೋಡೆಯೊಳಗೆ ಏಕೆ
ಸಂಭವಿಸುತ್ತವೆ ಎಂಬುದು ನಮ್ಮ ಪ್ರಶ್ನೆಯಾಗಿದೆ’ ಎಂದು ಸುಪ್ರೀಂ (SupremeCourt about UP encounters) ಕೋರ್ಟ್ ಭಾರೀ ಕಳವಳ ವ್ಯಕ್ತಪಡಿಸಿದೆ.
ತನಿಖೆಗಳನ್ನು ಯಾವ ಆರೋಪಗಳ ಹಿನ್ನೆಲೆಯಲ್ಲಿ ನಡೆಸಲಾಗುತ್ತದೆ? ತನಿಖೆಯ ಸ್ಥಿತಿಗತಿಗಳೇನು? ಒಂದು ರಾಜ್ಯವನ್ನು ಮೀರಿ ಈ ಬೆಳವಣಿಗೆಗಳು ಏಕೆ ವಿಸ್ತರಿಸುತ್ತಿವೆ? ಎಂಬ ಎಲ್ಲಾ ಪ್ರಶ್ನೆಗಳಿಗೆ ನಮಗೆ ಉತ್ತರ ಬೇಕಿದೆ’
ಎಂದು ನ್ಯಾಯಮೂರ್ತಿ ಭಟ್ ಹೇಳಿದ್ದಾರೆ.
ಇದನ್ನೂ ಓದಿ : ಕೊಟ್ಟ ಮಾತಿನಂತೆ ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇವೆ : ಸಿಎಂ ಸಿದ್ದರಾಮಯ್ಯ
‘ನಮ್ಮಲ್ಲಿ ವಿಶೇಷ ತನಿಖಾ ತಂಡಗಳು (SIT) ಮತ್ತು ಆಯೋಗಗಳು ಇವೆ.ಹಾಗೂ ಪಿಯುಸಿಎಲ್(PUCL) ಮಾರ್ಗಸೂಚಿಗಳು ಕೂಡ ನಮ್ಮ ವಿಲೇವಾರಿಯಲ್ಲಿವೆ.ಆದರೆ ಹಲವಾರು ಪ್ರಕರಣಗಳು ಈ ರೀತಿಯಲ್ಲಿ
ಕಂಡುಬರುತ್ತಿವೆ. ಪೂರ್ವನಿಯೋಜಿತ ಕಾರ್ಯಯೋಜನೆ ಇದರ ಹಿನ್ನೆಲೆಯಲ್ಲಿ ಇದೆಯೇ? ಹೇಗೆ ಈ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ? ಇಂತಹ ಘಟನೆಗಳು ಬೇರೆ ರಾಜ್ಯಗಳಲ್ಲೂ ಏಕೆ ನಡೆಯುತ್ತಿವೆ. ಹೇಗೆ
ಇವುಗಳನ್ನು ನಿಭಾಯಿಸಲಾಗುತ್ತದೆ’ ಎಂದು ಅವರು ಕೇಳಿದ್ದಾರೆ. ಎಸ್ಐಟಿ ಮತ್ತು ತನಿಖಾ ಆಯೋಗಗಳ ರಚನೆಯ ಬಗ್ಗೆ ನ್ಯಾಯಾಲಯಕ್ಕೆ ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸುವ ಹಿರಿಯ ವಕೀಲ ಮುಕುಲ್
ರೋಹಟಗಿ ಅವರು ತಿಳಿಸಿದರು. ಈ ಕುರಿತಾಗಿ ತ್ವರಿತವಾಗಿ ಪ್ರತಿಕ್ರಿಯೆಗಳನ್ನು ರಾಜ್ಯ ಸರ್ಕಾರವು ನೀಡುತ್ತ ಬಂದಿದೆ ಎಂದು ಅವರು ಹೇಳಿದರು.
‘
ಎರಡು ಆಯೋಗಗಳನ್ನು ಸ್ಥಾಪಿಸಲಾಗಿದೆ. ಒಂದು ರಾಜೀವ್ ಲೋಚನ್ (Rajiv Lochan) ನೇತೃತ್ವದಲ್ಲಿವೆ, ಇನ್ನೊಂದು ನ್ಯಾಯಮೂರ್ತಿ ಭೋನ್ಸಾಲೆ(Bhonsale) ನೇತೃತ್ವದಲ್ಲಿವೆ.ವಿಭಿನ್ನ ತೀರ್ಮಾನಗಳನ್ನು
ಈ ಪ್ರತ್ಯೇಕ ವಿಚಾರಣಾ ಆಯೋಗಗಳು ನೀಡಬಹುದು. ಪ್ರಕರಣದ ದಿಕ್ಕನ್ನು ಇದು ಬದಲಿಸಬಹುದು’ ಎಂದು ಅತೀಕ್ ಅಹ್ಮದ್ ಅವರ ಸಹೋದರಿಯನ್ನು ಪ್ರತಿನಿಧಿಸುವ ಹಿರಿಯ ವಕೀಲ ಸಿದ್ಧಾರ್ಥ ದವೆ
(Siddartha Dawe) ಅವರು ವಾದಿಸಿದ್ದಾರೆ.
ರಶ್ಮಿತಾ ಅನೀಶ್