ಗೋಮಾಂಸ ಸಾಗಾಟ ಶಂಕೆ: ವ್ಯಕ್ತಿಯೋರ್ವನನ್ನು ಥಳಿಸಿ ಹತ್ಯೆಗೈದ ಬಿಹಾರ ಮೂಲದ ಗುಂಪು

Patna: ಮತ್ತೆ ಗೋಮಾಂಸಕ್ಕಾಗಿ ಮನುಷ್ಯರ ಪ್ರಾಣವನ್ನೇ ಹರಣ ಮಾಡಿರುವ ಭೀಕರ ಘಟನೆ ಬಿಹಾರದಲ್ಲಿ(Bihar) ಮಾರ್ಚ್ 9ರಂದು ಸಂಭವಿಸಿದೆ. ಬಿಹಾರ ಮೂಲದ ವ್ಯಕ್ತಿಯೋರ್ವನು ಅಕ್ರಮವಾಗಿ ಗೋಮಾಂಸ ಸಾಗಟ (Suspect beef smuggling in Bihar) ಮಾಡುತ್ತಿದ್ದ

ಅನ್ನೋ ಶಂಕೆಯ ಮೇರೆಗೆ ಅಲ್ಲಿನ ಗ್ರಾಮಸ್ಥರ ಗುಂಪೊಂದು ಆತನನ್ನು ಥಳಿಸಿ ಹತ್ಯೆಗೈದು ತದನಂತರ ಪೊಲೀಸರಿಗೆ ಒಪ್ಪಿಸಿದ ಘಟನೆ ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿದೆ.

ಮೃತ ಪಟ್ಟ ವ್ಯಕ್ತಿಯನ್ನು ನಶೀಮ್ ಖುರೇಶಿ ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಕಾರ್ಯಚರಣೆ ನಡೆಸಿ,

ಒಟ್ಟು ಮೂವರನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ. ನಶೀಮ್ ಖುರೇಶಿ ಎಂಬಾತ ನೆರೆಯ ಸಿವಾನ್ ಜಿಲ್ಲೆಯ ಹಸನ್ ಪುರ ಪೊಲೀಸ್ ಠಾಣ ವ್ಯಾಪ್ತಿಯ ನಗರ ನಿವಾಸಿ (Suspect beef smuggling in Bihar) ಎಂದು ತಿಳಿದು ಬಂದಿದೆ.


ಮಾರ್ಚ್ 8 ಹೋಳಿ ಹಬ್ಬದ ದಿನದಂದು ಖುರೇಶಿ ಹಾಗೂ ಅವನ ಸಹೋದರರ ಜೊತೆಗೆ ಸಿವಾನ್ ಬಳಿ ಇರುವ ರಸೂಲ್ ಪುರದ ಮೂಲಕ ಜೋಗಿಯಾ ಗ್ರಾಮಕ್ಕೆ ತೆರಳುತ್ತಿದ್ದ

ಸಂದರ್ಭದಲ್ಲಿ ಬ್ಯಾಗನಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂದು ಶಂಕಿಸಿ ಅಲ್ಲಿಯ ಗ್ರಾಮಸ್ಥರ ಗುಂಪೊಂದು ಅವರನ್ನು ತಡೆದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : https://vijayatimes.com/kacha-badam-copy-right/

ಗ್ರಾಮಸ್ಥರು ಗೋಮಾಂಸವನ್ನು ತೋರಿಸುವಂತೆ ಆಗ್ರಹಿಸಿದ್ದಾರೆ. ಆದರೆ ಅವರು ಬ್ಯಾಗ್ ತೋರಿಸಲು ನಿರಾಕರಿಸಿದಾಗ ಗ್ರಾಮಸ್ಥರು ಅವರ ಮೇಲೆ ಬಿದಿರಿನ ಬೆತ್ತ ಹಾಗೂ ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತರ ಕುಟುಂಬ ಆರೋಪಿಸಿದೆ.

ಗೋಮಾಂಸ ಸಾಗಾಟದ ಶಂಕೆಯಲ್ಲಿ ವ್ಯಕ್ತಿಯೋರ್ವನನ್ನು 12ಕ್ಕೂ ಅಧಿಕ ಗ್ರಾಮಸ್ಥರ ಗುಂಪೊಂದು ಥಳಿಸಿ ಹತ್ಯೆಗೈದಿದೆ.

ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ರಸೂಲ್‌ಪುರ (Rasulpur) ಪೊಲೀಸ್ ಠಾಣೆಯ ಮೇಲ್ವಿಚಾರಣಾ ಅಧಿಕಾರಿ ಆರ್.ಸಿ.ತಿವಾರಿ (RC Tiwari) ಅವರು ತಿಳಿಸಿದ್ದಾರೆ.

ಈ ಹಿಂದೆ ಉತ್ತರ ಪ್ರದೇಶದಲ್ಲಿ ಇದೇ ರೀತಿಯ ಘಟನೆ ನಡೆದು ಅದು ಇಡೀ ದೇಶದಲ್ಲೇ ಸುದ್ದಿ ಮಾಡಿತ್ತು. ಇತ್ತೀಚೆಗೆ ಗೋಸಾಗಾಟದ ಶಂಕೆಯಲ್ಲಿ ರಾಜಸ್ಥಾನದಲ್ಲಿ ಇಬ್ಬರನ್ನು ಸಜೀವವಾಗಿ ದಹಿಸಲಾಗಿತ್ತು.

ಇದನ್ನೂ ಓದಿ : https://vijayatimes.com/pratibha-outrage-against-muniswamy/

ಇತ್ತೀಚೆಗೆ ಗೋಮಾಂಸ, ಗೋಸಾಗಾಟದ ಹೆಸರಲ್ಲಿ ಮನುಷ್ಯರನ್ನು ಕೊಲ್ಲುವ ಘಟನೆಗಳು ಹೆಚ್ಚುತ್ತಿದ್ದು ಇದು ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡುತ್ತಿದೆ.

ಗೋ ರಕ್ಷಣೆಯ ಹೆಸರಲ್ಲಿ, ಗೋ ರಕ್ಷಕರಂತೆ ಬಿಂಬಿಸಿಕೊಂಡ ಕೆಲವರು ಕಾನೂನನ್ನು ತಮ್ಮ ಕೈಗೆತ್ತಿಕೊಂಡು ಮನುಷ್ಯರನ್ನು ಕೊಲ್ಲುತ್ತಿರುವುದು ನಿಜವಾಗ್ಲೂ ಆತಂಕಕಾರಿ ವಿಚಾರವಾಗಿದೆ.

ಈ ಬಗ್ಗೆ ಪೊಲೀಸರು ಪ್ರಾಮಾಣಿಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕಾಗಿದೆ.

Exit mobile version