ಬೇಸಿಗೆಯಲ್ಲಿ ಅತಿಯಾಗಿ ಬೆವರುತ್ತಿದೆಯೇ? ಹಾಗಾದರೆ ಈ 5 ಸಲಹೆಗಳನ್ನು ಅನುಸರಿಸಿ

Health : ಬೇಸಿಗೆ ಕಾಲ (summer time) ಅಂದ್ರೆ ಬೆವರು ಸಾಮಾನ್ಯ. ಬಿಸಿಲ ಬೇಗೆಗೆ ಮೈಯೆಲ್ಲಾ ಬೆವತು ಹೋಗುತ್ತೆ. ಬೇಸಿಗೆ ಕಾಲದಲ್ಲಿ ದೇಹ ದಣಿಯುವುದರ ಜೊತೆಗೆ ಬೆವರುವುದು (Sweating profusely in summer) ಹೆಚ್ಚಿರುತ್ತದೆ,ಇದು ವಾಸನೆ ಮತ್ತು ಅಹಿತಕರ ಸಂಗತಿಯಾಗಿದೆ. ದೇಹದ ಬೆವರಿನ ವಾಸನೆ ಮುಜುಗರ ಉಂಟು ಮಾಡಬಹುದು.

ಆದರೆ ಈ ಬೇಸಿಗೆಯಲ್ಲಿ ಸ್ವಲ್ಪ ಕಡಿಮೆ ಬೆವರಲು ಕೆಲವೊಂದು ಕೆಲವೊಂದು ಮಾರ್ಗಗಳಿವೆ.

ನಮಗೆ ಕಿರಿಕಿರಿ ಉಂಟು ಮಾಡುವ ಅತಿಯಾದ ಬೆವರುವಿಕೆಯನ್ನು ನಿಭಾಯಿಸಲು ಕೆಲವೊಂದು ಸೂಕ್ತ ಸಲಹೆಗಳನ್ನು ಅನುಸರಿಸಬಹುದು.

ತಂಪು ಪಾನೀಯಗಳನ್ನು ಸೇವಿಸಲು,ತಾಜಾ ಹಣ್ಣುಗಳನ್ನು ತಿನ್ನಲು ,

ಐಸ್‌ ಕ್ಯಾಂಡಿಗಳನ್ನು ಸವಿಯಲು ಬೇಸಿಗೆ ಕಾಲವು ಸೂಕ್ತವಾದ ಸಮಯವಾಗಿದೆ.

ಬೇಸಿಗೆ ಕಾಲದಲ್ಲಿ ಸೂರ್ಯನ ಶಾಖದಿಂದ ದೇಹವು ಹೆಚ್ಚಾಗಿ ದಣಿಯುವುದರಿಂದ ಇಂತಹ ಸಮಯದಲ್ಲಿ ಈ ಆಹಾರಗಳು (Sweating profusely in summer) ಹೆಚ್ಚು ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ : https://vijayatimes.com/ipl2023-rcb-vs-dc/


ಅತಿಯಾದ ಬೆವರುವಿಕೆಯನ್ನು ತಡೆಯಲು 5 ಸಲಹೆಗಳು ಇಲ್ಲಿವೆ:

  1. ದ್ರವ ಆಹಾರವನ್ನು ಹೆಚ್ಚು ಸೇವಿಸಿ :

ಬೇಸಿಗೆ ಕಾಲದಲ್ಲಿ ಅತಿ ಹೆಚ್ಚು ಬೆವರುವುದರಿಂದ ನಿಮ್ಮ ದೇಹವು ಕಳೆದುಕೊಳ್ಳುವ ನೀರನ್ನು ಸರಿದೂಗಿಸಲು ಅತಿ ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸಬೇಕೆಂದು ಯಾವಾಗಲೂ ಸಲಹೆ ನೀಡಲಾಗುತ್ತದೆ.

ಕೇವಲ ನೀರನ್ನು ಕುಡಿಯಬೇಕಾಗಿಲ್ಲ, ಶರಬತ್‌, ಜ್ಯೂಸ್‌, ತಂಪು ಪಾನೀಯಗಳು, ಮಜ್ಜಿಗೆ ಅನ್ನು ಕೂಡ ಸೇವಿಸಬಹುದು. ಇದರಿಂದ ನಿರ್ಜಲೀಕರಣವನ್ನು ತಡೆಯಬಹುದು ,ಜೊತೆಗೆ ದೇಹವನ್ನು ತಂಪಾಗಿರಿಸುತ್ತದೆ.

