ರಾಹುಲ್ ಗಾಂಧಿಗೆ ಎರಡು ವರ್ಷಗಳ ಜೈಲು ಶಿಕ್ಷೆ! ಪ್ರಧಾನಿ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕರಣ

New Delhi : ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕುರಿತು ಅವಹೇಳನ ಮಾಡಿದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನ್ಯಾಯಾಲಯವು 2 ವರ್ಷ ಜೈಲು (Surat court punish Rahul) ಶಿಕ್ಷೆಯನ್ನು ವಿಧಿಸಿದೆ.


ನ್ಯಾಯಾಲಯವು ಶಿಕ್ಷೆ ವಿಧಿಸಿದ ನಂತರ, ರಾಹುಲ್ ಗಾಂಧಿ ಅವರ ವಕೀಲರ ತಂಡವು ರಾಹುಲ್ ಗಾಂಧಿ (Rahul Gandhi) ಅವರಿಗೆ ಜಾಮೀನು ಅರ್ಜಿಯನ್ನು ಸಲ್ಲಿಸಿದೆ.

2019 ರ ಲೋಕಸಭಾ ಚುನಾವಣೆಗೆ ಮುನ್ನ ಕರ್ನಾಟಕದ ಕೋಲಾರದಲ್ಲಿ ಪ್ರಚಾರ ಮಾಡುವಾಗ ಗಾಂಧಿ ವಂಶಸ್ಥರು ಈ ಹೇಳಿಕೆಯನ್ನು ನೀಡಿದ್ದರು.

ನನಗೆ ಒಂದು ಪ್ರಶ್ನೆ ಇದೆ. ನೀರವ್ ಮೋದಿ(Nirav Modi), ಲಲಿತ್ ಮೋದಿ ಅಥವಾ ನರೇಂದ್ರ ಮೋದಿಯೇ ಆಗಿರಲಿ, ಎಲ್ಲಾ ಕಳ್ಳರ ಹೆಸರಿನಲ್ಲಿ ಮೋದಿ ಏಕೆ ಇದೆ?

ಅಂತಹ ಇನ್ನೂ ಎಷ್ಟು ಮೋದಿಗಳು ಹೊರಬರುತ್ತಾರೆ ಎಂದು ನಮಗೆ ತಿಳಿದಿಲ್ಲ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದರು.

ಗುರುವಾರ ನ್ಯಾಯಾಲಯದಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ನಾನು ಯಾವಾಗಲೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದೇನೆ,

ನನ್ನ ಉದ್ದೇಶ ಎಂದಿಗೂ ತಪ್ಪಾಗಿಲ್ಲ ಅಥವಾ ಯಾರನ್ನೂ ನೋಯಿಸುವುದಿಲ್ಲ ಎಂದು ಹೇಳಿದರು.

https://youtu.be/nwOa7VwaAWc

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್(Criminal) ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ಜಿಲ್ಲಾ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ನಂತರ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.


ಚುನಾವಣೆ ಎಫೆಕ್ಟ್‌?
: ದೇಶದಲ್ಲಿ ಮತ್ತೊಂದು ಪ್ರಮುಖ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿರಲಿದೆ.

ದಕ್ಷಿಣ ಭಾರತದ ಹೆಬ್ಬಾಗಿಲು ಅಂತನೇ ಕರೆಸಿಕೊಳ್ಳುವ ಕರ್ನಾಟಕ ರಾಜ್ಯದ ಗದ್ದುಗೆ ಏರಲು ಪ್ರಮುಖ ಪಕ್ಷಗಳು ಗುದ್ದಾಟ ನಡೆಸಲಿವೆ. ಈ ಚುನಾವಣೆ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ(BJP) ಮತ್ತು ಕಾಂಗ್ರೆಸ್‌ಗೆ (Congress) ಪ್ರತಿಷ್ಠೆಯ ಚುನಾವಣೆಯಾಗಲಿದೆ.

ಹಾಗಾಗಿ ಇಲ್ಲಿ ತಮ್ಮ ಪ್ರಾಬಲ್ಯ ಮೆರೆಯಲು ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್‌ ಭಾರೀ ಕಸರತ್ತು ಮಾಡುತ್ತಿವೆ. ಅದರಲ್ಲೂ ಕೇಂದ್ರ ಹಾಗೂ ರಾಜ್ಯದಲ್ಲಿ (Surat court punish Rahul) ಅಧಿಕಾರದಲ್ಲಿರುವ ಬಿಜೆಪಿ ಹೇಗಾದ್ರೂ ಮಾಡಿ ಅಧಿಕಾರ ಉಳಿಸಲು ಇನ್ನಿಲ್ಲದ ಪ್ರಯತ್ನದಲ್ಲಿ ತೊಡಗಿದೆ.

ಮೇ 24ಕ್ಕೇ ಕರ್ನಾಟಕ ಸರ್ಕಾರದ ಅವಧಿ ಮುಗಿಯಲಿದೆ, ಹಾಗಾಗಿ ಇನ್ನೆರಡು ತಿಂಗಳೊಳಗೆ ಚುನಾವಣೆ ನಡೆದು ಹೊಸ ಸರ್ಕಾರ ಅಧಿಕಾರಕ್ಕೆ ಬರಬೇಕು.
ಅಧಿಕಾರದ ಗದ್ದುಗೆಗೇರಲು ಬಿಜೆಪಿ ಈಡಿ, ಸಿಬಿಐ, ಚುನಾವಣಾ ಆಯೋಗವನ್ನೂ ದುರ್ಬಳಕೆ ಮಾಡುತ್ತಿದೆ ಅನ್ನೋ ಆರೋಪ ಪ್ರತಿಪಕ್ಷಗಳು.

Exit mobile version