ಅಫ್ಗಾನಿಸ್ತಾನದಲ್ಲಿ ಸ್ವಾತಂತ್ರ್ಯ ದಿನ ಆಚರಿಸಿದ ತಾಲಿಬಾನಿಗಳು

ಕಾಬೂಲ್: ’ಅಮೆರಿಕದಂತಹ ವಿಶ್ವದ ಅಹಂಕಾರಿ ಶಕ್ತಿಯ ವಿರುದ್ಧ ಜಯಸಾಧಿಸಿದ್ದೇವೆ’ ಎಂದು ಘೋಷಿಸಿಕೊಂಡಿರುವ ತಾಲಿಬಾನ್‌, ಗುರುವಾರ ಈ ಗೆಲುವನ್ನು ‘ಅಫ್ಗಾನಿಸ್ತಾನದ ಸ್ವಾತಂತ್ರ್ಯ ದಿನ‘ವನ್ನಾಗಿ ಆಚರಿಸಿದೆ.

ಗುರುವಾರ ಅಫ್ಗಾನಿಸ್ತಾನದ ಸ್ವಾತಂತ್ರ್ಯ ದಿನವೂ ಹೌದು. ಇದು ಮಧ್ಯ ಏಷ್ಯಾ ರಾಷ್ಟ್ರಗಳಲ್ಲಿ ಬ್ರಿಟಿಷ್ ಆಡಳಿತವನ್ನು ಕೊನೆಗೊಳಿಸಿದ 1919ರ ಒಪ್ಪಂದದ ದಿನವಾಗಿದೆ. ಕಾಬೂಲ್‌ ಸೇರಿದಂತೆ ಹಲವೆಡೆ ನಾಗರಿಕರು ರಾಷ್ಟ್ರಧ್ವಜ ಪ್ರದರ್ಶಿಸಿ ಸ್ವಾತಂತ್ರ್ಯೋತ್ಸವ ದಿನವನ್ನು ಆಚರಿಸಿದ್ದಾರೆ.

‘ಅದೃಷ್ಟವಷಾತ್‌, ಇಂದು ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ದಿನವಾಗಿದೆ. ಇದೇ ಸಂದರ್ಭದಲ್ಲಿ ಜಗತ್ತಿನ ಅಹಂಕಾರಿ ಶಕ್ತಿಯನ್ನು ಸೋಲಿಸಿ ನಮ್ಮ ಪವಿತ್ರ ಪ್ರದೇಶವಾದ ಅಫ್ಗಾನಿಸ್ತಾನದಿಂದ ಹಿಮ್ಮೆಟ್ಟಿಸಿದ್ದೇವೆ’ ಎಂದು ತಾಲಿಬಾನ್‌ ಹೇಳಿದೆ.

ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ತಾಲಿಬಾನಿಗಳು ಈವರೆಗೆ ‘ತಾವು ಶರಿಯತ್‌ ಅಥವಾ ಇಸ್ಲಾಮಿಕ್ ಕಾನೂನಿನ ಚೌಕಟ್ಟಿನಲ್ಲಿ ಸರ್ಕಾರ ನಡೆಸುತ್ತೇವೆ‘ ಎಂದು ಹೇಳಿರುವುದನ್ನು ಹೊರತುಪಡಿಸಿದರೆ, ಸರ್ಕಾರ ಮುನ್ನಡೆಸಲು ಯಾವುದೇ ಯೋಜನೆಗಳನ್ನು ಪ್ರಕಟಿಸಿಲ್ಲ. ಆದರೆ, ಸರ್ಕಾರ ರಚನೆ ಮೇಲೆ ಒತ್ತಡ ಹೆಚ್ಚುತ್ತಲೇ ಇದೆ.

Exit mobile version