  1. ಮಸಾಲೆಯುಕ್ತ ಆಹಾರಗಳನ್ನು ಸೇವಿಸಿ :

    ಬೇಸಿಗೆ ಕಾಲದಲ್ಲಿ ಆದಷ್ಟು ನಿಮ್ಮ ಆಹಾರದಲ್ಲಿ ಮಸಾಲೆಯನ್ನು ಕಡಿಮೆ ಮಾಡಲು ಪ್ರಯತ್ಸಿಸಿ ಹಾಗೂ ಹೆಚ್ಚುವರಿ ಹಸಿರು ಮೆಣಸಿನಕಾಯಿಗಳನ್ನು ಸೇರಿಸುವುದನ್ನು ತಪ್ಪಿಸಬಹುದು.
  2. ಯಾಕೆಂದರೆ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ನಿಮ್ಮ ದೇಹವು ಬೇರೆ ಯಾವುದೇ ತರಹದ ಶಾಖಕ್ಕೆ ಪ್ರತಿಕ್ರಿಯಿಸುವ ರೀತಿಯಲ್ಲಿಯೇ ಬೆವರುವಿಕೆಗೆ ಕಾರಣವಾಗುತ್ತದೆ

    ಇದನ್ನೂ ಓದಿ : https://vijayatimes.com/tweets-of-state-congress/
  3. ಹಿತ-ಮಿತವಾಗಿ ಕಾಫಿ ಸೇರಿಸಿ :

    ಇಂದಿನ ದಿನಗಳಲ್ಲಿ ಅನೆಕ ಜನರಿಗೆ ದಿನ ಬೆಳಗಾಗುವುದರಿಂದ ಸಂಜೆಯವರೆಗೂ ಕಾಫೀ ಅಥವಾ ಟೀ ಅತ್ಯಗತ್ಯವಾಗಿದೆ.
  4. ಆದರೆ ಇದನ್ನು ಮಿತವಾಗಿ ಸೇವಿಸುವುದು ಮುಖ್ಯವಾಗಿದೆ. ಕಾಫಿಯಲ್ಲಿರುವ ಕೆಫಿನ್‌ ಮೂತ್ರಜನಕಾಂಗದ (Adrenal gland) ಗ್ರಂಥಿಗಳನ್ನು ಉತ್ತೇಜಿಸುವುದರಿಂದ ನಮ್ಮ ಪಾದಗಳು,ಅಂಗೈಗಳು, ಮತ್ತು ಕಂಕುಳಲ್ಲಿ ಬೆವರುವಂತೆ ಮಾಡುತ್ತದೆ ಎಂದು ಪೌಷ್ಟಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
  5. ಒತ್ತಡದಿಂದ ದೂರವಿರಿ :

    ಇಂದಿನ ಜೀವನಶೈಲಿಯಲ್ಲಿ ಒತ್ತಡ ಮುಕ್ತ ಜೀವನ ಯಾರಿಗಿಲ್ಲ …ಆದರೆ ಆತಂಕ ಅಥವಾ ಒತ್ತಡಕ್ಕೆ ಒಳಗಾದಾಗ ಇದು ಬೆವರು ಗ್ರಂಥಿಗಳನ್ನು ಪ್ರಚೋದಿಸುವ ಮೂಲಕ ನಿಮ್ಮ ದೇಹವನ್ನು ಹೆಚ್ಚು ಬೆವರುವಂತೆ ಮಾಡುತ್ತದೆ. ಆದರಿಂದ ನಿಮ್ಮ ಮನಸನ್ನು ಶಾಂತವಾಗಿರಿಸಲು ಸಲಹೆ ನೀಡಲಾಗುತ್ತದೆ.
  6. ಆಂಟಿಪೆರ್ಸ್ಪಿರಂಟ್‌ (Antiperspirantss) ಅನ್ನು ಬಳಸಿ :

    ಇಂದು ಮಾರ್ಕೆಟ್‌ನಲ್ಲಿ ಹಲವು ರೀತಿಯ ಆಂಟಿಪೆರ್ಸ್ಪಿರಂಟ್‌ಗಳು (Antiperspirant) ಸಿಗುತ್ತವೆ. ಆಂಟಿಪೆರ್ಸ್ಪಿರಂಟ್‌ಗಳಲ್ಲಿನ ಸಕ್ರಿಯ ಪದಾರ್ಥಗಳು ಸಾಮಾನ್ಯವಾಗಿ ಅಲ್ಯೂಮಿನಿಯಂ ಆಧಾರಿತ ಸಂಯುಕ್ತಗಳನ್ನು ಒಳಗೊಂಡಿರುತ್ತವೆ, ಅದು ತಾತ್ಕಾಲಿಕವಾಗಿ ಬೆವರು ರಂಧ್ರಗಳನ್ನು ನಿರ್ಬಂಧಿಸುತ್ತದೆ. ಬೆವರು ರಂಧ್ರಗಳನ್ನು ತಡೆಯುವುದರಿಂದ ನಿಮ್ಮ ಚರ್ಮವನ್ನು ತಲುಪುವ ಬೆವರಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
Exit mobile version