ಅರಬ್ ರಾಷ್ಟ್ರಕ್ಕೆ ಟಿ20 ವಿಶ್ವಕಪ್ ಸ್ಥಳಾಂತರ: ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ನಡೆಯುವ ಪಂದ್ಯಾವಳಿ

ಹೊಸದಿಲ್ಲಿ,ಜೂ26: ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಯುನೈಟೆಟ್ ಅರಬ್ ಎಮಿರೇಟ್ಸ್ (ಯುಎಇ)ಗೆ ಸ್ಥಳಾಂತರವಾಗಿದೆ.

ಟಿ20 ವಿಶ್ವಕಪ್ ಕೂಟವು ಅಕ್ಟೋಬರ್ 17ರಂದು ಆರಂಭವಾಗಲಿದ್ದು, ನವೆಂಬರ್ 14ರಂದು ಫೈನಲ್ ಪಂದ್ಯ ನಡೆಯಲಿದೆ. ಭಾರತದಲ್ಲಿ ಕೋವಿಡ್ 19 ಸೋಂಕಿನ ಸಂಕಟ ಇನ್ನೂ ಕಡಿಮೆಯಾಗದ ಕಾರಣ ಬಿಸಿಸಿಐ ದೇಶದ ಹೊರಗಡೆ ಕೂಟವನ್ನು ನಡೆಸಲು ತೀರ್ಮಾನಿಸಿದೆ.

ಈಗಾಗಲೇ ಕೊರೊನಾದಿಂದಾಗಿ ಅರ್ಧಕ್ಕೆ ನಿಂತಿರುವ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ಮುಂದುವರಿಸಲು ಬಿಸಿಸಿಐ ನಿರ್ಧರಿಸಿದ್ದು, ಸಪ್ಟೆಂಬರ್ 19ರಿಂದ ಅಕ್ಟೋಬರ್ 15ರವರೆಗೆ ಐಪಿಎಲ್ ನಡೆಯಲಿದೆ. ಹೀಗಾಗಿ ಆಟಗಾರರ ಹಾಗೂ ತಂಡಗಳ ಹಿತದೃಷ್ಠಿಯಿಂದ ಯುಎಇನಲ್ಲೇ ಟಿ20 ವಿಶ್ವಕಪ್ ಟೂರ್ನಿಯನ್ನು ನಡೆಸಲು ತೀರ್ಮಾನಿಸಿದ್ದು, ಯುಎಇ ನಲ್ಲಿ ನಡೆಯುವ ವಿಶ್ವಕಪ್ ಟೂರ್ನಿಯ ಆಯೋಜಕರಾಗಿ ಬಿಸಿಸಿಐ ಉಸ್ತುವಾರಿ ವಹಿಸಿಕೊಳ್ಳಲಿದೆ.

Exit mobile version