ತಮಿಳುನಾಡು: ಬಿಜೆಪಿ ಜಿಲ್ಲಾ ಘಟಕಗಳ ಅಧ್ಯಕ್ಷರಿಗೆ ಇನ್ನೋವಾ ಕಾರು ಉಡುಗೊರೆ

ಚೆನ್ನೈ, ಆ. 23: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸುವ ಜಿಲ್ಲಾ ಘಟಕಗಳ ಅಧ್ಯಕ್ಷರಿಗೆ ಐಷಾರಾಮಿ ಎಸ್‌ಯುವಿಗಳನ್ನು ಉಡುಗೊರೆಯಾಗಿ ನೀಡುವುದಾಗಿ ನೀಡಿದ್ದ ಭರವಸೆಯನ್ನು ಬಿಜೆಪಿ ಈಡೇರಿಸಿದೆ.

ಕೊಯಮತ್ತೂರು, ಈರೋಡ್‌, ತಿರುನೆಲ್ವೇಲಿ ಹಾಗೂ ಕನ್ಯಾಕುಮಾರಿ ಜಿಲ್ಲೆಗಳ ತಲಾ ಒಂದು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಕ್ರಮವಾಗಿ ಈ ಜಿಲ್ಲಾ ಘಟಕಗಳ ಅಧ್ಯಕ್ಷರಾದ ನಂದಕುಮಾರ್‌, ಶಿವಸುಬ್ರಮಣಿಯನ್‌, ಮಹಾರಾಜನ್‌ ಹಾಗೂ ಧರ್ಮರಾಜ್‌ ಅವರಿಗೆ ಇನ್ನೋವಾ ಕ್ರಿಸ್ಟಾ ಎಸ್‌ಯುವಿಗಳನ್ನು ನೀಡಲಾಗಿದೆ.

ಕೇಂದ್ರ ಮೀನುಗಾರಿಕೆ, ಹೈನುಗಾರಿಕೆ ಹಾಗೂ ಪಶುಸಂಗೋಪನೆ ಖಾತೆ ರಾಜ್ಯ ಸಚಿವ ಎಲ್‌.ಮುರುಗನ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಈ ಕಾರುಗಳನ್ನು ಹಸ್ತಾಂತರಿಸಿದರು.

Exit mobile version