ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿಯೂ ಕೂಡಾ ಸ್ತನ ಕ್ಯಾನ್ಸರ್ಗೆ (causes of breast cancer) ತುತ್ತಾಗುತ್ತಿರುವವರ ಸಂಖ್ಯೆ ದಿನದಿಂದ ಹೆಚ್ಚುತ್ತಿದೆ. ವರದಿಗಳ ಪ್ರಕಾರ ಪ್ರತಿ ಎಂಟು ಮಹಿಳೆಯರಲ್ಲಿ

ಒರ್ವ ಮಹಿಳೆ ತನ್ನ ಜೀವಿತಾವಧಿಯಲ್ಲಿ ಸ್ತನ ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾಳೆ ಎಂಬ ಆಘಾತಕಾರಿ (causes of breast cancer) ಅಂಶವು ಬೆಳಕಿಗೆ ಬಂದಿದೆ.
ಇನ್ನು ಭಾರತದ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಇರುವ ಮೂಡನಂಭಿಕೆ ಹಾಗೂ ತಿಳುವಳಿಕೆ ಕೊರತೆ ಕೂಡಾ ಸ್ತನ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವಾಗಿದೆ.
ಸಾಕಷ್ಟು ಮಹಿಳೆಯರು ಕೊನೆಯ ಹಂತದಲ್ಲಿ ಸ್ತನ ಕ್ಯಾನ್ಸರ್ ಬೆಳಕಿಗೆ ಬಂದು ಸಾವಿಗೆ ಕಾರಣರಾಗುತ್ತಿದ್ದಾರೆ. ಹೀಗಾಗಿ ಸ್ತನ ಕ್ಯಾನ್ಸರ್ ಅನ್ನು ನಿರ್ಲಕ್ಷ್ಯ ಮಾಡದೇ ಆರಂಭದಲ್ಲಿ ಅದಕ್ಕೆ ಸೂಕ್ತ
ಇದನ್ನು ಓದಿ: ಯುಐಡಿಎಐ ಎಚ್ಚರಿಕೆ ! ಆಧಾರ್ ಅಪ್ಡೇಟ್ ಮಾಡಲು ಇಮೇಲ್, ವಾಟ್ಸಾಪ್ನಲ್ಲಿ ದಾಖಲೆ ಕಳುಹಿಸದಿರಿ
ಚಿಕಿತ್ಸೆ ಪಡೆಯಬೇಕಿದೆ. ಇನ್ನು ಬೆಂಗಳೂರಿನ ಮಹಿಳೆಯರಲ್ಲಿ ಕೊರೊನಾಕ್ಕೂ ಮೊದಲು ವರ್ಷಕ್ಕೆ 700 ರಿಂದ 750 ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಿತ್ತು. ಆದರೆ ಈ ವರ್ಷ ಜನವರಿಯಿಂದ
ಇಲ್ಲಿಯವರೆಗೆ 1012 ಸ್ತನ ಕ್ಯಾನ್ಸರ್ ಕೇಸ್ಗಳು ಕಾಣಿಸಿಕೊಂಡಿದೆ. ಅದರಲ್ಲೂ ಹೆಚ್ಚಾಗಿ ಮಧ್ಯವಯಸ್ಸಿನ ಮಹಿಳೆಯರು ಇದಕ್ಕೆ ಬಲಿಯಾಗುತ್ತಿದ್ದಾರೆ.
ಸ್ತನ ಕ್ಯಾನ್ಸರ್ಗೆ ಮುಖ್ಯ ಕಾರಣಗಳೇನು..?
• ಸಂತಾನೋತ್ಪತ್ತಿ ಅಂಶಗಳು ಮತ್ತು ಗರ್ಭನಿರೋಧಕ ಬಳಕೆ
• ಹಾರ್ಮೋನು (Hormone) ಬದಲಾವಣೆಯ ಚಿಕಿತ್ಸೆ
• ಬೊಜ್ಜು ಮತ್ತು ತೂಕ ಹೆಚ್ಚಾಗುವುದು
• ಹೆಚ್ಚಿನ ಕ್ಯಾಲೋರಿ (Calorie) ಸೇವನೆ
• ಆಧುನಿಕ ಜೀವನ ಶೈಲಿ ಹಾಗೂ ಡಯಟ್ ಪ್ಲಾನ್(Diet Plan)
• ಮಹಿಳೆಯರಲ್ಲಿ ಹೆಚ್ಚಾದ ಮದ್ಯಪಾನ ಹಾಗೂ ಧೂಮಪಾನ
• ಬೇಗನೇ ಋತುಸ್ರಾವ ಮತ್ತು ತಡವಾದ ಋತುಬಂಧ

ಸ್ತನ ಕ್ಯಾನ್ಸರ್ನ ಆರಂಭಿಕ ಲಕ್ಷಣಗಳು
• ಒಂದು ಅಥವಾ ಎರಡೂ ಸ್ತನಗಳಲ್ಲಿ ಊತ
• ಎದೆ ಹಾಲು ಹೊರತುಪಡಿಸಿ ನಿಪ್ಪಲ್ ಡಿಸ್ಚಾರ್ಜ್ (Nipple Discharge)
• ಸ್ತನದ ಮೇಲೆ ಅಥವಾ ಒಳಗೆ ಗಂಟುಗಳು ಕಾಣಿಸಿಕೊಳ್ಳುವುದು.
• ಸ್ತನಗಳು ಕೆಂಪಾಗುವುದು ಮತ್ತು ದಪ್ಪವಾಗುವುದು.
• ಸ್ತನಗಳಲ್ಲಿ ಆಗಾಗ ಅಸಾಮಾನ್ಯ ನೋವು ಕಾಣಿಸಿಕೊಳ್ಳುವುದು
• ಸ್ತನಗಳ ಗಾತ್ರ ಅಥವಾ ಆಕಾರದಲ್ಲಿ ಬದಲಾವಣೆ
• ಒಂದು ಅಥವಾ ಎರಡೂ ಮೊಲೆತೊಟ್ಟುಗಳ ಹಿಂತೆಗೆದುಕೊಳ್ಳುವಿಕೆ
ಸ್ತನ ಕ್ಯಾನ್ಸರ್ಗೆ ಚಿಕಿತ್ಸೆ ಹೇಗೆ..?
- ಸ್ತನದ ಅಂಗಾಂಶಗಳಲ್ಲಿ ಮರುಕಳಿಸುವ ಅಪಾಯವನ್ನು ಕಡಿಮೆ ಮಾಡಲು ವಿಕಿರಣ ಚಿಕಿತ್ಸೆ
- ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಹಾರ್ಮೋನ್ ಚಿಕಿತ್ಸೆ
- ಕೀಮೋಥೆರಪಿ ಅಥವಾ ಸ್ತನ ಗೆಡ್ಡೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