
ರಾಜ್ಯದಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್, ದೇಶದ ಮಹಾನಗರ ಪೈಕಿ ಎರಡನೇ ಸ್ಥಾನದಲ್ಲಿ ಬೆಂಗಳೂರು
ಕಿದ್ವಾಯಿ ಮೆಮೋರಿಯನ್ ಇನ್‌ಸ್ಟಿಟ್ಟಯೂಟ್ ಆಫ್ ಆಂಕಾಲಜಿ ನಿರ್ದೇಶಕ ಡಾ. ಸಿ. ರಾಮಚಂದ್ರನ್ ಅವರು ಹೇಳುವಂತೆ ಕಿದ್ವಾಯಿಯಲ್ಲಿ ಪ್ರತಿ ವರ್ಷ ಸುಮಾರು 800 ಸ್ತನ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತವೆ. ‘ಸ್ತನ ಕ್ಯಾನ್ಸರ್ ರೋಗಿಗಳಲ್ಲಿ ಶೇ50ಕ್ಕಿಂತ ಹೆಚ್ಚು ರೋಗಿಗಳು ಮೂರನೇ ಅಥವಾ ನಾಲ್ಕನೇ ಹಂತದ ರೋಗಲಕ್ಷಣದೊಂದಿಗೆ ಬರುತ್ತಿದ್ದಾರೆ. ಇದು ಕಾಳಜಿ ವಹಿಸಬೇಕಾದ ವಿಷಯವಾಗಿದೆ. ಆರಂಭಿಕ ಹಂತದಲ್ಲಿ ಪತ್ತೆಯಾದಲ್ಲಿ ಆ ಕ್ಯಾನ್ಸರ್ ಅನ್ನು ಗುಣಪಡಿಸುವ ಅವಕಾಶವು ಶೇ 90ರಷ್ಟಿರುತ್ತದೆ.